Archive for July 9th, 2009
ಜೈ ಹೋ ಕನ್ನಡ ಬ್ಲಾಗರ್ಸ್!
ಕನ್ನಡ ಬ್ಲಾಗರ್ಸ್ ಗೆ ಭೇಟಿ ಕೊಡಿ, ಮಜಾ ನೋಡಿ-
ಚಿತ್ರ: ಜಿ ಎಸ್ ನಾಗನಾಥ್
ಕ್ಯಾಲೊಫೋರ್ನಿಯಾ or ಬಾಂಬೆ
ಎಬಿಸಿಡಿ ಮತ್ತು ಎನ್ನಾರೈ
-ಗುರುಪ್ರಸಾದ್ ಕಾಗಿನೆಲೆ
ಸಮಶೀತೋಷ್ಣ
೧. ಆತ ಅಮೆರಿಕಾದಲ್ಲಿಯೇ ಹುಟ್ಟಿದ್ದು ಮತ್ತು ಬೆಳೆದಿರುವುದು, ಹುಟ್ಟಿದಂದಿನಿಂದ ಭಾರತಕ್ಕೆ ಬಂದಿಲ್ಲ. ಅಜ್ಜಿ ಕೂಡ ಅಮೆರಿಕಾದಲ್ಲಿ ಇವನ ಕುಟುಂಬದ ಜತೆಗೇ ಇದ್ದಾಳೆ. ಆಕೆಗೆ ಮಾರಣಾಂತಿಕ ಕಾಯಿಲೆ. ಆದರೆ, ಅವಳು ಅಮೆರಿಕಾದಲ್ಲಿ ಸಾಯಲು ಸಿದ್ಧಳಿಲ್ಲ. ಅವಳನ್ನು ಮತ್ತೆ ವಾಪಸ್ಸು ಭಾರತಕ್ಕೆ ಬಿಟ್ಟುರುವ ನೆವದಲ್ಲಿ ಭಾರತಕ್ಕೆ ಹೋಗುತ್ತಾನೆ. ಅಲ್ಲಿ ಆತ ಬಂದಿಳಿಯುವುದು ದೆಹಲಿ-೬ (ಚಾಂದನೀ ಚೌಕ)ಕ್ಕೆ. ಅಲ್ಲಿ ಆತ ‘ಚಾಳ್’ ನ ಜನಗಳ ಸಂಬಂಧ, ಪ್ರೀತಿ, ದ್ವೇಷ, ರಗಳೆಗಳನ್ನು ನೋಡಿ ಪುಳಕಗೊಳ್ಳುತ್ತಾನೆ. ಅವರ ಮುಗ್ಧತೆ [...]
ಮಣಿಕಾಂತ್ ಬರೆಯುತ್ತಾರೆ: ಅಳ್ಳಿ ಅಲ್ಲಮ್ಮ..ಹಳ್ಳಿ ಹಳ್ಳಿ..
ಎ ಆರ್ ಮಣಿಕಾಂತ್
ಚಿತ್ರ: ಬಿಳೀಹೆಂಡ್ತಿ
ಗೀತೆ ರಚನೆ: ವಿಜಯನಾರಸಿಂಹ
ಗಾಯನ: ಕಸ್ತೂರಿ ಶಂಕರ್, ವಾಣಿ ಜಯರಾಂ
ಸಂಗೀತ: ವಿಜಯಭಾಸ್ಕರ್
ರಂಗೇನಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟು
ರಂಗಾದ ರಂಗೇಗೌಡ ಮೆರೆದಿದ್ದ
ರಂಗೇನಹಳ್ಳಿಯಾಗೆ ಸಿಂಗಾರಿ ಸೀತೆ ಹಂಗೆ
ಬಂಗಾರಿ ರಂಗಿ ಮೈ ಅರಳಿತ್ತು //ಪ//
ನಕ್ಕಾ ನಕ್ಷತ್ರಾದಂಥಾ ಚೊಕ್ಕಾದ ರಂಗೀನ್ ಕಂಡಾ
ತಕ್ಕಾದ ಹೆಂಡ್ತಿ ಅಂದ ರಂಗೇಗೌಡ
ತನಗೆ ತಕ್ಕಾದ ಹೆಂಡ್ತಿ ಅಂದ ರಂಗೇಗೌಡ
ರಂಗೀಯ ಕೈಯ ಮ್ಯಾಗೆ ರಂಗ ಭಾಷೆಯ ಕೊಟ್ಟ
ಸಂಗಾತಿ ನೀನೆ ಅಂತ ಆಣೆ ಇಟ್ಟ
ಬಾಳ ಸಂಗಾತಿ ನೀನೆ ಅಂತ ಆಣೆ ಇಟ್ಟ //1//
ಭಾರೀ ಹಡ್ಗಾನೇರಿ ದೂರಾ ದೇಸಾಸುತ್ತಿ
ಊರ್ಗೇನೆ ಸಿರಿ [...]


