Archive for March, 2009

ಸಂಪಾದಕರ ಸಂಕಿರಣ

Posted on March 1, 2009. Filed under: ಫ್ರೆಂಡ್ಸ್ ಕಾಲೊನಿ |

Read Full Post | Make a Comment ( None so far )

ನಾಗೇಶ ಹೆಗಡೆ ಹೇಳಿದ್ದು…

Posted on February 28, 2009. Filed under: ಫ್ರೆಂಡ್ಸ್ ಕಾಲೊನಿ |

ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಹಾಗೂ ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆ ಬೆಂಗಳೂರಿನಲ್ಲಿ  ಆಯೋಜಿಸಿದ್ದ ‘ಕೃಷಿ ಪತ್ರಿಕೋದ್ಯಮ ಮತ್ತು ಸವಾಲುಗಳು’ ಕಾರ್ಯಾಗಾರದಲ್ಲಿ ನಾಗೇಶ ಹೆಗಡೆ ಅವರು ಮಾತನಾಡಿದ್ದರ ಸಾರಾಂಶ ಇಲ್ಲಿದೆ-

ಇಂದು ಮಾಹಿತಿಯ ಸುಂಟರಗಾಳಿ ಎದ್ದಿದೆ; ಆದರೆ ಇದರ ಕೇಂದ್ರಬಿಂದುವಾಗಿರುವ ರೈತ ಮಾಹಿತಿಯ ಕೊರತೆ ಅನುಭವಿಸುತ್ತಿದ್ದಾನೆ. ನಾವಿಂದು ಸುದ್ದಿಯ ಸಂತೆಯಲ್ಲಿದ್ದೇವೆ. ಅಭಿವೃದ್ಧಿಹೊಂದಿದ ದೇಶಗಳ ಕಾರ್ಪೋರೆಟ್ ವಲಯದಿಂದ ಮಾಹಿತಿ ಮಹಾಪೂರವೇ ಹರಿದುಬರುತ್ತಿದೆ; ಆದರೆ ನಮ್ಮ ಕೃಷಿ-ಗ್ರಾಮೀಣ ವಲಯದಿಂದ ಮಾಹಿತಿ ಲಭ್ಯವಾಗುತ್ತಿಲ್ಲ; ರೈತ ಸಮುದಾಯಕ್ಕೂ ಅಗತ್ಯಾಧಾರಿತ ಮಾಹಿತಿ ದೊರಕುತ್ತಿಲ್ಲ.
ಕನ್ನಡದ ಯಾವ ಪತ್ರಿಕೆಯಲ್ಲೂ ಕೃಷಿ [...]

Read Full Post | Make a Comment ( None so far )

ಕಾಂಡೋಮ್ ಕೊಡ್ತಿರೋವಾಗ್ಲೆ ಗ್ಯಾಂಗ್ ವಾರ್

Posted on February 28, 2009. Filed under: P for... |

P for…

-ಲೀಲಾ ಸಂಪಿಗೆ
 
ಎರಡು ಗುಂಪುಗಳ ನಡುವೆ  ಏಕ್ದಂ ಮಾರಾಮಾರಿ!
ಯಾಕೆ? ಏನು? ಅಂತ ಯೋಚಿಸೋದ್ರೊಳಗೆ ಎರಡೂ ಗ್ಯಾಂಗ್ಗಳು ಪರಸ್ಪರ ಹೊಡೆದಾಡಿಕೊಳ್ತಿದ್ವು, ಗೌರಮ್ಮನ ಗುಂಪು, ಮಾದಯ್ಯನ ಗುಂಪುಗಳು ಕೈ ಕೈ ಮಿಲಾಯಿಸಿ ಬಿಟ್ಟಿದ್ದವು, ಗೌರಮ್ಮ ಮಾದಯ್ಯ, ತಮ್ಮ ಧ್ವನಿಯನ್ನು ತಾರಕಕ್ಕೇರಿಸಿ ಬೈಗುಳಗಳ ರಾಶಿರಾಶಿ ಹಾಕ್ತಿದ್ರು. ನನ್ನ ಸುತ್ತ ಕುಂತಿದ್ದ ಹುಡ್ಗೀರೆಲ್ಲಾ ಚೆಲ್ಲಾಪಿಲ್ಲಿಯಾದ್ರು, ಅವರಿಗೆಲ್ಲಾ ಇದೇನೂ ಹೊಸದಲ್ಲ. ಅಂಥದೊಂದು ಸಂದರ್ಭ ಬಂದಾಗಲೆಲ್ಲಾ ಅವರದ್ದೇ ಆದ ಜಾಗಗಳನ್ನು ಮಾಡ್ಕೊಂಡ್ಬಿಟ್ಟಿರುತ್ತಾರೆ. ಆದ್ರೆ ಇದಾವುದರ ಪರಿವೆಯೂ ಇಲ್ಲದೆ ಬಂಡೆಗೆ ತಲೆ ಕೊಡಲು ಸಿದ್ಧರಾಗೇ ಹೋಗಿದ್ದು, ನಾವು!
ನಾನು, [...]

