Archive for January 1st, 2009
ಮತ್ತೆ ಮತ್ತೆ ‘ಅಹರ್ನಿಶಿ’
ಒಬ್ಬ ಹುಡುಗಿ ಇದ್ದಾಳೆ. ಅವಳಿಗೆ ಕಣ್ಣ ತುಂಬಾ ಕನಸು. ರೆಕ್ಕೆ ಬಿಚ್ಚಿ ಆಕಾಶ ಮುಟ್ಟುವ ಹಂಬಲ. ಮಲೆನಾಡಿನ ಹುಂಚದಕಟ್ಟೆ ಎಂಬ ಪುಟ್ಟ ಗ್ರಾಮದಿಂದ ಎದ್ದು ಬಂದವಳು. ಮನಸ್ಸು ಮನಸ್ಸುಗಳ ನಡುವೆ ಗೋಡೆ ಇರುವುದನ್ನು ಸುತಾರಾಂ ವಿರೋಧಿಸುವ ಈಕೆ ಎರಡರ ಮಧ್ಯೆ ಸಲೀಸು ಮಾತು ಹರಿಯುವಂತಾಗಲು ದಣಪೆ ಕಟ್ಟಿದವಳು. ಇವಳು ಕೆ ಅಕ್ಷತಾ.
ಮೊದಲ ಸಂಕಲನಕ್ಕೆ ಓದುಗರನ್ನು ಸೆಳೆದುಕೊಂಡವಳು. ವೆಂಕಟರಮಣ ಗೌಡರಿಂದ – ‘ಇವಳೆಷ್ಟು ಗಟ್ಟಿ ಹುಡುಗಿಯೆಂದರೆ, ಇವಳು ಗೋಳೋ ಅನ್ನುತ್ತಿಲ್ಲ. ತಾನು ಮೆಚ್ಚಿದವನು ತನ್ನ ನಿರೀಕ್ಷೆಯನ್ನು ಮುಟ್ಟಲಿಲ್ಲವೆಂದು [...]
ಕೈಲಿರದಿದ್ದರೆ ಬಿಯರ್…
ಹೊಸ ವರ್ಷಕ್ಕೆ ವಿಶ್ ಮಾಡ್ಬೇಕು. ಆದ್ರೆ ಏನೇನೋ ಶುಭಾಷಯ ಹೇಳೋದರ ಬದಲು ಪುಸ್ತಕದ ಮೂಲಕವೇ ವಿಶ್ ಮಾಡಿದ್ರೆ ಹೇಗೆ ಅನಿಸ್ತು.
ನೋಡಿ ಇಲ್ಲಿದೆ ಛಂದ ಪುಸ್ತಕ ಪ್ರಕಟಿಸಿರುವ ಅಪಾರ ಅವರ ಮದ್ಯಸಾರ ಕೃತಿಯಿಂದ ಆಯ್ದ ಒಂದು ಶುಭಾಷಯ
ಇದು ಬ್ಲಾಗಿಗರಿಗೆ ಹೇಳಿಮಾಡಿಸಿದ್ದು. ಇದು ಬರೀ ಶುಭಾಷಯ ಪತ್ರವಲ್ಲ. ಮೌಸ್ ಪ್ಯಾಡ್.
ನಿಮಗೆ ಇದು ಬೇಕಾದರೆ ವಿವರಗಳಿಗೆ mayflowermh@gmail.com ಸಂಪರ್ಕಿಸಿ.
ನಿಮಗಿದೋ ಶುಭಾಷಯ ಎಂದವರು…
Nagesh Hegde
ಸುಂದರ ಸಂದೇಶಕ್ಕೆ ಧನ್ಯವಾದಗಳು.
ನಿಮ್ಮ ಮತ್ತು ನಿಮ್ಮ ಮೇಫ್ಲವರ್ ಕುಟುಂಬದ ಸದಸ್ಯರ ಅಂಗಳದಲ್ಲಿ ದಿನವೂ ಹೊಸ ಉತ್ಸಾಹದ ಹೂ ಅರಳುತ್ತಿರಲಿ ಎಂದು ಆಶಿಸುತ್ತೇನೆ.
-ನಾಹೆ.
B. Suresha
ರಂಗೋಲಿಗೆ ಟ್ಯಾಂಕ್ಸೂ.
ಚೆನ್ನಾಗಿದ್ದೀಯಾ?
ಹೊಸವರ್ಷಕ್ಕೆ ಶುಭಾಶಯಗಳು
-ಬಿ.ಸುರೇಶ
Anandarama Shastry
ಹೊಸವರ್ಷದಂಗಳದಲ್ಲಿ ನಿಮ್ಮ ಚಂದದ ರಂಗೋಲಿ ಕಂಡು ಖುಷಿಯಾಯಿತು.
ರಂಗೋಲಿಯು ಎಲ್ಲರ ಅಂಗಳದಲ್ಲೂ ಸದಾ ಶೋಭಿಸುತ್ತಿರಲಿ.
-ಎಚ್. ಆನಂದರಾಮ ಶಾಸ್ತ್ರೀ
Guruprasad kaginele
ತುಂಬಾ ಚೆನ್ನಾಗಿದೆ. ನಿಮ್ಮ ಬದುಕಿನಲ್ಲೂ ಒಂದು ರಂಗೋಲಿ ಮೂಡಲಿ …
ಹೊಸ ವರ್ಷದ ಶುಭಾಶಯಗಳು .
-ಗುರುಪ್ರಸಾದ್ [...]







