ಗೆಳೆತನ ಮನುಷ್ಯರನ್ನಾಗಿಸಲಿ..

Posted on November 21, 2008. Filed under: ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ |

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ವಾಹನಗಳಿಗೆ ಬೇಕಾದ ತೈಲ ಮಾರುತ್ತಿರುವ ಸಿದ್ದು ದೇವರಮನಿ ಕವಿತೆ ಬರೆಯುವ ಹುಡುಗ. ಬಿ ಕಾಂ ಓದಿ ಅದೇಗೋ ಕಾವ್ಯದ ಸ್ನೇಹಕ್ಕೆ ಕೈ ಚಾಚಿದ ಈ ಹುಡುಗ ಬೆರಗಾಗುವಂತೆ ಬರೆಯುತ್ತಿದ್ದಾನೆ. ಯುದ್ಧ ಬೇಕು ಎನ್ನುವವರಿಗೆ ಅವನ ಉತ್ತರ ಇಷ್ಟೇ ಅಂತಹವರನ್ನು ನನ್ನ ಅಂಗಡಿಗೆ ಕಳಿಸಿಕೊಡಿ-ಇಲ್ಲಿ ಕೆಲಸಗಳಿವೆ ಅಂತ. ಸಿದ್ದು ಕೊಟ್ಟೂರಿನ ಗೆಳೆಯರ ಮಧ್ಯೆಯೇ ಅರಳುತ್ತಾ ಕಾವ್ಯ ಬರವಣಿಗೆ ರೂಪಿಸಿಕೊಂಡವನು. ಸಿದ್ದು ಬ್ಲಾಗ್ ಅಂಗಳಕ್ಕೂ ಬಂದಿದ್ದಾರೆ. ಆಯುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ ..  

ಗೆಳೆತನ ಮನುಷ್ಯರನ್ನಾಗಿಸಲಿ.. ಕವಿತೆಯನ್ನು ಬರೆದ ಅವರನ್ನು ಸ್ವಾಗತಿಸುತ್ತಾ ಅವರ ಒಂದು ಕವಿತೆ ನಿಮಗಾಗಿ-  

- ಸಿದ್ದು ದೇವರಮನಿ

keith-haring-anti-war

ಯುದ್ದವೆ೦ದರೆ  ಅಜ್ಞಾನ
ಯುದ್ದವೆ೦ದರೆ ಅಸಹ್ಯ
ಅದು ಕತ್ತಲ ಸೃಷ್ಟಿಸುವ ಬರೋಬ್ಬರಿ ಬೆಳಕು !

ಕದನಗಳು ಕಲಹಗಳನ್ನಲ್ಲದೆ ಕನಸುಗಳನ್ನು
ಹುಟ್ಟುಹಾಕಿದ್ದು ನನಗೆ ಈವರೆಗೂ ನೆನಪಿಲ್ಲ.
ಯುದ್ದದಲ್ಲಿ ಏನಾದರೂ ಪಾತ್ರಗಳು ಸಿಕ್ಕರೆ
ಅದು ನನ್ನ ಪ್ರತಿರೋಧ ಮಾತ್ರ.

ಕನಸುಗಳನ್ನು ಹೊತ್ತು
ಕಣ್ ಬಿಟ್ಟ ಕೂಸು ನಾನು..
ಇಲ್ಲಿ ನನಗೆ ಮನುಷ್ಯರೊ೦ದಿಗೆ ಮಾತ್ರ ಗೆಳೆತನವಿದೆ.

ಹೆಚ್ಚೇನು ಹೇಳಲಾರೆ
ಯುದ್ದವೇ ಕೊನೆಯ ನಿಧಾ೯ರ
ಎ೦ದೆನ್ನುವ ಎಲ್ಲರನ್ನು ಕಳಿಸಿಕೊಡಿ
ನಮ್ಮ೦ಗಡಿಯಲ್ಲಿ ಕೆಲಸಗಳು ಖಾಲಿ ಇವೆ.

ಹಗೆತನಗಳನ್ನು ಮರೆತು ಮನುಷ್ಯರಾಗಲಿ.

ಚಿತ್ರ : Anti-war painting by Keith Haring in Berlin


 

Make a Comment

Make A Comment: ( 1 so far )

blockquote and a tags work here.

One Response to “ಗೆಳೆತನ ಮನುಷ್ಯರನ್ನಾಗಿಸಲಿ..”

RSS Feed for ಅವಧಿ Comments RSS Feed

ಈ ತರದ ಮೀಡಿಯಗೆ ನನ್ನ ಕರೆತ೦ದ, ಕ್ಯೂಬ ಆಸಕ್ತಿ ಹಚ್ಚಿಸಿದ ನಿಮ್ಮ ಋಣ ದೊಡ್ಡದಿದೆ..
ಥ್ಯಾ೦ಕ್ಸ್ ಸರ್..


Where's The Comment Form?

  • Flickr Photos

    pa sa art

    sketch12

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    November 2008
    M T W T F S S
    « Oct   Dec »
     12
    3456789
    10111213141516
    17181920212223
    24252627282930
  • ತಿಂಗಳ ಕಂತು

  • a

  • Twitter Updates

    • ಲಂಕೇಶ್ ಅನುವಾದಿಸಿದ ಕವಿತೆಗಳು: ಚರ್ಚ್ ಒಂದರಲ್ಲಿ ಅರ್ಚಕನಾಗಿದ್ದ ಜಾನ್ ಡನ್ ಎಂಬ ಇಂಗ್ಲಿಷ್ ಕವಿ ಬರೆದ ಬಹುತೇಕ ಕವಿತೆಗಳ ವಸ್ತು `ಪ್ರ.. http://tinyurl.com/ndf62e 7 minutes ago
    • ಇಳಾ ಸರಹದ್ದು: http://tinyurl.com/oxy23j 1 day ago
    • ಸುಳಿಯಂಚಿನಲ್ಲಿ…: ರಮೇಶ್ ಹಿರೆಜಂಬೂರು ಅವರ ಕಥಾ ಸಂಕಲನ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ಎಚ್ ಎಸ್ ದೊರೆಸ್ವಾಮಿ, ಬರಗೂರು ರಾ.. http://tinyurl.com/mee2ja 1 day ago
    • ಕೋಮುಗಲಭೆ ಮತ್ತು ಮಾಧ್ಯಮ: -ಶ್ರೀ ಕನ್ನಡ ಜರ್ನಲಿಸ್ಟ್ಸ್ ಕೋಮುಗಲಭೆಯ ಸಮಯ ವರದಿಗಾರಿಕೆ ಹೇಗಿರಬೇಕು ಅಂತ ಒಂದಿಷ್ಟು ನಿಯಮಾವಳಿಗಳು ಪತ್ರ.. http://tinyurl.com/lz4e3l 2 days ago
    • ಸುಬ್ಬಣ್ಣ ನೆನಪು: http://tinyurl.com/mrs3na 2 days ago

Liked it here?
Why not try sites on the blogroll...