Archive for January 31st, 2009

ಜೋಗಿ ಮೆದ್ದ ‘ಜಿಲೇಬಿ’

Posted on January 31, 2009. Filed under: ಜೋಗಿಮನೆ |

ಸುಮ್ಮನೆ ಮೆಲ್ಲುತ್ತಾ ಹೋದ ಒಂದು ಜಿಲೇಬಿ

-ಜೋಗಿ
 

ಇತ್ತೀಚೆಗೆ ಕವನ ಸಂಕಲನ ಕೈಗೆ ಬಂದ ತಕ್ಷಣ ಗಾಬರಿ ಶುರುವಾಗುತ್ತದೆ. ಪುಟಗಳನ್ನು ತೆರೆಯುತ್ತಿದ್ದಂತೆ ಆತಂಕವಾಗುತ್ತದೆ. ಒಂದೇ ಒಂದು ಕವಿತೆಯೂ ಅರ್ಥವಾಗದೇ ಹೋದರೆ ಎಂದು ಭಯವಾಗುತ್ತದೆ. ಅರ್ಥದ ಮಾತು ಹಾಗಿರಲಿ, ಕವಿತೆ ನನ್ನ ಮೇಲೆ ಯಾವ ಪ್ರಭಾವವನ್ನೂ ಬೀರುತ್ತಿಲ್ಲವಲ್ಲ ಎಂದು ಸಂಕೋಚವಾಗುತ್ತದೆ. ಓದಿ ಮುಚ್ಚಿಟ್ಟ ನಂತರ ಒಂದೇ ಒಂದು ಸಾಲು ಕೂಡ ನೆನಪಾಗದೇ ಹೋದಾಗ ಡಿಮೆನ್ಷಿಯಾ ಶುರುವಾಗಿರಬಹುದೇ ಎಂದು ಬೆಚ್ಚಿಬಿದ್ದು ಆ ಕಾಯಿಲೆಯ ಲಕ್ಷಣಗಳನ್ನು ಓದಲು ಶುರುಮಾಡುತ್ತೇನೆ. ಇನ್ಯಾರೋ ಅದು ಡಿಮೆನ್ಷಿಯಾ ಅಲ್ಲ, ಆಲ್‌ಜೈಮರ್ ಎಂದು [...]

Read Full Post | Make a Comment ( 8 so far )

ಶತಮಾನದ ಕವಿ ಯೇಟ್ಸ್

Posted on January 31, 2009. Filed under: ಬುಕ್ ಬಝಾರ್ |

ಅಭಿರುಚಿ
ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆ, ಚಿತ್ರದುರ್ಗ
ಮತ್ತು
ಅಭಿನವ
17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
ಇವರ ಸಂಯುಕ್ತ ಆಶ್ರಯದಲ್ಲಿ
ಯು.ಆರ್. ಅನಂತಮೂರ್ತಿ ಅವರ
ಶತಮಾನದ ಕವಿ ಯೇಟ್ಸ್
ಪುಸ್ತಕ ಬಿಡುಗಡೆ:  ರಾಜೇಂದ್ರ ಚೆನ್ನಿ ಅವರಿಂದ
ಕೃತಿ ಪ್ರತಿಕ್ರಿಯೆ:   ಕೆ. ಸಜಾತ್
ಅಧ್ಯಕ್ಷತೆ:  ಶ್ರೀ ಬಿ.ಪಿ.ವಿರೇಂದ್ರಕುಮಾರ್
ಸ್ಥಳ: ಐ ಎಂ ಎಂ ಹಾಲ್, ಮದಕರಿ ವೃತ್ತದ ಬಳಿ, ಚಿತ್ರದುರ್ಗ
ದಿನಾಂಕ: 01-02-2009: ಭಾನುವಾರ
ಬೆಳಿಗ್ಗೆ 10:30 ಕ್ಕೆ
ದಯಮಾಡಿ ಬನ್ನಿ

Read Full Post | Make a Comment ( None so far )

ಅಮ್ಮಮ್ಮ ತಕ್ಷಣ ಬಂದು ಮಾತನಾಡಿಸುತ್ತಾಳೆ..