Read Full Post | Make a Comment ( 2 so far )

ಗುಬ್ಬಿಯಲ್ಲಿರುವ, ಗುಬ್ಬಿ ಕಂಪನಿಯ, ಗುಬ್ಬಿ ವೀರಣ್ಣನವರ ಮನೆ ಎಲ್ಲಿದೆ?

Posted on February 28, 2009. Filed under: ಚಿನ್ನದ ಪುಟಗಳಿಂದ, ಝೂಮ್ |

ಬಿ ಜಯಶ್ರೀ ಅವರಿಗೆ ಗೌರವ ಡಾಕ್ಟರೇಟ್ ಧಕ್ಕಿದೆ. ರಾಜ್ಯ ಮುಕ್ತ ವಿಶ್ವವಿದ್ಯಾಲಯ ಈ ಮೂಲಕ ಜಯಶ್ರೀ ಅವರಿಗೆ ಮಾತ್ರವೇ ಅಲ್ಲ ರಂಗಭೂಮಿಗೆ ಗೌರವ ತಂದುಕೊಟ್ಟಿದೆ.
ಈ ಸಂದರ್ಭದಲ್ಲಿ ಕವಯತ್ರಿ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕಿ ಮಮತಾ ಜಿ ಸಾಗರ ಅಪರೂಪದ ಫೋಟೋಗಳನ್ನು ‘ಅವಧಿ’ಗೆ ಕಳಿಸಿಕೊಟ್ಟಿದ್ದಾರೆ.
ಗುಬ್ಬಿ ಗೊತ್ತು, ಗುಬ್ಬಿ ಕಂಪನಿ ಗೊತ್ತು, ಗುಬ್ಬಿ ವೀರಣ್ಣ ಗೊತ್ತು. ಆದರೆ ಗುಬ್ಬಿಯಲ್ಲಿರುವ ಗುಬ್ಬಿ ಕಂಪನಿಯ ಗುಬ್ಬಿ ವೀರಣ್ಣನವರ ಮನೆ ಎಲ್ಲಿದೆ ಹೇಗಿದೆ ಗೊತ್ತಿದೆಯಾ? ಹಾಗಾದರೆ ಬನ್ನಿ [...]

Read Full Post | Make a Comment ( 7 so far )

ಬಿಳಿಮಲೆ ಕವನಗಳು

Posted on February 28, 2009. Filed under: ಬಾ ಕವಿತಾ |

-ಡಾ. ಪುರುಷೋತ್ತಮ ಬಿಳಿಮಲೆ
ರಂಗೋಲಿ

ಅಜ್ಜಿ
ಸೂರ್ಯ ಹುಟ್ಟುವ ಮೊದಲೇ
ಅಂಗಳಕೆ ನೀರು ಚೆಲ್ಲಿ ರಂಗೋಲಿ ಬರೆಯುತ್ತಿದ್ದಳು
ಸರಳ ರೇಖೆಗಳ ನೇರ ನಡೆ
ಎಲ್ಲವೂ ಕ್ರಮಬದ್ಧಚಿತ್ರ ಚಿತ್ತಾರಗಳು
ಬಳ್ಳಿ ಹೂವುಗಳುಸದಾ ಚಿಗುರಿ ಆಕಾಶಕ್ಕೆ
 

ಅಮ್ಮ
ಸೂರ್ಯ ಹುಟ್ಟುವಾಗ
ಅಂಗಳ ಗುಡಿಸಿ ಧೂಳು ಸಾರಿಸಿ
ರಂಗೋಲಿ ಬರೆಯುತ್ತಿದ್ದಳು
ಅಮ್ಮನ ರಂಗೋಲಿಯಲ್ಲಿ ಬಣ್ಣ ಬಹಳ
ಅಡ್ಡ ದಿಡ್ಡಿ ರೇಖೆಗಳಿಗೆ ಜೋಡಣೆ
ಹಣ್ಣು ಕಾಯಿಗಳ ಮೊಳಕೆ ಬೇರುಗಳು
ಸದಾ ನೀರಿನಾಳಕ್ಕೆ
 

