Archive for January 10th, 2009
ಸ್ವೀಕರಿಸಯ್ಯ ನಾಟಕ ಮೋದಕ…
ಚಿತ್ರ:ಟಿ ಎಸ್ ಐ
ಓ ಆದಿ ಕೇಶವನೆ, ನಾಟಕದ ನಾಯಕನೇ..ಸ್ವೀಕರಿಸಯ್ಯ ನಾಟಕ ಮೋದಕ…ಎಂಬ ಸ್ತುತಿ ಎಂತೆಂತಹ ನೆನಪಿನ ಓಣಿಯಲ್ಲಿ ನಮ್ಮನ್ನು ಕರೆದೊಯ್ಯುತ್ತದೆ. ಅದು ರವೀಂದ್ರ ಕಲಾಕ್ಷೇತ್ರವೇ ಆಗಿರಬೇಕಿಲ್ಲ, ರಂಗ ಶಂಕರವೂ ಆಗಿರಬೇಕಿಲ್ಲ..ನಮ್ಮ ಮನೆಯ ಪಕ್ಕದಲ್ಲಿ ಆಡಿದ ಕಂಪನಿ ನಾಟಕ, ಬೀದಿಗೆ ಬಂದಿಳಿದ ಗಾರುಡಿಗರು, ನಮ್ಮನ್ನು ಕಲಾಕ್ಷೇತ್ರಕ್ಕೆ ಎಳೆದೊಯ್ಯುವಂತೆ ಮಾಡಿದ ಒಂದು ಪುಟ್ಟ ಬರಹ…ಎಲ್ಲವೂ ಈ ಒಂದು ಸೊಲ್ಲಿನೊಂದಿಗೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಎಳ್ಳುಂಡೆ ಜೇನುತುಪ್ಪವನ್ನು ಮೆಲ್ಲುವ ಆ ಗಣ ನಾಯಕನನ್ನು ಬರಮಾಡಿಕೊಳ್ಳುವ ಎಲ್ಲರಿಗೂ ನಮಿಸುತ್ತಾ ಈ ಸೈಡ್ ವಿಂಗ್ ಆರಂಭಿಸುತ್ತಿದ್ದೇವೆ.
ನೀವೆಲ್ಲಾ ಮುನ್ನಲೆಯಲ್ಲಿರಿ, [...]
ರೆಡಿ..ಸ್ಟಾರ್ಟ್..ಕಟ್..
ಶ್ರೀನಿವಾಸ ವೈದ್ಯರ ಕಾದಂಬರಿ ‘ಹಳ್ಳ ಬಂತು ಹಳ್ಳ’ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಗರಿ. ಈ ಹಿನ್ನೆಲೆಯಲ್ಲಿ ‘ಚಂದನ’ ಅವರ ಸಾಹಿತ್ಯ ಲೋಕದ ಬಗ್ಗೆ ಬೆಳಕು ಚೆಲ್ಲಲಿದೆ. ಒಂದು ಸಂದರ್ಶನ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರಿಗೂ. ಹಾಗಾಗಿಯೇ ‘ಅವಧಿ’ ಈ ಸಂದರ್ಶನದ ಹಿಂದಿನ ನೋಟವನ್ನು ಇಲ್ಲಿ ಬಿಚ್ಚಿಡುತ್ತಿದೆ.
ಈ ಸಂದರ್ಶನ 17 ಶನಿವಾರ 2 ಕ್ಕೆ ಹಾಗೂ 18 ಭಾನುವಾರ ಬೆಳಗ್ಗೆ 10 ಕ್ಕೆ ಪ್ರಸಾರವಾಗುತ್ತದೆ. ಖಂಡಿತಾ ನೋಡಿ.
