ಜೋಗಿ ಬರೆದ ಕವಿತೆ: ಕಾಡಿ ಬರೆಸಿದ ಅವಳಿಗೆ

Posted on July 18, 2009. Filed under: ಬಾ ಕವಿತಾ |

XXL_JaiZharotia-L-559207583

ಸೀತಾಮಾತೆ

ಲಕ್ಷ್ಮಣರೇಖೆ

ದಾಟಿದರೆ

ಖಾತ್ರಿ ಅಶೋಕವನ

ಲಂಕಾದಹನ ಸೇತುಬಂಧನ.

ರಾವಣನೇ

ದಾಟಿದ್ದರೆ ಏನಾಗುತ್ತಿತ್ತೇ ಗೆಳತಿ.

ಹಾ.. ಲಕ್ಷ್ಮಣ ಎಂಬ ಉದ್ಗಾರ ಶೂನ್ಯ.

ಪ್ರೇಮದ ಉತ್ಕಟತೆಯಲ್ಲಿ ರಾವಣ

ದಾಟಿದ ಕಾಲಲ್ಲೇ ಉರಿದುರಿದು

ಸುಗ್ರೀವನಿಗೆ ಸಿಗುತ್ತಿರಲಿಲ್ಲ ತಾರೆ.

ಕುಂಭಕರ್ಣನಿಗೆ ನಿದ್ದೆ ನಿರ್ವಿಘ್ನ.

ಅರಗಿನ ಮನೆಯಿಂದ

ಹೊರಬಿದ್ದರೆ ಹಿಡಿಂಬವನ

ಏಕಚಕ್ರನಗರಿ ಬಕಾಸುರ ವಧೆ.

ನಡುವೆ ಹಿಡಿಂಬೆಯ ಜೊತೆ ಸರಸ.

ಕೊನೆಯಲ್ಲಿ ಸಿಕ್ಕವಳು ಪಾಂಚಾಲಿ.

ಕರ್ಣನ ಕರ್ಣಕಠೋರ ನಿರ್ಧಾರದಲ್ಲಿ

ಪಾಂಚಾಲಿಗೆ ಐವರೇ ಗತಿ.

ದ್ರೌಪದಿಯ ಸಂಗವಾದರೂ ಬಲಭೀಮ

ಸಿಕ್ಕಾಪಟ್ಟೆ ಸಂತ.

ರಸಿಕ ಅರ್ಜುನನಿಗೆ ಸದಾ ನವವಸಂತ.

ಸಾವು ಅವಳ ಸಂಗದಲ್ಲಿದೆ ಎಂದು

ಗೊತ್ತಿದ್ದೂ

ಪಾಂಡು ನಿರುದ್ವಿಗ್ನ.

ಸಂಗಮದಲ್ಲಿ ಮಹಾಸಂಗಮ.

ಗಂಡನ ಚಿತೆಯೆದುರು ತಾಯಹಂಬಲದ

ಮಾದ್ರಿ.

ಮತ್ತದೇ ಶ್ಲೋಕ: ಮಾ ನಿಷಾಧ.

ಬೇಡ.. ಬೇಡ..

ಮಿಲನಕ್ಕೆ ಹಾರೈಸುವ ಮೈಮನಗಳಿಗೆ

ಸಣ್ಣದೊಂದು ಎಚ್ಚರಿಕೆ.

ಮಾಡು ಇಲ್ಲವೆ ಮಡಿ.

ಮಾಡಿ ಮಡಿವವರ ನುಡಿ.

ಮಾಡೂ ಸಿಗದೇ ಗೂಡೂ ಸಿಗದೆ

ಸಂತರ ಸಂತತಿಗೆ

ನಿರಾತಂಕ

ಗುಡಿ.

ನಾನು ನೀನೆಂಬುದು

ಬೇರಲ್ಲ ಕಾಣಿರೋ.

ತಾಯಿ

ಬೇರು.

Make a Comment

Make a Comment: ( 1 so far )

blockquote and a tags work here.

One Response to “ಜೋಗಿ ಬರೆದ ಕವಿತೆ: ಕಾಡಿ ಬರೆಸಿದ ಅವಳಿಗೆ”

RSS Feed for ಅವಧಿ Comments RSS Feed

ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಾರ್…..” ಇಂತಹ ಒಳನೋಟಗಳ ಜೊತೆಗಿನ ಆಟ ಜೋಗಿಯದ್ದೇ ದಿಟ ” ನಿಜಕ್ಕೂ ಕಾಡಿ ಬರೆಸಿದಂತಿದೆ…….! ಇಷ್ಟವಾಯಿತು……
- ಸಂತೋಷ್ ಅನಂತಪುರ


Where's The Comment Form?

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • Flickr Photos

    pa sa art

    sketch12

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    July 2009
    M T W T F S S
    « Jun   Aug »
     12345
    6789101112
    13141516171819
    20212223242526
    2728293031  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...