Ravi hegde recommends…

ಇತ್ತೀಚೆಗೆ ನನಗೆ ತುಂಬಾ ಇಷ್ಟವಾದ ಎರಡು ಪುಸ್ತಕಗಳಲ್ಲಿ Stay Hungry Stay Foolish ಕೂಡ ಒಂದು. ಬರೆದದ್ದು ರಶ್ಮಿ ಬನ್ಸಾಲ್ ಎಂಬ ಅಹಮದಾಬಾದ್ ಐಐಎಂನ ಹಳೆ ವಿದ್ಯಾರ್ಥಿನಿ. ಈಗ ಜಾಮ್‌ಮ್ಯಾಗ್ ಪತ್ರಿಕೆಯ ಸಂಪಾದಕಿ.
ಈ ಪುಸ್ತಕ 1 ಲಕ್ಷ ಪ್ರತಿಗಳ ಮಾರಾಟ ದಾಟಿದೆ. ಇದೀಗ ಈ ಪುಸ್ತಕದ ಕನ್ನಡ ಅವತರಣಿಕೆಯೂ ಬಂದಿದೆ ಅಂತ ಈಗ ಗೊತ್ತಾಯ್ತು. ಸಾಧನೆಗೆ ಮಿತಿ ಇಲ್ಲ ಸಾಧಕರಿಗೆ ಕೊನೆ ಇಲ್ಲ – ಅಂತ ಶಿರ್ಷಿಕೆಯಂತೆ. (ನಾನು ನೋಡಿಲ್ಲ) 325 ಪುಟ, 150 ರುಪಾಯಿ. ಜುಲೈ 2ರಂದು, ಬೆಂಗಳೂರಿನಲ್ಲಿ, ಖುದ್ದು ರಶ್ಮಿ ಬನ್ಸಾಲ್ ಈ ಪುಸ್ತಕವನ್ನು ಬಿಡುಗಡೆ ಮಾಡಿದರಂತೆ. ಕನ್ನಡ ಭಾಷಾಂತರ ಯಾರು ಮಾಡಿದ್ದಾರೆ, ಯಾರು ಪ್ರಕಟಿಸಿದ್ದಾರೆ ಅಂತ ಗೊತ್ತಾಗಲಿಲ್ಲ. (ನಾನಾಗಲೀ, ಕನ್ನಡಪ್ರಭ ಸಂಪಾದಕ ಎಚ್. ಆರ್. ರಂಗನಾಥ್ ಅವರಾಗಲೀ ಈ ಪುಸ್ತಕದ ಭಾಷಾಂತರ ಮಾಡಬೇಕು ಅಂದುಕೊಂಡಿದ್ದೆವು. ಪತ್ರಿಕೆಯ ಕೆಲಸದ ಗಡಿಬಿಡಿಯಲ್ಲಿ ಸಾಧ್ಯವಾಗಲಿಲ್ಲ.)
ನೌಕ್ರಿ ಡಾಟ್ ಕಾಮ್, ಮೇಕ್ ಮೈ ಟ್ರಿಪ್ ಡಾಟ್ ಕಾಮ್, ಸುಭಿಕ್ಷಾ, ರೇಣುಕಾ ಶುಗರ್ಸ್, ಎಜುಕಾಂಪ್, ಸಿಂಟೆಕ್ಸ್, ಆರ್ಕಿಡ್ ಹೊಟೆಲ್, ಮುಂತಾದ ಅನೇಕ ಕಂಪನಿಗಳನ್ನು ಸ್ಥಾಪಿಸಿದ ಐಐಎಂಎ ವಿದ್ಯಾರ್ಥಿಗಳ 25 ಸಾಧನೆಯ ಕಥೆಗಳಿವೆ. ಸಂಬಳಕ್ಕೆ ನೌಕರಿ ಮಾಡುವ ಬದಲಿಗೆ ತಾವೇ ಮಾಲಿಕರಾಗುವ ಯುವಕರ ನಿಜ ಘಟನೆಗಳು ಇವು. Very Inspiring



oLLe pustaka, naanoo Odiddene. aadre illi print aada mele ಸುಭಿಕ್ಷಾ yeDavattaytalla!
test
July 5, 2009