Archive for July 11th, 2009
ಜೋಗಿ Recommends
ನನಗೆ ಸಂಸ್ಕೃತ ಪದಗಳ ಅರ್ಥ ಗೊತ್ತಾಗದೇ ಹೋದಾಗ, ಯಾವುದೋ ಸಂಸ್ಕೃತ ಶ್ಲೋಕ ಮರೆತುಹೋದಾಗ, ಮತ್ಯಾವುದೋ ಪದಗಳ ವ್ಯುತ್ಪತ್ತಿ ಬೇಕಾದಾಗ ನೆನಪಾಗುವ ಚೆಂದದ ಹುಡುಗ ಮಹಾಬಲ ಸೀತಾಳಭಾವಿ. ಸಂಸ್ಕೃತದ ಆಳವಾದ ಅಧ್ಯಯನ, ಸಾಹಿತ್ಯದ ಗಾಢ ಪ್ರೀತಿಯನ್ನಿಟ್ಟುಕೊಂಡು ಪತ್ರಿಕೋದ್ಯಮದ ಕಡಲಲ್ಲಿ ಹುಟ್ಟು ಹಾಕುತ್ತಿರುವ ಮಹಾಬಲನೊಳಗೊಬ್ಬ ತುಂಟನಿದ್ದಾನೆ. ಪದಗಳನ್ನು ಮುರಿದು ಕಟ್ಟುವ ಪನ್ ಗಿಂತ ಭಿನ್ನವಾದ, ಅವವೇ ಪದಗಳನ್ನು ಬಳಸಿ ಮತ್ತೇನನ್ನೋ ಹೇಳಲು ಹೊರಡುವ ಮಹಾಬಲನಪದ ವೈವಿಧ್ಯದ ಬಗ್ಗೆ ನನಗೆ ಅಪಾರ ಕುತೂಹಲ.
ತನ್ನೊಳಗಿನ ಹುಡುಕಾಟವನ್ನೇ ಮುಂದಿಟ್ಟುಕೊಂಡು ಒಂದಷ್ಟು ಕತೆಗಳನ್ನೂ ಬರೆದಿರುವ ಮಹಾಬಲ, ಇದೀಗ ಆಂಟನ್ ಚೆಕಾಫ್ ಕತೆಗಳನ್ನು ಅನುವಾದಿಸಿದ್ದಾನೆ.
ಡಾಕ್ಟರಿಕೆ ನನ್ನ ಹೆಂಡತಿ, ಸಾಹಿತ್ಯ ಉಪಪತ್ನಿ. ಒಬ್ಬಳು ಬೋರು ಹೊಡೆಸಿದಾಗ [...]
ಮಾಹಿತಿ ಹಕ್ಕುಗಳ ಕಾಯಿದೆ
ಸಾಹಿತ್ಯ ಸಂಘ, ದೆಹಲಿ- ಕರ್ನಾಟಕ ಸಂಘ
ಪರಿಸರ ಹೋರಾಟಗಾರ ಶ್ರೀ ಅಡ್ದೂರ್ ಕೃಷ್ಣ ರಾವ್
ಅವರಿಂದ
ಮಾಹಿತಿ ಹಕ್ಕುಗಳ ಕಾಯಿದೆಯ ಬಗ್ಗೆ
ವಿಶೇಷ ಉಪನ್ಯಾಸ
ಶ್ರೀ ಶಿವರಾಮ ಪೈಲೂರ್
ಕಾರ್ಯಕ್ರಮ ನಿರ್ದೇಶಕರು, ದೆಹಲಿ ಆಕಾಶವಾಣಿ
ಅವರು ಭಾಗವಹಿಸಿದ್ದಾರೆ
ದಿನಾಂಕ ೧೧.೭. ೨೦೦೯, ಸಾಯಂಕಾಲ ಗಂಟೆ ೫.೩೦ ಕ್ಕೆ, ಸಂಘದ ಆವರಣದಲ್ಲಿ
ಎಲ್ಲರಿಗೂ ಸ್ವಾಗತ
ಆರ್ ರೇಣುಕುಮಾರ್, ಸಿ ವಿ ಗೋಪಿನಾಥ್