ಹುಡುಗಿ
ಸೂರ್ಯ ಹುಟ್ಟಿದ ಮೇಲೆ
ಕೈಕಾಲುಗಳು ಸವರಿ ನೆಲ ತೆವರುಗಳ ತೀಡಿ
ರಂಗೋಲಿ ಬರೆಯುತ್ತಾಳೆ
ಅಲ್ಲೊಂದು ಇಲ್ಲೊಂದು ಅಡ್ಡ ದಿಡ್ಡಿ ಚುಕ್ಕೆಗಳ ಇಟ್ಟು
ಹೇಗೆ ಹೇಗೋ ಒಂದರೊಡನೊಂದು ಸೇರಿಸಿ
ಬರೆಯುತ್ತಲೇ
ಎಲ್ಲಿಂದೆಲ್ಲಿಗೋ ಬಂಧ ನಿಗೂಢ
ಸದಾ ಸಂಕೇತದಾಳಕ್ಕೆ.
ಚಿತ್ರ: shakuntaladesign
 

Read Full Post | Make a Comment ( 1 so far )

ನಾಲಗೆಯ ಮೇಲೆ ಕುರುಕ್ಷೇತ್ರ

Posted on February 27, 2009. Filed under: ಬಾ ಕವಿತಾ |

 
-ಹರೀಶ್ ಕೇರ
ಬೆಟ್ಟದಡಿ

ಮಹಾಭಾರತದ ಹರಿಕತೆ ನಡೆದಿರುವಾಗ
ದಾಸರು ನಾಲಗೆ ತಪ್ಪಿ
ನಾಗರಿಕತೆ ಎಂದರೆ ಹಿಂಸೆಯ ಕತೆ
ಎಂದುಬಿಟ್ಟರು 
ಆಮೇಲೆ ಚಡಪಡಿಸಿದರು
ತಮ್ಮ ಮಾತನ್ನು ಅಲ್ಲೇ ಬಿಡುವುದೋ
ವ್ಯಾಖ್ಯಾನಿಸುವುದೋ ಅರಿಯದ ಸಂದಿಗ್ದದಲ್ಲಿ
ಮುಂದೆ ಕುಳಿತ ಮಂದಿಯ ಮುಖ ನೋಡಿದರು
ಉದ್ದ ಅಡ್ಡ ನಾಮಗಳು ಮುದ್ರೆಗಳು
ಮುಗಿದ ಕೈಗಳು ಬೋಳಿಸಿದ ತಲೆಗಳು
ಬಿಟ್ಟ ಮೈ ಹೊದ್ದ ಶಲ್ಯ ಇಣುಕುವ ಜನಿವಾರ
ಬೊಜ್ಜು ಮೈ ಹುಳಿ ತೇಗು
ತರಹೇವಾರಿ ಶಿಖೆಗಳು
ಕಾಸಿನಗಲದ ಕುಂಕುಮ ತಲೆಗೆ ಸೆರಗು
ಮುತ್ತೈದೆಯರ ಸಕಲ ಭೂಷಿತಗಳು
ಮಾತುಗಳು ಗಂಟಲಲ್ಲೇ ಉಳಿದವು
ಕುರುಕ್ಷೇತ್ರದ ನೆತ್ತರ ನದಿ ಹಾಗೇ ಮುಂದುವರಿಯಿತು
ಬಾಯಿ ಬಿಡುವ ಭೂಮಿ ಎದೆ ಸೀಳಿದ ಗದೆ
ನೀರ ತಡಿಯಲ್ಲಿ ಅನಾಥ ಹೆಣ ಕತ್ತಲಲ್ಲಿ ಕುಣಿವ [...]

Read Full Post | Make a Comment ( None so far )

ಓಹೋ…ಗೂಗಲ್ ಸೀರೆ….!

