Archive for January 30th, 2009
ನಿಮ್ಮ ಅನುಪಸ್ಥಿತಿಯಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು!
ಬ್ಲಾಗ್ ಲೋಕದಲ್ಲಿ ನಗೆ ಹಂಚುತ್ತಲೇ ಸಮಾಜವನ್ನು ಬೆಳಕಿಗೆ ಒಡ್ಡುತ್ತಿರುವ ‘ನಗೆ ನಗಾರಿ ಡಾಟ್ ಕಾಂ’ ಗೆ ಈಗ ಒಂದು ವರ್ಷದ ಸಂಭ್ರಮ.
ಕನ್ನಡದಲ್ಲಿ ಪ್ರಜಾವಾಣಿಯಲ್ಲಿ ‘ಛೂ ಬಾಣ’ ಬರೆದ ಟಿಎಸ್ ಆರ್ ಸಹಾ ಹೀಗೆ ವ್ಯಂಗ್ಯ ಬಾಣಗಳ ಮೂಲಕವೇ ಸಮಾಜವನ್ನು ಸರಿದಾರಿಗೆ ತರಲು ಯತ್ನಿಸಿದ್ದರು. ‘ಎಡಗಾಲು ಮುಂದಿಟ್ಟು ಬನ್ನಿ’ ಎಂದು ತನ್ನ ಬ್ಲಾಗ್ ಗೆ ಬರುವವರಿಗೆ ಆಹ್ವಾನ ನೀಡುವ ನಗೆ ನಗಾರಿ ಹಾಸ್ಯದ ಬಾಣದ ಮೂಲಕವೇ ಸಮಾಜವನ್ನು ಚುಚ್ಚಿ ಎಬ್ಬಿಸಲು ನೋಡುತ್ತಿದೆ.
ಟಿ ಪಿ ಕೈಲಾಸಂ [...]
ದೇಸಿ ಮಾತು- ಬ್ಲಾಗ್ ಅಲ್ಲ, ಪುಸ್ತಕ
‘ದೇಸೀಮಾತು’ ಬ್ಲಾಗ್ ನ ದಿನೇಶ್ ಕುಮಾರ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ಹರಿತ, ನೇರ ಬರಹಗಳಿಂದ ಬ್ಲಾಗ್ ಅಂಗಳದಲ್ಲಿ ಸುದ್ದಿ ಮಾಡಿದ್ದ ಲೇಖನಗಳು ಈಗ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ.
ಬ್ಲಾಗ್ ಲೋಕದಲ್ಲಿ ಸಮಕಾಲೀನ ವಿಚಾರಗಳ ಚರ್ಚೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಅಂತಹ ಸಂದರ್ಭದಲ್ಲಿ ದಿನೇಶ್ ದೇಸಿ ಮಾತು ಮೂಲಕ ಪ್ರವೇಶಿಸಿದರು. ಅವರ ಲೇಖನಗಳೆಲ್ಲವೂ ಚರ್ಚೆಗೆ ಒಳಗಾಗಿವೆ ಎನ್ನುವುದೇ ಅವರ ಬರಹಕ್ಕಿರುವ ಶಕ್ತಿಯನ್ನೂ ತೋರಿಸುತ್ತದೆ.
ಈ ಪುಸ್ತಕವನ್ನು ಬೆಂಗಳೂರು ಪ್ರೆಸ್ ಕ್ಲಬ್ ಹೊರತಂದಿದೆ. [...]