Read Full Post | Make a Comment ( None so far )
ಪ್ರಸಾದ್ ರಕ್ಷಿದಿ ಬರುತ್ತಿದ್ದಾರೆ…ದಾರಿ ಬಿಡಿ…
ಗೆಳೆಯ ಪ್ರಸಾದ್ ರಕ್ಷಿದಿ ತನ್ನ ಈ ಬರೆಹವನ್ನು ‘ಒಂದು ಗ್ರಾಮೀಣ ರಂಗಭೂಮಿಯ ಆತ್ಮಕಥನ’ವೆಂದು ಕರೆದುಕೊಂಡಿದ್ದಾರೆ. ರಂಗಭೂಮಿಯ ಮುಖಾಂತರ ಮಲೆನಾಡಿನ ಪುಟ್ಟ ಜನಸಮುದಾಯವೊಂದು ತನ್ನ ಮಿತಿ ಮತ್ತು ಸಾಧ್ಯತೆಗಳನ್ನು ಕಂಡುಕೊಳ್ಳುವುದರ ನಿರೂಪಣೆ ಎಂಬ ಅರ್ಥದಲ್ಲಿ ಇದು ಒಂದು ಆತ್ಮಕಥನವೇ ಹೌದು. ಆದರೆ ಬೆಳ್ಳೇಕೆರೆ ಹಳ್ಳಿ ಥೇಟರ್, ಮಲೆನಾಡಿನ ಹಳ್ಳಿಯೊಂದರ ರಂಗ ಚಳವಳಿಯ ಕಥನವನ್ನಷ್ಟೇ ಅಲ್ಲ, ಅದು ಆ ಪ್ರದೇಶದ ಜನರ, ಅಂದರೆ ಮನೆಗಳ, ಸಂಸಾರಗಳ ದುಃಖ ದುಮ್ಮಾನ ಹಾಗೂ ಸುಖ ಸಂತೋಷಗಳ ಕಥನವೂ ಆಗಿದೆ.
ಈ ಕೃತಿ ರಂಗ ಅಧ್ಯಯನದ ದೃಷ್ಟಿಯಿಂದ [...]
ಗುಬ್ಬಿಹಳ್ಳದ ಸಾಕ್ಷಿಯಲ್ಲಿ
ತಮ್ಮ ವೈವಿಧ್ಯಪೂರ್ಣ ಬರವಣಿಗೆಯಿಂದ ಈಗಾಗಲೇ ಸಾಹಿತ್ಯಾಸಕ್ತರ ಗಮನ ಸೆಳೆದಿರುವ ಡಾ. ಎಲ್. ಸಿ. ಸುಮಿತ್ರಾ ಅವರ ಮೊದಲ ಕಥಾಸಂಕಲನ ಇದೀಗ ಪ್ರಕಟವಾಗುತ್ತಿದೆ. ಈ ಸಂಕಲನದ ಹೆಚ್ಚಿನ ಕತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಲೇಖಕಿಗೆ ಹೆಸರು ತಂದಿವೆ. ಬಿಡಿಬಿಡಿಯಾಗಿ ಕತೆಗಳನ್ನು ಓದುವಾಗ ಒಂದು ರೀತಿಯ ಅನುಭವವಾದರೆ, ಅವುಗಳನ್ನು ಸಮಗ್ರವಾಗಿ, ಒಟ್ಟಂದದಲ್ಲಿ ಓದುವಾಗಿನ ಅನುಭವ ಮತ್ತೊಂದು ಬಗೆಯದು. ಲೇಖಕಿಯ ಜೀವನದೃಷ್ಟಿಯನ್ನು ಹೆಚ್ಚು ನಿಚ್ಚಳವಾಗಿ ಗ್ರಹಿಸಲು ಇಂಥ ಸಂಕಲನದ ಪ್ರಕಟಣೆ ಅನುವು ಮಾಡಿಕೊಡುತ್ತದೆ.
ಬಿಡಿಬಿಡಿಯಾಗಿ ಓದಿದ್ದಾಗ ಕೇವಲ ಪ್ರಯೋಗಗಳಾಗಿ ಕಂಡದ್ದು ಈಗ ಒಟ್ಟಾಗಿ [...]







