Archive for January 24th, 2009
ಹೇಳಿದ್ದು ಜಾಗಿಂಗ್, ಹೋಗಿದ್ದು ಲೈವ್ ಬ್ಯಾಂಡ್ ಗೆ
P For…
-ಲೀಲಾ ಸಂಪಿಗೆ
ಬೆಳಗಿನ ಜಾವ 4.30. ದಡಬಡನೆ ಎದ್ದ ಮುರಳಿ ಫ್ರೆಷ್ ಆದ. ತಿಳಿಬಣ್ಣದ ಜಾಗಿಂಗ್ ಸೂಟ್ ಹಾಕ್ಕೊಂಡ. ಹೊಸದಾಗಿ ಕೊಂಡಿದ್ದ ಜಾಗಿಂಗ್ ಷೂ ಹಾಕ್ಕೊಂಡ. ಆರೋಗ್ಯದ ಬಗ್ಗೆ, ಫಿಟ್ನೆಸ್ ಬಗ್ಗೆ ಗಂಡನಿಗಿರುವ ಆಸಕ್ತಿ ಮುರಳಿಯ ಹೆಂಡತಿಯನ್ನು ಮೆಚ್ಚಿಸಿತ್ತು. ಬಿಸಿಬಿಸಿಯಾಗಿ ಒಂದು ಲೋಟ ಹಾಲು ತಂದ್ಕೊಟ್ಲು. ಅಷ್ಟೊತ್ತಿಗೆ 4.50. ಕಾರ್ ಸ್ಟಾರ್ಟ್ ಮಾಡಿದ್ದೇ ಸರಿ, ಸೀದಾ ಲಾಲ್ ಬಾಗ್ ರಸ್ತೆಯ ಬಂಗಲೆಯೊಂದರಲ್ಲಿ ಕಾರ್ ಪಾರ್ಕ್ ಆಯ್ತು.
ಬಾಗಿಲ್ಲಲ್ಲೇ ನಿಂತಿದ್ದ ಪಪ್ಪು ಸೆಲ್ಯೂಟ್ ಹೊಡೆದು ಒಳಕರೆದೊಯ್ದ. ಮುರಳಿ ಐ.ಎ.ಎಸ್. [...]







