Archive for July 7th, 2009
ಕಾಯ್ಕಿಣಿ ಬರೆದ ‘ಎಂಟಿ’ ಅನ್ ಲಿಮಿಟೆಡ್
‘ಎಂಟಿ’ ಅನ್ಲಿಮಿಟೆಡ್
-ಜಯಂತ ಕಾಯ್ಕಿಣಿ
ಮುಕ್ತವಾದ ಮನಸ್ಸಿನ, ಅಪರೂಪದ ನಿಲುಕುಗಳ, ಮುಲಾಜು ಗಿಲಾಜು ಇಲ್ಲದ ಸ್ಪಷ್ಟವಾದಿ ಬಿ.ಎಸ್. ವೆಂಕಟಲಕ್ಷ್ಮಿ ಜೂನ್ 26ರಂದು ಶುಕ್ರವಾರ ಹೃದಯಸ್ತಂಭನದಿಂದ ತೀರಿಕೊಂಡರು. ಅವರ ಜೀವನಸಂಗಾತಿ ಶ್ಯಾಮರಾವ್ ನನಗೆ ಫೋನ್ ಮಾಡಿದ್ದು ಮಾರನೆಯ ದಿನ ಸಂಜೆ. ಅದಾಗಲೇ ಅವರ ದನಿಯಲ್ಲಿ ಈ ಅಕಾಲಿಕ ವಿಯೋಗವನ್ನು ಭರಿಸಿಕೊಳ್ಳುತ್ತಿರುವ ಅಪಾರ ಸ್ಥೈರ್ಯವಿತ್ತು. ಜೊತೆಗೆ ಒಂದು ವಿಚಿತ್ರ ಸಂದಿಗ್ಧವಿತ್ತು. `ಎಂಟಿ’ (ವೆಂಕಟಲಕ್ಷ್ಮಿ, ಅವರ ಬಂಧು ಬಳಗಕ್ಕೆಲ್ಲಾ ‘ಎಂಟಿ) ನಮ್ಮನ್ನು ತುಂಬಾ ಫಜೀತಿಯಲ್ಲಿ ಹಾಕಿ ಹೋಗಿದ್ದಾಳಪ್ಪ – ಸಾವಿನ ಸುದ್ದಿಯನ್ನು ಯಾರಿಗೂ ತಿಳಿಸಬಾರದು, [...]
Read Full Post | Make a Comment ( 10 so far )ಮಲೆನಾಡಿನ ಹುಡುಗನ ಕಥೆಗಳು
ರಮೇಶ್ ಹಿರೆಜಂಬೂರ್ ತಮ್ಮ ಮೊದಲ ಕಥಾ ಸಂಕಲನದೊಂದಿಗೆ ಸಜ್ಜಾಗಿದ್ದಾರೆ. ಎಲ್ಲಾ ಮೊದಲುಗಳಿಗೆ ಇರುವ ಸಂಭ್ರಮ ಅವರಲ್ಲೂ ಇದೆ. ಮಲೆನಾಡಿನ ಅಂಗಳದಲ್ಲಿ ಬೆಳೆದ ರಮೇಶ್ ತಮ್ಮ ಕಥೆಗಳನ್ನು ಎಲ್ಲಿಂದ ಹೆಕ್ಕಿಕೊಂಡು ಬಂದಿದ್ದಾರೆ ಎಂಬುದು ಗುಟ್ಟೇನಲ್ಲ. ಆ ಮಲೆನಾಡಿಗೆ ಅಂತಹ ಶಕ್ತಿಯಿದೆ.
ಸದಾ ಲವಲವಿಕೆಯ ಈ ಹುಡುಗನ ಕಥೆ ಹೇಗಿದೆ ಎಂಬುದು ಗೊತ್ತಿಲ್ಲ. ಆದರೆ ಆತನಲ್ಲಿರುವ ವಿಶ್ವಾಸ, ಸದಾ ಪಾದರಸದಂತೆ ಓಡಾಡುವುದನ್ನು ನೋಡುವಾಗ ಈತನ ಕಥೆಗಳೂ ಹಾಗೆ ಇರಲಿ ಎಂದು ಮನಸ್ಸು ಆಶಿಸುತ್ತದೆ
ನಾಳೆ (8 ರಂದು ಬೆಳಗ್ಗೆ 10-30 ಕ್ಕೆ) [...]







