ಜೋಗಿ Recommends

ನನಗೆ ಸಂಸ್ಕೃತ ಪದಗಳ ಅರ್ಥ ಗೊತ್ತಾಗದೇ ಹೋದಾಗ, ಯಾವುದೋ ಸಂಸ್ಕೃತ ಶ್ಲೋಕ ಮರೆತುಹೋದಾಗ, ಮತ್ಯಾವುದೋ ಪದಗಳ ವ್ಯುತ್ಪತ್ತಿ ಬೇಕಾದಾಗ ನೆನಪಾಗುವ ಚೆಂದದ ಹುಡುಗ ಮಹಾಬಲ ಸೀತಾಳಭಾವಿ. ಸಂಸ್ಕೃತದ ಆಳವಾದ ಅಧ್ಯಯನ, ಸಾಹಿತ್ಯದ ಗಾಢ ಪ್ರೀತಿಯನ್ನಿಟ್ಟುಕೊಂಡು ಪತ್ರಿಕೋದ್ಯಮದ ಕಡಲಲ್ಲಿ ಹುಟ್ಟು ಹಾಕುತ್ತಿರುವ ಮಹಾಬಲನೊಳಗೊಬ್ಬ ತುಂಟನಿದ್ದಾನೆ. ಪದಗಳನ್ನು ಮುರಿದು ಕಟ್ಟುವ ಪನ್ ಗಿಂತ ಭಿನ್ನವಾದ, ಅವವೇ ಪದಗಳನ್ನು ಬಳಸಿ ಮತ್ತೇನನ್ನೋ ಹೇಳಲು ಹೊರಡುವ ಮಹಾಬಲನಪದ ವೈವಿಧ್ಯದ ಬಗ್ಗೆ ನನಗೆ ಅಪಾರ ಕುತೂಹಲ.
ತನ್ನೊಳಗಿನ ಹುಡುಕಾಟವನ್ನೇ ಮುಂದಿಟ್ಟುಕೊಂಡು ಒಂದಷ್ಟು ಕತೆಗಳನ್ನೂ ಬರೆದಿರುವ ಮಹಾಬಲ, ಇದೀಗ ಆಂಟನ್ ಚೆಕಾಫ್ ಕತೆಗಳನ್ನು ಅನುವಾದಿಸಿದ್ದಾನೆ.
ಡಾಕ್ಟರಿಕೆ ನನ್ನ ಹೆಂಡತಿ, ಸಾಹಿತ್ಯ ಉಪಪತ್ನಿ. ಒಬ್ಬಳು ಬೋರು ಹೊಡೆಸಿದಾಗ ಇನ್ನೊಬ್ಬಳಲ್ಲಿ ಹೋಗ್ತೆನೆ ಎಂದ ಚೆಕಾಫ್ , ಸಣ್ಣ ಕತೆಗಳ ಸ್ವರೂಪವನ್ನು ಬದಲಾಯಿಸಿದವನು. ಅವನ ನಾಟಕಗಳನ್ನು ಕೇಳಿ ಬಲ್ಲವರಿಗೆ, ಅವನ ಕತೆಗಳೂ ಮೆಚ್ಚುಗೆಯಾಗುತ್ತವೆ.
ಪತ್ರಿಕೆಗಳ ಗಾತ್ರಕ್ಕೆ ತಕ್ಕ ಕತೆಗಳನ್ನು ಬರೆದೂ ತನ್ನ ಕಸಬುಗಾರಿಕೆ, ಆಶಯಗಳನ್ನು ಉಳಿಸಿಕೊಂಡ ಚೆಕಾಫ್ ಹೀಗೆ, ಮಹಾಬಲನಂಥ ಅಕ್ಷರ ಮೋಹಿತರ ಮೂಲಕ ಕನ್ನಡಕ್ಕೆ ಬರುತ್ತಿರುವುದು ಖುಷಿ. -ಜೋಗಿ



ಜೋಗಿ ಅವರೇ ಧನ್ಯವಾದಗಳು
ಗೆಳೆಯನ ಬಗ್ಗೆ ನಿಮ್ಮ ಈ ಪರಿಚಯ ನನ್ನಂತವನಿಗೆ ಖಂಡಿತ ಖುಷಿ ಕೊಟ್ಟಿದೆ.
Agnihothri
July 13, 2009
Thank you jogi….
kharidisi oduve….
PRAKASH HEGDE
July 11, 2009