Archive for October, 2008
ಒಂದು ಹುಚ್ಚು ಬೆನ್ನ ಏರಿ…
ಹತ್ತು ಹಲವು ಹುಚ್ಚುಗಳಲ್ಲಿ ಒಂದು
ಮೌಂಟ್ ಎವೆರೆಸ್ಟ್ ಬೇಸ್ ಕ್ಯಾಂಪ್ ಟ್ರೆಕ್ಕಿಂಗ್
ಇದು ಮೇ ೨೦೦೮ರಲ್ಲಿ ಕೈಗೊಂಡ ೧೮ ದಿನಗಳ ಕಾಲ್ನಡಿಗೆ ಪ್ರವಾಸ. ಎಂದೂ ಮರೆಯಲಾಗದ ಅನುಭವಗಳಲ್ಲಿ ಒಂದು. ಕೆಲವು ಅನುಭವಗಳನ್ನು ಮಾತಿನಲ್ಲಿ ವಿವರಿಸಲಸಾಧ್ಯ ಅಥವಾ ಅಂತಹದೇ ಅನುಭವ ಓದುವವರಿಗೆ ಸಿಗುವಂತಾಗಲು ತುಂಬಾ ಬರೆಯಬೇಕಾಗುತ್ತೇನೊ, ಅಂತೂ ಅಮ್ಮ ನನ್ನ ಹಿಂದೆ ಬಿದ್ದು, ತಾನು ಓದುವ ಆಸೆಯಲ್ಲಿ ಇದನ್ನು ಬರೆಯಲು ಪ್ರೊತ್ಸಾಹಿಸಿದರು. ಆದರೂ ಇದನ್ನು ಬರೆದು ಮುಗಿಸಲು ಸಮಯ ಬೇಕು. ಈ ಬಿಸಿಲಿನಲ್ಲಿ ಕುಳಿತುಕೊಂಡು ಆ ಥಂಡಿಯನ್ನು ಅನುಭವಿಸಿಕೊಂಡು ಬರೆಯುವುದು ಕಷ್ಟವೇ [...]
Read Full Post | Make a Comment ( None so far )ದೀಪಾವಳಿಗೆ ‘ಜೋಗಿ’ ಸ್ಪೆಷಲ್ ಕಥೆ
ಇಕ್ಬಾಲ್ ಚರಿತೆ
ಶ್ರೀಧರನಿಗೆ ಆವತ್ತು ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು.
ಅವನು ತಡವಾಗಿ ಎದ್ದಿದ್ದ. ಮೂರನೆಯ ಮಗಳಿಗೆ ಬೆಳಗ್ಗೆಯೇ ವಾಂತಿಬೇಧಿ ಶುರುವಾಗಿತ್ತು. ಅವಳನ್ನು ಡಾಕ್ಟರ ಹತ್ತಿರ ಕರೆದುಕೊಂಡು ಹೋಗಿ ಎಂದು ಹೆಂಡತಿ ಗಂಟು ಬಿದ್ದಿದ್ದಳು. ತನಗೆ ಸಾಧ್ಯವೇ ಇಲ್ಲ ಅಂತ ಶ್ರೀಧರ ಕೂಗಾಡಿದ್ದ. ಮದುವೆ ಮನೆಗೆ ಹೋಗಿ ಹೊಟ್ಟೆ ತುಂಬಾ ತಿಂದು ಬಂದಿದ್ದಕ್ಕೇ ಹಾಗಾಗಿದೆ ಅಂತ ಕೂಗಾಡಿದ್ದ. ಅದು ನಿಮ್ಮ ಕಡೆ ಮದುವೆ, ನಿಮ್ಮ ಮರ್ಯಾದೆ ಉಳಿಸೋದಕ್ಕೆ ಅಂತ ನಾನು ಹೋಗಿ ಬಂದೆ. ಇನ್ನು ಮುಂದೆ ನಿಮ್ಮ ಕಡೆಯೋರ ಯಾವ ಕಾರ್ಯಕ್ರಮಕ್ಕೂ ಹೋಗೋಲ್ಲ [...]
