Archive for July 1st, 2009
ಆಟದ ಮೂಲಕ ಪಾಠ
ಅಶೋಕ್ ಕುಮಾರ್ ಎ
‘ಕನ್ನಡ ಬ್ಲಾಗರ್ಸ್’ ನಿಂದ
ಆಟದ ಮೂಲಕ ಪಾಠ ಹೇಳಿದರೆ, ಮಕ್ಕಳಿಗೆ ಕಲಿಕೆ ಶಿಕ್ಷೆಯಾಗದು ತಾನೇ? ಮಕ್ಕಳು ಸ್ವತ: ಸಣ್ಣ ಸಣ್ಣ ಪ್ರಯೋಗಗಳ ಮೂಲಕ ಕಲಿಯುವಂತಿದ್ದರೆ, ಕಲಿಕೆಯ ಮಜಾವೇ ಬೇರೆ. ಆದರೆ ಈ ಪ್ರಯೋಗಗಳಿಗೆ ದುಬಾರಿ ಪರಿಕರಗಳು ಬೇಕಾದರೆ, ಹೀಗೆ ಕಲಿಯುವುದು ಕನಸಿನ ಮಾತಾದೀತು. ಆದರೆ ಅಂತರ್ಜಾಲ ತಾಣವನ್ನು ನೋಡಿದರೆ, ಕಲಿಕೆಗೆ ನೆರವಾಗುವ ಆಟಿಕೆಗಳನ್ನು ತಯಾರಿಸುವುದು ಎಷ್ಟು ಸುಲಭ ಎನ್ನುವುದು ಸ್ಪಷ್ಟವಾದೀತು.
ವಿದ್ಯುತ್, ಮೋಟಾರು-ಜನರೇಟರುಗಳು, ಖಗೋಳ ಶಾಸ್ತ್ರ, ಜೀವಶಾಸ್ತ್ರ, ಗಣಿತ, ಗಾಳಿ ಮತ್ತು ನೀರು, ತಿರುಗುವ ಆಟಿಕೆಗಳು, [...]
ಶಿವಮೊಗ್ಗದಲ್ಲಿ ಮತ್ತೆ ಮತ್ತೆ…
ಯು ಆರ್ ಅನಂತಮೂರ್ತಿ ಅವರ ‘ಮತ್ತೆ ಮತ್ತೆ ಬ್ರೆಕ್ಟ್’ ಕವನ ಸಂಕಲನ ಶಿವಮೊಗ್ಗದಲ್ಲಿ ಬಿಡುಗಡೆಗೊಂಡಿತು.
ಅನಂತಮೂರ್ತಿಯವರ ಸಹೋದರ ಡಾ ಅನಿಲ್ ಕುಮಾರ್ ಪುಸ್ತಕ ಬಿಡುಗಡೆ ಮಾಡಿದರು. ಕವಯತ್ರಿ ಪ್ರತಿಭಾ ನಂದಕುಮಾರ್ ಸಂಕಲನ ಕುರಿತು ಮಾತನಾಡಿದರು. ಪ್ರೊ ಶ್ರೀಕಂಠ ಕೂಡಿಗೆ ಅಧ್ಯಕ್ಷತೆ ವಹಿಸಿದ್ದರು. ಅಹರ್ನಿಶಿ ಪ್ರಕಾಶನ ಈ ಸಂಕಲನವನ್ನು ಪ್ರಕಟಿಸಿದೆ. ಪ್ರಕಾಶನದ ಕೆ ಅಕ್ಷತಾ ಕಾರ್ಯಕ್ರಮದ ರೂವಾರಿ.
ಛಾಯಾಗ್ರಾಹಕ ಅವಿನಾಶ್ ಕಂಡಂತೆ ಕಾರ್ಯಕ್ರಮ ಹೀಗಿದೆ-
ಅದೊಂದು ಕಾಂಡೂಮ್ ಸುಟ್ಟ ಘಟನೆ…
P For…
ಡಾ ಲೀಲಾ ಸಂಪಿಗೆ
ಅದೊಂದು ಕಾಂಡೂಮ್ ಸುಟ್ಟ ಘಟನೆ. ದಿಢೀರ್ ಅಂತ ಹಾಸನಕ್ಕೆ ಹೋದೆ. ರಾಜಿ ಕಾಯ್ತಾ ಇದ್ಲು ಅವಳನ್ನ ಕರ್ಕ್ಕೊಂಡು ನೇರ ಪೋಲೀಸ್ ಸ್ಟೇಷನ್ ಗೆ ಹೋದೆ. ಅವಳು ಬರೆದಂತೆ ಕಂಪ್ಲೆಂಟ್ ಬರೆದು ಕೊಟ್ಟೆ.
ರಾಜಿ ಶಿರಾಡಿ ಘಾಟ್ ನಲ್ಲಿ ಲೈಂಗಿಕವೃತ್ತಿ ನಡೆಸೋಳು. ಹಾಗೇನೇ ಅಲ್ಲಿರುವ ಲೈಂಗಿಕವೃತ್ತಿ ಮಹಿಳೆಯರಿಗೆ ಕಾಂಡೂಮ್ ಸರಬರಾಜು ಮಾಡ್ತಿದ್ಲು. ಕೆಂಪ್ಹಳ್ಳದ ಹತ್ರ ಕಾಂಡೂಮ್ ತೊಗೊಂಡ್ಹೋಗುವಾಗ ಅಲ್ಲಿದ್ದ ಕಾನ್ ಸ್ಟೇಬಲ್ ಮಹದೇವಯ್ಯ ರಾಜಿ ಹತ್ರ ಇದ್ದ ನೂರಾರು ಕಾಂಡೂಮ್ ಪ್ಯಾಕೆಟ್ ಕಸಿದು ಬೆಂಕಿಗೆ ಹಾಕ್ಬಿಟ್ಟಿದ್ದ. [...]







