Archive for July 10th, 2009

ಮೊದಲೀಗೆ ಅಲ್ಲಮ ಪ್ರಭುವೀಗೆ ಶರಣಾರ್ಥಿ..

Posted on July 10, 2009. Filed under: ಝೂಮ್, ಬಾ ಕವಿತಾ |

ಕಾವ್ಯ ಮತ್ತು ರಂಗಾಸಕ್ತರು ಸೇರಿ ರೂಪಿಸಿಕೊಂಡ ಒಂದು ಆತ್ಮೀಯ ಬಳಗವೇ -ಕಾವ್ಯ ಭೂಮಿ. ಕವಿ ಕಲಾವಿದ ಕೃಷ್ಣ ರಾಯಚೂರು ಅವರ ಕನಸಿನ ಕೂಸು.
ಇನ್ನು ಮುಂದೆ ತಿಂಗಳಿಗೊಮ್ಮೆ ಈ ಬಳಗ ಕಾವ್ಯದ ಜೊತೆ ಅನುಸಂಧಾನ ನಡೆಸಲಿದೆ. ಮೊದಲ ಅನುಸಂಧಾನವನ್ನು ಕಾವ್ಯದ ಗುರು ಕಿ ರಂ ನಾಗರಾಜ್ ಅವರು ನಡೆಸಿಕೊಟ್ಟರು ಅಲ್ಲಮನ ಕವಿತೆಯ ಮೂಲಕ ಹೊಸ ಜಗತ್ತನ್ನು ಬಿಚ್ಚಿಟ್ಟರು.

Read Full Post | Make a Comment ( None so far )

ಫೋಟೋ ಕೇಳ್ತಾರೆ ಹುಷಾರ್!

Posted on July 10, 2009. Filed under: ಬ್ಲಾಗ್ ಮಂಡಲ |

ನೀವೇನಂತೀರೀ?
-ಅಸೀಮಾ

ಇವತ್ತು ಬೆಳಗಿನ್ ಪ್ರೇಯರ್ ಮುಗ್ಸಿ ಏಳೋ ಮೊದ್ಲು “ಯಾಕಿನ್ನೂ ಸುಮ್ಮನಿದ್ದೀ? ಏನಾದ್ರೂ ಮಾಡು” ಅಂತಂದಂಗಾಯ್ತು. ನನ್ನವನನ್ನ ಆಫೀಸಿಗೆ ಕಳ್ಸಿ ಬರೀಲೇಬೇಕಂತ ಡಿಸೈಡ್ ಮಾಡ್ದೆ.
ಆ ಮನುಷ್ಯ, ಅವ್ನ್ ಧರ್ಮದೋಳು ಅನ್ನೋ ಕಾರಣಕ್ಕೇ ಅಷ್ಟು ಸದರ ತಗೊಳ್ಳೋದಾ? ಸರೀನಾ? ಅವ್ನೇನ್ ಮಹಾ ಅಂದ್ಕೊಂಡಿದಾನಾ? ಅವಂದೊಂದ್ ಬ್ಲಾಗಿದೆ. ಅವ್ನ್ ಕತೇಗ್ ಪ್ರಶಸ್ತಿ ಬಂದಿದೆ. ಈಗೊಂದ್ ವರ್ಷದಿಂದ ಒಂದ್ ಪೋರ್ಟಲ್ ನಡ್ಸ್‍ತಿದಾನೆ. ಚೆನಾಗೇ ಬರ್ತಿದೆ. ಹಾಗಂತ ಅವ್ನ್ ಬರವಣಿಗೆ ಮೆಚ್ಚಿದ ಹುಡ್ಗೀಗೆ ಹೀಗ್ ಮಾಡೋದ? ಮೆಚ್ಚುಗೆ ಹೇಳೋ ಹಾಗೂ ಇಲ್ವಾ?
ಅವ್ನ ಬ್ಲಾಗ್ ನೋಡ್ತಿದ್ದೆ, [...]

Read Full Post | Make a Comment ( 9 so far )

ಷೋಡಶಿ, ಪುರುಷನಿಗಾಗಿ ಹಸಿದವಳು

Posted on July 10, 2009. Filed under: ಬಾ ಕವಿತಾ, ಬ್ಲಾಗ್ ಮಂಡಲ |

-ಮಾಯಾ ಏಂಜೆಲೊ
ಅನುವಾದ : ಹನಿ
ಪಾನಿಪೂರಿ

ನಾನು ತರುಣಿಯಾಗಿದ್ದಾಗ
ಪರದೆಯ ಹಿಂದೆ ನಿಂತು ನೋಡುತ್ತಿದ್ದೆ.
ಗಂಡಸರು ಬೀದಿಯ ತುದಿಯಿಂದ ತುದಿಗೆ
ಅಡ್ಡಾಡುತ್ತಿದ್ದರು. ಹುಡುಗರು, ಮುದುಕರು.
ಸಾಸಿವೆಯಂತೆ ಚುರುಕಾದ ತರುಣರು.
ನೋಡಿ ಬೇಕಾದರೆ, ಗಂಡಸರು ಯಾವಾಗಲೂ
ಎಲ್ಲಿಗೋ ಹೋಗುತ್ತಿರುತ್ತಾರೆ.
ನಾನಲ್ಲಿ ಇದ್ದೇನೆಂದು ಅವರಿಗೆ ಗೊತ್ತಿತ್ತು.
ಷೋಡಶಿ, ಪುರುಷನಿಗಾಗಿ ಹಸಿದವಳು
ನನ್ನ ಕಿಟಕಿಯ ಕೆಳಗೆ ಅವರ ನಿಟ್ಟುಸಿರು
ಯುವತಿಯ ಸ್ತನಗಳಂತೆ ಚೂಪೆದ್ದ ಅವರ ಭುಜಗಳು
ಪೃಷ್ಠಗಳ ಮೇಲೆ ಬಡಿದುಕೊಳ್ಳುವ ಮೇಲಂಗಿಯ
ತುದಿಗಳು, ಗಂಡಸರು.

ಒಂದು ದಿನ ಅವರು ಕೈ ಗರಿಗಳ ಚಾಚಿ ನಿಮ್ಮ ಹಿಡಿಯುವರು
ಈ ಜಗದ ಕೊಟ್ಟ ಕೊನೆಯ ಒಡೆಯದ ತತ್ತಿಯೋ ಎಂಬಂತೆ.
ಬಳಿಕ ಬಿಗಿಯುವರು, ಕೊಂಚ.
ಮೊದಲ ಹಿಂಡುವಿಕೆ ಹಿತ. ತಟ್ಟನೆ ಒಂದಪ್ಪುಗೆ.
ರಕ್ಷಣೆಯಿಲ್ಲದ [...]

Read Full Post | Make a Comment ( 2 so far )

ಒಂದಾನೊಂದು ಕಾಲದಾಗ

Posted on July 10, 2009. Filed under: ಝೂಮ್ |

ಜಯಂತ ಕಾಯ್ಕಿಣಿ

Read Full Post | Make a Comment ( 3 so far )

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • Flickr Photos

    pa sa art

    sketch12

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    July 2009
    M T W T F S S
    « Jun   Aug »
     12345
    6789101112
    13141516171819
    20212223242526
    2728293031  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...