Archive for July 2nd, 2009
ಚಂದ್ರಿಕಾ ಬರೆದ ಕಥೆಗಳು
-ಪಿ ಚಂದ್ರಿಕಾ
ಕನ್ನಡಿಯ ಸತ್ಯ
ದಾರಿಯಲ್ಲಿ ಹೋಗಿಬರುವವರಿಗೆಲ್ಲಾ ಅಚ್ಚರಿ. ಕನ್ನಡಿಯ ಮುಂದೆ ಕುಳಿತ ಆ ಹುಡುಗಿಯನ್ನು ಕಂಡು ಯಾಕೆ ಹೀಗೆ ಕನ್ನಡಿಯ ಮುಂದೆ ಕುಳಿತೆ? ಹುಡುಗಿಗೋ ಭಯಂಕರ ಸಿಟ್ಟು. ನಾನು ಚಂದ ಇಲ್ಲವೇ? ಬಂದು ಹೋಗುವವರು ಎಲ್ಲರೂ ಹೇಳುತ್ತಾರೆ, ‘ಏ ಹುಡುಗಿ ಕನ್ನಡಿಯ ಒಡೆಯಬೇಡ ಅದು ಬಾಳುವೆಯ ಹಾಗೆ.’ ಅವಳ ಅಮ್ಮನಿಗೆ ಕಸಿವಿಸಿ. ಅವಳಿಗೆ ಒಂದೇಟು ಹಾಕಿ ಸಾಗ್ತಾಳೆ. ಹುಡುಗಿ ಅವಳ ಸೆರಗಹಿಡಿದು ಕೇಳ್ತಾಳೆ ‘ಅಮ್ಮಾ ನಿಜಹೇಳೇ ನಾನು ಹೇಗಿದ್ದೇನೆ?’ ಅಮ್ಮನಿಗೆ ಅಳು ಬರುತ್ತೆ. ನಿನ್ನ ಕೈಗೆ ಕನ್ನಡಿಯ ಕೊಟ್ಟ [...]
ನನ್ನ ರಂಭೆಗೆ ನಿನ್ನ ಚುಟುಕಗಳ ಹುಚ್ಚು
-ದಿನಕರ ದೇಸಾಯಿ
ದಿನಕರನ ಚುಟುಕ
ಇಂದ್ರ ದೇವನ ಮೊನ್ನೆ ಮಾಡಿ ಟೆಲಿಫೋನು
ಕೇಳಿದನು:ದೇಸಾಯಿ, ಹೇಗಿದ್ದಿ ನೀನು?
ನನ್ನ ರಂಭೆಗೆ ನಿನ್ನ ಚುಟುಕಗಳ ಹುಚ್ಚು
ಪ್ರತಿ ಕಳಿಸಿ ಅದು ನನ್ನ ಲೆಕ್ಕಕ್ಕೆ ಹಚ್ಚು
ಅಂಕೋಲೆ ಹುಡುಗಿ
ಗೋಕರ್ಣದಿಂದ ಉತ್ತರಕ್ಕೆ ಅಂಕೋಲೆ
ಇಲ್ಲುಂಟು ದೇಸಾಯಿ ದಿನಕರನ ಬಾಲೆ
ಎಲ್ಲರನ್ನೂ ಕೆಣಕುವಳು ಈ ತುಂಟ ಹುಡಗಿ
ಹಿಡಿಯ ಹೋದರೆ ಕುಳಿತುಕೊಳ್ಳುವಳು ಅಡಗಿ
ಅಂಕೋಲೆ ಉಪ್ಪು
ಗೃಹಮಂತ್ರಿ ಹೇಳಿದರು: ಎಲೆ ಚುಟುಕ ಜೋಕೆ
ಅತ್ಯಂತ ಉಗ್ರವಾಗಿದೆ ನಿನ್ನ ಟೀಕೆ.
ಚುಟುಕವೆಂದಿತು: ನನಗೆ ಹಾಕುವೆನೆ ಸೊಪ್ಪು
ನಾನು ಅಂಕೋಲೆ ಸತ್ಯಾಗ್ರಹದ ಉಪ್ಪು.
ಅಹಿಂಸಾಮಯ ಯುದ್ಧ
ಲೇಖನಿಯ ಹಿಡಿದು ಸರಕಾರದ ವಿರುದ್ಧ
ಪ್ರತಿ ದಿವಸವೂ ನಾನು ಹೂಡಿದೆನು ಯುದ್ಧ.
ಬಂದೂಕುಗಳ ಬದಲು ಚುಟುಕಗಳ [...]
ಭಿನ್ನ ಮುಖಪುಟದ ಮೂರು ಪುಸ್ತಕಗಳು
ವಸುಧೇಂದ್ರ ಮತ್ತೊಮ್ಮೆ ಮತ್ತೊಂದು ಕಂತು ಪುಸ್ತಕ ಕೈಲಿಡಿದು ಸಜ್ಜಾಗಿದ್ದಾರೆ. ಪುಸ್ತಕಗಳನ್ನು ಒಂದು ಸುಂದರ ಮನೆ ಕಟ್ಟುವಷ್ಟೇ ಶ್ರದ್ದೆಯಿಂದ ರೂಪಿಸುವ ವಸುಧೇಂದ್ರ ಈ ಭಾರಿ ಹಲವು ಕಾರಣಗಳಿಗೆ ಮೆಚ್ಚುಗೆಯಾಗುತ್ತಾರೆ. ವಸುಧೇಂದ್ರರ ಕಟ್ಟಡ ಕಟ್ಟುವ ಕ್ರಿಯೆಗೆ ಅಪಾರ ಆರ್ಕಟೆಕ್ಟ್. ಈ ಇಬ್ಬರ ಕಾಂಬಿನೇಶನ್ ಕನ್ನಡ ಪುಸ್ತಕೋದ್ಯಮಕ್ಕೆ ಹೊಸತನ್ನು ಖಂಡಿತಾ ತಂದಿಟ್ಟಿದೆ.
ಈ ಬಾರಿ ಛಂದ ಪುಸ್ತಕ ಪ್ರಶಸ್ತಿ ಗೆದ್ದುಕೊಂದಿರುವುದು ಪತ್ರಕರ್ತ, ವಿಮರ್ಶಕ ಸಂದೀಪ ನಾಯಕ. ‘ಗೋಡೆಗೆ ಬರೆದ ನವಿಲು’ ಇವರ ಸಂಕಲನ. ಈ ಪುಸ್ತಕದ ಮುಖಪುಟ ಛಂದದ ಶ್ರದ್ಧೆಯನ್ನು ಸಾರುತ್ತದೆ. ಛಂದ, ಪುಸ್ತಕ [...]