ಪ ಸ ನೂರ್ಕಾಲ ಬಾಳಲಿ
ನಮ್ಮೆಲ್ಲರ ಪ್ರೀತಿಯ ಕಲಾವಿದ ಪ ಸ ಕುಮಾರ್ ಅವರಿಗೆ ಇಂದು ೬೦ ವಸಂತ ತುಂಬಿತು. ತಮ್ಮ ವ್ಯಾಪಕ ಓದು, ಸದಾ ಹೊರಚೆಲ್ಲುವ ನಗು, ಕಷ್ಟಗಳನ್ನೂ ತಳ್ಳಿ ಎದ್ದು ಬರುವ ಛಲ, ಹೊಸ ತಲೆಮಾರಿನ ಬಗ್ಗೆ ಅಪಾರ ಪ್ರೀತಿ ಇವರನ್ನು ಎಲ್ಲರ ಕಲಾವಿದನನ್ನಾಗಿ ಮಾಡಿದೆ.
ಪ ಸ ನೂರ್ಕಾಲ ಬಾಳಲಿ ಎಂದು ಹಾರೈಸುತ್ತಾ ಅವರ ಒಂದಷ್ಟು ಹೊಸ ಕಲಾಕೃತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ-
ತಮಸೋಮಾ ಜೋತಿರ್ಗಮಯ..
ನೀ ಬಂದು ನಿಂದಿಲ್ಲಿ ದೀಪ ಹಚ್ಚಾ
ದೀಪಗಳು ಕಕ್ಕಾಬಿಕ್ಕಿಯಾಗಿವೆ. ಹೋಳಿಗೆಗೆ ಮಾತೇ ಹೊರಡುತ್ತಿಲ್ಲ. ಪಟಾಕಿಗೆ ಅಕಾಲ ಮಳೆಯಿಂದ ಚಳಿ, ತಂಡಿ. ದೀಪಕ್ಕೆ ವರ್ಷವಿಡೀ ಬೆಳಗುವ ಸೀರಿಯಲ್ ಲೈಟ್ ಜೊತೆಗೂ, ಹೋಳಿಗೆಗೆ `ಹಳ್ಳಿತಿಂಡಿ’ಯ ಜೊತೆಗೂ, ಪಟಾಕಿಗೆ ಬಾಂಬ್‌ಗಳ ಜೊತೆಗೂ ಸ್ಪರ್ಧೆ ಮತ್ತು ಆ ಸ್ಪರ್ಧೆಯಲ್ಲಿ ಸೋಲು.
ಹಣತೆಗೆ ಬತ್ತಿ ಹೊಸೆಯುತ್ತಿದ್ದ ಅಜ್ಜಿ ತೀರಿಕೊಂಡಿದ್ದಾರೆ, ಅಮ್ಮನಿಗೆ ಕೊಂಚವೂ ಕುಳಿತುಕೊಳ್ಳಲಾಗುತ್ತಿಲ್ಲ, ಬತ್ತಿ ಹೊಸೆಯಲು. ಕಾರಣ: ಕಾಲುನೋವು. ದೀಪಕ್ಕೆ ಕೊಬ್ಬರಿ ಎಣ್ಣೆ ಹಾಕುತ್ತಾರಾ, ಒಳ್ಳೆಣ್ಣೆಯಾ- ಈಗಿನ ಸೊಸೆಯರಿಗೆ ಕನ್‌ಫ್ಯೂಸ್. `ವಾಟ್ಸ್ ದಿ ಆಯಿಲ್ ಯಾರ್’. ಎಣ್ಣೆ ಎರೆದು [...]
