ಭಿನ್ನ ಮುಖಪುಟದ ಮೂರು ಪುಸ್ತಕಗಳು
ವಸುಧೇಂದ್ರ ಮತ್ತೊಮ್ಮೆ ಮತ್ತೊಂದು ಕಂತು ಪುಸ್ತಕ ಕೈಲಿಡಿದು ಸಜ್ಜಾಗಿದ್ದಾರೆ. ಪುಸ್ತಕಗಳನ್ನು ಒಂದು ಸುಂದರ ಮನೆ ಕಟ್ಟುವಷ್ಟೇ ಶ್ರದ್ದೆಯಿಂದ ರೂಪಿಸುವ ವಸುಧೇಂದ್ರ ಈ ಭಾರಿ ಹಲವು ಕಾರಣಗಳಿಗೆ ಮೆಚ್ಚುಗೆಯಾಗುತ್ತಾರೆ. ವಸುಧೇಂದ್ರರ ಕಟ್ಟಡ ಕಟ್ಟುವ ಕ್ರಿಯೆಗೆ ಅಪಾರ ಆರ್ಕಟೆಕ್ಟ್. ಈ ಇಬ್ಬರ ಕಾಂಬಿನೇಶನ್ ಕನ್ನಡ ಪುಸ್ತಕೋದ್ಯಮಕ್ಕೆ ಹೊಸತನ್ನು ಖಂಡಿತಾ ತಂದಿಟ್ಟಿದೆ.
ಈ ಬಾರಿ ಛಂದ ಪುಸ್ತಕ ಪ್ರಶಸ್ತಿ ಗೆದ್ದುಕೊಂದಿರುವುದು ಪತ್ರಕರ್ತ, ವಿಮರ್ಶಕ ಸಂದೀಪ ನಾಯಕ. ‘ಗೋಡೆಗೆ ಬರೆದ ನವಿಲು’ ಇವರ ಸಂಕಲನ. ಈ ಪುಸ್ತಕದ ಮುಖಪುಟ ಛಂದದ ಶ್ರದ್ಧೆಯನ್ನು ಸಾರುತ್ತದೆ. ಛಂದ, ಪುಸ್ತಕ ಕಲೆ ಹಾಗೂ ವಿನ್ಯಾಸಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾ ಬಂದಿದೆ. ಇತ್ತೀಚಿಗೆ ವಸುಧೇಂದ್ರರ ‘ಹಂಪಿ ಎಕ್ಸ್ ಪ್ರೆಸ್’ ಬಿಡುಗಡೆ ವೇಳೆ ಅದು ನಡೆಸಿದ ಮುಖಪುಟ ವಿನ್ಯಾಸ ಸ್ಪರ್ಧೆಯೇ ಅವರ ಕಾಳಜಿಗೆ ಸಾಕ್ಷಿ. ಒಂದೇ ಸಲಕ್ಕೆ ಹಲವು ಕಲಾವಿದರ ಆಲೋಚನಾ ರೀತಿಯನ್ನು ನೋಡಲು ಸಾಧ್ಯವಾಯಿತು. ಇದರಿಂದ ಪ್ರಯೋಜನವಾಗಿದ್ದು ಓದುಗನಿಗೆ.
ಈ ಬಾರಿಯ ಮೂರೂ ಪುಸ್ತಕಗಳು ಕಲೆ ಹಾಗೂ ವಿನ್ಯಾಸದ ಕಾರಣಕ್ಕೆ ಸೆಳೆಯುತ್ತವೆ. ಕಥೆ ಹೇಗಿದೆ ಎನ್ನುವುದಕ್ಕೆ ಈ ಭಾನುವಾರದವರೆಗೂ ಕಾಯಬೇಕು. ವರ್ಲ್ಡ್ ಕಲ್ಚರ್ ನಲ್ಲಿ ಬೆಳಗ್ಗೆ ಹಾಜರಿರಬೇಕು





ಪ್ರಿಯಾ ಅಪಾರ ನಿಮ್ಮ ಪುಸ್ತಕಗಳ ಮುಖ ಪುಟ ನೊಡಲು ಸುಂದರ.ನಿಮ್ಮ ಛಂದ
ಪುಸ್ತಕ ಮುಂದಿನ ದಿನಗಳಲ್ಲಿ ಇನ್ನು ಛಂದವಿರಲಿ
srushtinagesh
July 22, 2009
ಎಲ್ಲರನ್ನೂ ತುಂಬು ಮನಸ್ಸಿನಿಂದ ಪ್ರೋತ್ಸಾಹಿಸುವ ವಸುಧೇಂದ್ರರವರಿಗೆ ಅಭಿನಂದನೆಗಳು.
ಅವರ “ಛಂದ” ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಕಾಶಿಸಲಿ…
shivu.k
July 2, 2009
Ughe Ughe Vasudendra
Ganesh Shenoy
July 2, 2009
ಮುಖಪುಟ ತುಂಬಾ ಸೊಗಸಾಗಿದೆ….
ಅಪಾರ…
ಅಭಿನಂದನೆಗಳು … “ಅಪಾರ”
ಮೆಚ್ಚಿನ ಸಾಹಿತಿಗಳು…
ಸೊಗಸಾದ ಸಾಹಿತ್ಯ ಮಾತುಗಳು…
ಪುಸ್ತಕ ಸಂಗ್ರಹಗಳು..
ಇಷ್ಟಿದ್ದರೆ…
ಭಾನುವಾರವೂ ಸೊಗಸು…
ಬಂದೇ ಬರುತ್ತೇವೆ….
PRAKASH HEGDE
July 2, 2009