ಮೊದಲೀಗೆ ಅಲ್ಲಮ ಪ್ರಭುವೀಗೆ ಶರಣಾರ್ಥಿ..
ಕಾವ್ಯ ಮತ್ತು ರಂಗಾಸಕ್ತರು ಸೇರಿ ರೂಪಿಸಿಕೊಂಡ ಒಂದು ಆತ್ಮೀಯ ಬಳಗವೇ -ಕಾವ್ಯ ಭೂಮಿ. ಕವಿ ಕಲಾವಿದ ಕೃಷ್ಣ ರಾಯಚೂರು ಅವರ ಕನಸಿನ ಕೂಸು.
ಇನ್ನು ಮುಂದೆ ತಿಂಗಳಿಗೊಮ್ಮೆ ಈ ಬಳಗ ಕಾವ್ಯದ ಜೊತೆ ಅನುಸಂಧಾನ ನಡೆಸಲಿದೆ. ಮೊದಲ ಅನುಸಂಧಾನವನ್ನು ಕಾವ್ಯದ ಗುರು ಕಿ ರಂ ನಾಗರಾಜ್ ಅವರು ನಡೆಸಿಕೊಟ್ಟರು ಅಲ್ಲಮನ ಕವಿತೆಯ ಮೂಲಕ ಹೊಸ ಜಗತ್ತನ್ನು ಬಿಚ್ಚಿಟ್ಟರು.