Posted on January 31, 2009. Filed under: ಬ್ಲಾಗ್ ಮಂಡಲ |

ದುಂಡಾದ ಅಕ್ಷರಗಳಿಗೆ ಐದು ಅಂಕ ಅಂತ ಪ್ರಶ್ನೆ ಪತ್ರಿಕೆಯಲ್ಲಿ ಇರುತ್ತಿದ್ದುದು ನೆನಪಿದೆಯೆ? ಸುದ್ದಿ ಪತ್ರಿಕೆಗೂ ಅದು ಅನ್ವಯಿಸುತ್ತೆ. ಅದೇ ಸುದ್ದಿ, ಅದೇ ವಿವರ, ಅದೇ ಫೋಟೊ ಇರುವ ಎರಡು ಪತ್ರಿಕೆಗಳನ್ನು ಓದುಗ ಅವುಗಳ ನೋಟದಿಂದ ಅಳೆಯುತ್ತಾನೆ. ಆಹಾ ಎಂಥ ಚಂದದ ವಿನ್ಯಾಸ ಅಂತ ಅವನು ಹೇಳದಿದ್ದಾಗಲೂ ಒಳ್ಳೆಯ ವಿನ್ಯಾಸ ತನ್ನ ಪರಿಣಾಮವನ್ನು ಸದ್ದಿಲ್ಲದೆ ಮಾಡಿಯೇ ಇರುತ್ತದೆ.
ಯಾಕೆಂದರೆ ಪುಟವಿನ್ಯಾಸ ಬರಿಯ ಸೌಂದರ್ಯಪ್ರಜ್ಞೆಗೆ ಸಂಬಂಧಿಸಿದ್ದಲ್ಲ. ಸುದ್ದಿಯನ್ನು ಸಲೀಸಾಗಿ ಅರ್ಥ ಮಾಡಿಕೊಳ್ಳಲು ನೆರವಾಗುವುದು ಅದರ ಮುಖ್ಯ ಪಾತ್ರ. ಹಾಗಾಗಿ ಜನಸಾಮಾನ್ಯರಿಗೆ ವಿನ್ಯಾಸವೆಲ್ಲ [...]

Read Full Post | Make a Comment ( None so far )

ಬಿಕ್ಕು ಹೇಳಿದ ಕಥೆ

Posted on January 31, 2009. Filed under: ಬ್ಲಾಗ್ ಮಂಡಲ |

-ಅಕಾಲ

ಅದು ಬುದ್ಧನ ಊರು. ಆ ಊರಿನವರೂ ಬುದ್ಧನಂತವರೇ. ಉದ್ದ ಕಿವಿ, ಗುಂಗುರು ಕೂದಲು, ಅರೆ ತೆರೆದ ಕಣ್ಣುಗಳು, ತೆಳ್ಳನೆ ನಗೆ.
ಕೃಶ ದೇಹದವನೊಬ್ಬ ಬಂದ.
ಆಸೆಯೇ ದುಃಖಕ್ಕೆ ಮೂಲ ಎಂದ.
ಬುದ್ದನಂತವರು ಮುಖವಾಡ ಕಳಚಿಟ್ಟರು.
ನಗಲು ಯತ್ನಿಸಿದರು.

Read Full Post | Make a Comment ( 2 so far )

ಏಳಯ್ಯ ಖಯ್ಯಾಮ್, ಸಂಸ್ಕೃತಿಯ ರಕ್ಷಕರು ಬರುತ್ತಿದ್ದಾರೆ…

Posted on January 31, 2009. Filed under: ಫ್ರೆಂಡ್ಸ್ ಕಾಲೊನಿ |

ಹರೀಶ್ ಕೇರ ಕೊಟ್ಟ ಈ ಕಥೆ ಒಂದು ದೊಡ್ಡ ನಿಟ್ಟುಸಿರಿನ ಕಥೆ
ಖಯ್ಯಾಮನ ದುರಂತ
‘ಹೆಂಡ, ಹೆಣ್ಣು , ತಣ್ಣೆಳಲು, ರೊಟ್ಟಿಯ ತುಂಡು- ನನಗಿಷ್ಟು ಸಾಕು’ ಎಂದ ಕವಿ, ದಾರ್ಶನಿಕ ಉಮರ್ ಖಯ್ಯಾಮ್ ಇದೀಗ ಪಡಖಾನೆಯಲ್ಲಿ ಮಧು ಹೀರಿ ಉನ್ಮತ್ತ. ಜೀವೋತ್ಸಾಹ ತುಂಬಿದ ಒಂದಿಷ್ಟು ಹುಡುಗ- ಹುಡುಗಿಯರ ನರ್ತನ ಅವನ ಸುತ್ತ.
ಯಾರೋ ಎಚ್ಚರಿಸಿದರು : ‘ಏಳಯ್ಯ ಖಯ್ಯಾಮ್, ಸಂಸ್ಕೃತಿಯ ರಕ್ಷಕರು ಬರುತ್ತಿದ್ದಾರೆ. ಈ ತರುಣಿಯರು, ಅವರ ಕುಡಿತ, ಜತೆಗೆ ನೀನು ! ಅವರು ಒಂದಿಷ್ಟೂ ಸಹಿಸುವುದಿಲ್ಲ !’
ಖಯ್ಯಾಮ್ ಕಡೆಗಣ್ಣಿನಿಂದ [...]

Read Full Post | Make a Comment ( None so far )

  • 'ಪಾಂಚಾಲಿ' ಸಿಗುತ್ತದೆ. ಫೋಟೋ ಮೇಲೆ ಕ್ಲಿಕ್ ಮಾಡಿ-

    ಮೊದಲು ಬುಕ್ ಮಾಡಿದವರಿಗೆ ಮೊದಲ ಆದ್ಯತೆ

  • ಇ ಮೇಲ್ ಮೂಲಕ 'ಅವಧಿ'

    Enter your email address to subscribe to this blog

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ



    Caught in the wild

    .........one more year of mixed xpressions

    lets lift

    may their soul rest in peace

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    January 2009
    M T W T F S S
    « Dec   Feb »
     1234
    567891011
    12131415161718
    19202122232425
    262728293031  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...