ಚಂದ್ರಿಕಾ ಬರೆದ ಕಥೆಗಳು
-ಪಿ ಚಂದ್ರಿಕಾ

ಕನ್ನಡಿಯ ಸತ್ಯ
ದಾರಿಯಲ್ಲಿ ಹೋಗಿಬರುವವರಿಗೆಲ್ಲಾ ಅಚ್ಚರಿ. ಕನ್ನಡಿಯ ಮುಂದೆ ಕುಳಿತ ಆ ಹುಡುಗಿಯನ್ನು ಕಂಡು ಯಾಕೆ ಹೀಗೆ ಕನ್ನಡಿಯ ಮುಂದೆ ಕುಳಿತೆ? ಹುಡುಗಿಗೋ ಭಯಂಕರ ಸಿಟ್ಟು. ನಾನು ಚಂದ ಇಲ್ಲವೇ? ಬಂದು ಹೋಗುವವರು ಎಲ್ಲರೂ ಹೇಳುತ್ತಾರೆ, ‘ಏ ಹುಡುಗಿ ಕನ್ನಡಿಯ ಒಡೆಯಬೇಡ ಅದು ಬಾಳುವೆಯ ಹಾಗೆ.’ ಅವಳ ಅಮ್ಮನಿಗೆ ಕಸಿವಿಸಿ. ಅವಳಿಗೆ ಒಂದೇಟು ಹಾಕಿ ಸಾಗ್ತಾಳೆ. ಹುಡುಗಿ ಅವಳ ಸೆರಗಹಿಡಿದು ಕೇಳ್ತಾಳೆ ‘ಅಮ್ಮಾ ನಿಜಹೇಳೇ ನಾನು ಹೇಗಿದ್ದೇನೆ?’ ಅಮ್ಮನಿಗೆ ಅಳು ಬರುತ್ತೆ. ನಿನ್ನ ಕೈಗೆ ಕನ್ನಡಿಯ ಕೊಟ್ಟ ದೇವರು ನೋಡುವ ಕಣ್ಣುಗಳನ್ನು ಯಾಕೆ ಕೊಡಲಿಲ್ಲ?
ಕಲೆ: ಚಿನುವ
ಅಹಿಂಸಕ ಚಪ್ಪಲಿಗಳು
ಗಾಂಧಿವಾದಿಯೊಬ್ಬ ಚಮ್ಮಾರನನ್ನು ಕೇಳಿದ, ‘ನನಗೊಂದು ಅಹಿಂಸಕ ಚಪ್ಪಲಿ ಬೇಕು’. ಚಮ್ಮಾರ ನಕ್ಕು ‘ಆಯ್ತು ನಾಳೆ ಕೊಡ್ತೀನಿ’ ಎಂದ. ಮಾರನೆಯ ದಿನ ಗಾಂಧಿವಾದಿ ಬಂದು ಚಪ್ಪಲಿಯ ತೆಗೆದುಕೊಂಡ. ಚಮ್ಮಾರ ಕೇಳಿದ ‘ಅಹಿಂಸಕ ಚಪ್ಪಲಿಗಳು ಹೇಗಿವೆ?’ ಗಾಂಧಿವಾದಿಗೆ ಚಮ್ಮಾರನ ಮೇಲೆ ಪ್ರೀತಿ ಬಂತು. ನಾಲ್ಕು ಕಾಸು ಹೆಚ್ಚಿಗೆ ಕೊಟ್ಟ. ಅದನ್ನು ವಾಪಸ್ಸು ಮಾಡಿದ ಚಮ್ಮಾರ ಹೇಳಿದ ‘ಪ್ರಾಣಿಗಳನ್ನು ಕೊಂದು ಚರ್ಮ ತೆಗೆದರೂ, ಸತ್ತ ಪ್ರಾಣಿಯ ಚರ್ಮ ತೆಗೆದು ಚಪ್ಪಲಿ ಹೊಲೆದರೂ ನಿಮ್ಮ ಕಾಲಿಗೆ ತಿಳಿಯುವುದಿಲ್ಲ ಅಲ್ಲವೇ?’







ತುಂಬಾ ಮಾರ್ಮಿಕವಾಗಿ ಬರೆದಿದ್ದೀರಿ…
ಮೊದಲನೆ ಕಥೆ ಬಹಳ ಇಷ್ಟವಾಯಿತು….
PRAKASH HEGDE
July 2, 2009
Chandrikaa ravare,
puttadhagi, chennagi baredhiruviri.
Kannadiya satyavu andhalobbala soundharyadha
kalpane kurithagiddhu swalpa gondhalavidhe.
Andharinge bannadha kalpane iruvudhu aspastavagi…
antharyadha soundharya endhadhare, kannadiya mundhe a prashne udhbhavisadhu.
kathe-2, ahimsa chappali modhalaneyadhakke holisidhare hagu holisadhiddarooo channagidhe. nimmindha hige kathegalu barutthirali.
Santhosh Sihimoge
July 2, 2009