Posted on February 27, 2009. Filed under: 1 |

Read Full Post | Make a Comment ( 1 so far )

Anti Terrorist

Posted on February 27, 2009. Filed under: 1 |

ಏಕೋ ಮತ್ತೆ ನೆನಪಾಯಿತು…ಎಂದು ಮುಂಬೈ ದುರಂತವನ್ನು ನೆನಪಿಸಿಕೊಳ್ಳುತ್ತಾ ‘ನೀಲಾಂಜಲ’ರೂ ನೆನಪಾದರು ಎಂದು ಬರೆದಿದ್ದೆವು. ಈಗ ನೀಲಾಂಜಲರ ಉತ್ಸಾಹದಿಂದಲ್ಲೇ ಕಣ್ಣು ಬಿಟ್ಟಿರುವ ಕ್ರಿಯಾಶೀಲ ಬ್ಲಾಗ್ Anti Terrorist ಇಲ್ಲಿದೆ. ಭೇಟಿ ಕೊಡಿ. ಅವರ ಹೃದಯಸ್ಪರ್ಶಿ ಕಾಳಜಿಗೆ ನಿಮ್ಮ ಬೆಂಬಲವಿರಲಿ  

Read Full Post | Make a Comment ( 1 so far )

ನಾನಂತೂ ಬಹುತೇಕ ಮಠಾಧೀಶರು ಸಮಾಜದ ಶತ್ರುಗಳು ಎಂದೇ ಭಾವಿಸಿದ್ದೇನೆ

Posted on February 27, 2009. Filed under: ಜುಗಾರಿ ಕ್ರಾಸ್ |

ಮಠಾಧೀಶರು ಸಮಾಜದ ಶತ್ರುಗಳೇ?
-ದಿನೇಶ್ ಕುಮಾರ್ ಎಸ್.ಸಿ
ದೇಸೀಮಾತು

ಆನೆಯನೇರಿಕೊಂಡು ಹೋದಿರಿ ನೀವು,
ಕುದುರೆಯನೇರಿಕೊಂಡು ಹೋದಿರಿ ನೀವು.
ಕುಂಕುಮ-ಕಸ್ತುರಿಯ ಪೂಸಿಕೊಂಡು ಹೋದಿರಿ ಅಣ್ಣಾ;
ಸತ್ಯದ ನಿಲುವನರಿಯದೆ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ
ಅಹಂಕಾರವೆಂಬ ಮದಗಜವನೇರಿ
ವಿಧಿಗೆ ಗುರಿಯಾಗಿ ನೀವು ಕೆಟ್ಟು ಹೋದಿರಲ್ಲಾ!
ನಮ್ಮ ಕೂಡಲಸಂಗಮದೇವನನರಿಯದೆ
ನರಕಕ್ಕೆ ಭಾಜನವಾದಿರಲ್ಲಾ!
ಚಿತ್ರದುರ್ಗದ ಸಮ್ಮೇಳನ ಮುಗಿದರೂ, ಸಮ್ಮೇಳನದಲ್ಲಿ ಹುಟ್ಟಿಕೊಂಡ ಕಿಚ್ಚು-ರೊಚ್ಚು ಇನ್ನೂ ಮುಂದುವರೆದಿದೆ. ಸಮ್ಮೇಳನ ಆರಂಭವಾಗುವುದಕ್ಕೆ ಮುನ್ನವೇ `ಮಠಾಧೀಶರು ನಮ್ಮ ಶತ್ರುಗಳು’ ಎಂದು ಸಮ್ಮೇಳನಾಧ್ಯಕ್ಷ ಎಲ್.ಬಸವರಾಜು ಹೇಳಿದ್ದರು. ವಿಶೇಷವೆಂದರೆ ಈ ನಾಡಿನ ಸಾವಿರ ಸಾವಿರ ಮಠಾಧೀಶರ ಪೈಕಿ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾತ್ರ ಈ [...]

Read Full Post | Make a Comment ( 3 so far )

ನಮ್ಮ ಮಲ್ಲಿಗೆ ಪ್ರಶಸ್ತಿ

Posted on February 26, 2009. Filed under: ಝೂಮ್, ಫ್ರೆಂಡ್ಸ್ ಕಾಲೊನಿ |

 

Read Full Post | Make a Comment ( 11 so far )

« Previous Entries
  • 'ಪಾಂಚಾಲಿ' ಸಿಗುತ್ತದೆ. ಫೋಟೋ ಮೇಲೆ ಕ್ಲಿಕ್ ಮಾಡಿ-

    ಮೊದಲು ಬುಕ್ ಮಾಡಿದವರಿಗೆ ಮೊದಲ ಆದ್ಯತೆ

  • ಇ ಮೇಲ್ ಮೂಲಕ 'ಅವಧಿ'

    Enter your email address to subscribe to this blog

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ



    Caught in the wild

    .........one more year of mixed xpressions

    lets lift

    may their soul rest in peace

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    February 2009
    M T W T F S S
    « Jan   Mar »
     1
    2345678
    9101112131415
    16171819202122
    232425262728  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...