Archive for July 18th, 2009
ಜೋಗಿ ಬರೆದ ಕವಿತೆ: ಕಾಡಿ ಬರೆಸಿದ ಅವಳಿಗೆ
ಸೀತಾಮಾತೆ
ಲಕ್ಷ್ಮಣರೇಖೆ
ದಾಟಿದರೆ
ಖಾತ್ರಿ ಅಶೋಕವನ
ಲಂಕಾದಹನ ಸೇತುಬಂಧನ.
ರಾವಣನೇ
ದಾಟಿದ್ದರೆ ಏನಾಗುತ್ತಿತ್ತೇ ಗೆಳತಿ.
ಹಾ.. ಲಕ್ಷ್ಮಣ ಎಂಬ ಉದ್ಗಾರ ಶೂನ್ಯ.
ಪ್ರೇಮದ ಉತ್ಕಟತೆಯಲ್ಲಿ ರಾವಣ
ದಾಟಿದ ಕಾಲಲ್ಲೇ ಉರಿದುರಿದು
ಸುಗ್ರೀವನಿಗೆ ಸಿಗುತ್ತಿರಲಿಲ್ಲ ತಾರೆ.
ಕುಂಭಕರ್ಣನಿಗೆ ನಿದ್ದೆ ನಿರ್ವಿಘ್ನ.
ಅರಗಿನ ಮನೆಯಿಂದ
ಹೊರಬಿದ್ದರೆ ಹಿಡಿಂಬವನ
ಏಕಚಕ್ರನಗರಿ ಬಕಾಸುರ ವಧೆ.
ನಡುವೆ ಹಿಡಿಂಬೆಯ ಜೊತೆ ಸರಸ.
ಕೊನೆಯಲ್ಲಿ ಸಿಕ್ಕವಳು ಪಾಂಚಾಲಿ.
ಕರ್ಣನ ಕರ್ಣಕಠೋರ ನಿರ್ಧಾರದಲ್ಲಿ
ಪಾಂಚಾಲಿಗೆ ಐವರೇ ಗತಿ.
ದ್ರೌಪದಿಯ ಸಂಗವಾದರೂ ಬಲಭೀಮ
ಸಿಕ್ಕಾಪಟ್ಟೆ ಸಂತ.
ರಸಿಕ ಅರ್ಜುನನಿಗೆ ಸದಾ ನವವಸಂತ.
ಸಾವು ಅವಳ ಸಂಗದಲ್ಲಿದೆ ಎಂದು
ಗೊತ್ತಿದ್ದೂ
ಪಾಂಡು ನಿರುದ್ವಿಗ್ನ.
ಸಂಗಮದಲ್ಲಿ ಮಹಾಸಂಗಮ.
ಗಂಡನ ಚಿತೆಯೆದುರು ತಾಯಹಂಬಲದ
ಮಾದ್ರಿ.
ಮತ್ತದೇ ಶ್ಲೋಕ: ಮಾ ನಿಷಾಧ.
ಬೇಡ.. ಬೇಡ..
ಮಿಲನಕ್ಕೆ ಹಾರೈಸುವ ಮೈಮನಗಳಿಗೆ
ಸಣ್ಣದೊಂದು ಎಚ್ಚರಿಕೆ.
ಮಾಡು ಇಲ್ಲವೆ ಮಡಿ.
ಮಾಡಿ ಮಡಿವವರ ನುಡಿ.
ಮಾಡೂ ಸಿಗದೇ [...]
ಸರಹದ್ದುಗಳ ಆಚೆ ಈಚೆ
ಬಿ ಎನ್ ಸುಮಿತ್ರಾಬಾಯಿ ಅವರ ‘ಸರಹದ್ದುಗಳ ಆಚೆ- ಈಚೆ’ ಕೃತಿಯ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿ ಜರುಗಿತು. ಇಳಾ ಪ್ರಕಾಶನ ಪುಸ್ತಕವನ್ನು ಪ್ರಕಟಿಸಿದ್ದಾರೆ. ಯು ಆರ್ ಅನಂತಮೂರ್ತಿ, ಎಂ ಎಚ್ ಕೃಷ್ಣಯ್ಯ, ವನಮಾಲಾ ವಿಶ್ವನಾಥ್, ಬಿ ಎನ್ ಸುಮಿತ್ರಾ ಬಾಯಿ ಅವರು ಕಾರ್ಯಕ್ರಮದಲ್ಲಿದ್ದರು.
ಸೀತಾ ಕೋಟೆ ವೈದೇಹಿ ಅವರ ‘ಅಲೆಗಳಲ್ಲಿ ಅಂತರಂಗ’ ಏಕವ್ಯಕ್ತಿ ಪ್ರದರ್ಶನ ನಡೆಸಿಕೊಟ್ಟರು.
ಚಿತ್ರಗಳು: ಡಿ ಬಿ ವಿನಯಕುಮಾರ್
ಚಿತ್ರಗಳು: ಡಿ ಬಿ ವಿನಯಕುಮಾರ್
Read Full Post | Make a Comment ( None so far )‘ಮೀಡಿಯಾ ಮಿರ್ಚಿ’ ಸುತ್ತ
‘ವಿಜಯ ಕರ್ನಾಟಕ’ದಲ್ಲಿ ‘ಮೀಡಿಯಾ ಮಿರ್ಚಿ’ ಅಂಕಣ ಆರಂಭವಾಗಿದೆ.
ಈ ಅಂಕಣದ ಸುತ್ತಮುತ ನಡೆದಿರುವ ಚರ್ಚೆ, ಸಲಹೆ, ಪ್ರೀತಿಗೆ ಭೇಟಿ ಕೊಡಿ- ಮೀಡಿಯಾ ಮಿರ್ಚಿ


