Archive for January 15th, 2009
ಚರ್ಚೆ ಆರಂಭವಾಗಿದೆ…
ಅಗ್ನಿ ಶ್ರೀಧರ್ ಅವರು ಚಲನಚಿತ್ರ ಪ್ರಶಸ್ತಿಗಳ ಬಗ್ಗೆ ಎತ್ತಿದ್ದ ಪ್ರಶ್ನೆಯನ್ನಿಟ್ಟುಕೊಂಡು ‘ಮ್ಯಾಜಿಕ್ ಕಾರ್ಪೆಟ್’ ಚರ್ಚೆಗೆ ಕರೆ ನೀಡಿತ್ತು.
ಚರ್ಚೆ ಆರಂಭವಾಗಿದೆ. ನೀವೂ ಪಾಲ್ಗೊಳ್ಳಿ-
ಪ್ರಶಸ್ತಿಗಳಿಗಾಗಿ ವಿವಾದಗಳೋ ಅಥವಾ ವಿವಾದಗಳಿಗಾಗಿ ಪ್ರಶಸ್ತಿಗಳೋ ತಿಳಿಯುತ್ತಿಲ್ಲ.
ಪ್ರತಿವರ್ಷ ಪ್ರಶಸ್ತಿ ಪಟ್ಟಿ ಬಿಡುಗಡೆಯಾದ ನಂತರ ವಿವಾದಗಳು ಹುಟ್ಟದೆ ಇದ್ದರೆ ಜನರಿಗೆ ಪ್ರಶಸ್ತಿಗಳು ಅನೌನ್ಸಾದ ಬಗ್ಗೆ ಗೊತ್ತಾಗುವುದೆಯಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಚಿತ್ರ ಅತ್ಯುತ್ತಮ ಮತ್ತು ಅದು ಎಲ್ಲ ವಿಭಾಗಗಳಲ್ಲೂ ಪ್ರಶಸ್ತಿಗೆ ಯೋಗ್ಯವಾಗಿದೆ ಅನಿಸುವುದು ಸಹಜ “ಹೆತ್ತವರಿಗೆ ಹೆಗ್ಗಣ ಮುದ್ದು”, ನೀವು ಪ್ರಶಸ್ತಿಗಳನ್ನು ವಿವಾದಕ್ಕೆ ಎಡೆಮಾಡುವುದರಿಂದ ಆ ಪ್ರಶಸ್ತಿಯನ್ನು [...]
ಒಂದು ಕವಿತೆ- ಒಂದು ಪತ್ರ
ಇದು ನಾವು-ನಮ್ಮಲ್ಲಿ ಬ್ಲಾಗ್ ನಿಂದ ಹೆಕ್ಕಿದ್ದು. ಕವಿತೆಯನ್ನು ದಟ್ಟವಾಗಿ ಪ್ರೀತಿಸುವ ಗೆಳೆಯರು ನಿರಂಜನ ಅವರ ಸಾರಥ್ಯದಲ್ಲಿ ಆರಂಭಿಸಿರುವ ಬ್ಲಾಗ್. ಅಹಾ ಎನ್ನುವಂತ ಕವಿತೆಗಳು ಈ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಅರುಣಕುಮಾರ ಜೋಳದಕೂಡ್ಲಿಗಿ ಅವರ ಕವಿತೆ ಇಲ್ಲಿದೆ. ಒಂದು ಕವಿತೆಗೆ ಇಷ್ಟೊಂದು ಪ್ರತಿಕ್ರಿಯೆ ಸಾಧ್ಯವೇ? ಹೌದು ಎನ್ನುವಂತೆ ಪರಶುರಾಮ್ ಕಲಾಲ್ ಕವಿತೆಯ ಅಳಕ್ಕಿಳಿದಿದ್ದಾರೆ. ಅದೂ ಇಲ್ಲಿದೆ.
ಚಿತ್ರ: ಆಶುತೋಷ್
ಜಾಡಮಾಲಿಯೊಬ್ಬಳ ದಿನಚರಿ
ನಸುಕಿನಲಿ ಸೂರ್ಯನ ಎಳೆ ಕಿರಣಗಳು
ಪೊರಕೆ ಹಿಡಿದು ಅವಳ ಮನೆ ಬಾಗಿಲು ತಟ್ಟುತ್ತವೆ
ತಾವು ದಿನಪೂರ್ತಿ ಇರುವ ಬೀದಿಯ ಗುಡಿಸೆಂದು ಹಠ ಮಾಡುತ್ತವೆ
ಈ [...]
ಇವರು ಯಾರು ಬಲ್ಲೆಯೇನು?
ಒಳ್ಳೆ ಸಮಯ ಒಳ್ಳೆ ಸಮಯ ಒಳ್ಳೆ ಸಮಯವು, ಕಳ್ಳತನವ ಮಾಡಲಿಕ್ಕೆ ಒಳ್ಳೆ ಸಮಯವು… ಎನ್ನುವ ಹಾಡು ಹಾಡುತ್ತಾ ಈ ಕಳ್ಳ ಬಡಿಗೆ ಹಿಡಿದು ನಿಂತಿದ್ದಾರೆ.
ಇವರು ಯಾರು ಎಂಬುದೇ ಈಗ ನಿಮ್ಮ ಮುಂದಿಡುತ್ತಿರುವ ಪ್ರಶ್ನೆ.
ಈ ಪ್ರಶ್ನೆ ಕೇಳುತ್ತಿದ್ದೇವೆ ಎಂದರೆ ಇದರಲ್ಲೇನೋ ಇಂಟರೆಸ್ಟಿಂಗ್ ವಿಷಯ ಇರಲೇಬೇಕು ಅಲ್ಲವಾ?
ಉತ್ತರಕ್ಕಾಗಿ ’ಸೈಡ್ ವಿಂಗ್’ಗೆ ಭೇಟಿ ಕೊಡಿ-