ಗುಬ್ಬಚ್ಚಿಗೆ ಬಂತು ರೆಕ್ಕೆ
‘ಗುಬ್ಬಚ್ಚಿಗಳು’ ಭಾರತೀಯ ಪನೋರಮಾಗೆ ಆಯ್ಕೆಯಾಗಿದೆ. ಕಂಗ್ರಾಟ್ಸ್ ಅಭಯ. ಬಿ ಸುರೇಶ್ ಹಾಗೂ ಶೈಲಜಾ ನಾಗ್ ತಮ್ಮ ಲಾಂಛನದಡಿ ನಿರ್ಮಿಸಿರುವ ಈ ಚಿತ್ರದ ಕಥೆ ಎನ್ ಎ ಎಂ ಇಸ್ಮಾಯಿಲ್ ಅವರದು. ಎಲ್ಲರಿಗೂ ಇನ್ನಷ್ಟು ಹೆಸರು ಸಿಗಲಿ ಎಂಬುದು ‘ಅವಧಿ’ ಹಾರೈಕೆ. ಇಲ್ಲಿವೆ ಚಿತ್ರದ ಒಂದಿಷ್ಟು ನೋಟಗಳು
ಆರ್ ವಿ ಭಂಡಾರಿ ಇನ್ನಿಲ್ಲ
-ಜಿ ಎನ್ ಮೋಹನ್
ಆರ್ ವಿ ಭಂಡಾರಿ ಇನ್ನಿಲ್ಲ ಎಂಬ ಸುದ್ದಿ ಕೇಳಿದಾಗಿನಿಂದ ಮನಸ್ಸು ಭಾರವಾಗಿದೆ. ಇತ್ತೀಚಿಗೆ ನಟರಾಜ್ ಹುಳಿಯಾರ್ ತೇಜಸ್ವಿ ಕುರಿತ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಮ್ಮ ಹೆಡ್ ಮಾಸ್ತರ್ ಗಳು ಖಾಲಿ ಆಗುತ್ತಿದ್ದಾರೆ ಎಂದಿದ್ದ. ಹೋರಾಟಕ್ಕೆ, ಸಾಮಾಜಿಕ ಚಳುವಳಿಗೆ, ಜನಪರ ಮನಸ್ಸು ರೂಪಿಸುವುದಕ್ಕೆ ತುಡಿದಿದ್ದ ಲಂಕೇಶ್, ತೇಜಸ್ವಿ, ರಾಮದಾಸ್ ಒಬ್ಬೊಬ್ಬರಾಗಿ ಇಲ್ಲವಾಗಿದ್ದು ಖೇದ ಉಂಟು ಮಾಡಿತ್ತು. ಆ ಸಾಲಿಗೆ ಇನ್ನೊಬ್ಬರು ಹೆಡ್ ಮಾಸ್ತರ್ ದಾಖಲಾದರು.
ಆರ್ ವಿ ಭಂಡಾರಿ ವೃತ್ತಿಯಲ್ಲಿಯೂ, ಸಾಮಾಜಿಕ ಬದುಕಿನಲ್ಲಿಯೂ ಹೆಡ್ ಮಾಸ್ತರ್ ಆಗಿದ್ದವರು. ಎಕ್ಕುಂಡಿ [...]
ಅವನಾಟವಿನ್ನಿಲ್ಲ ಎಂದು ಬರೆಯಲು ಮೂಡುತ್ತಲೇ ಇಲ್ಲ ಇಂಕು..
ಪ್ರೀತಿಯ ದಾದಾ
-ಅಪಾರ
ಬೇಗನೆ ಕತ್ತಲಾದ ಚಳಿಗಾಲದ ಸಂಜೆ ಒಲ್ಲದ ಮನಸಿಂದ ಆಟ ಮುಗಿಸಿದ್ದಾನೆ ಗಂಗೂಲಿ. ಹಠಾತ್ತನೆ ಹಿಡಿದ ಬಿರುಮಳೆಗೆ ಕರಗುತಿದೆ ಬಣ್ಣಬಣ್ಣದ ರಂಗೋಲಿ. ಅವನಾಟವಿನ್ನಿಲ್ಲ ಎಂದು ಬರೆಯಲು ಮೂಡುತ್ತಲೇ ಇಲ್ಲ ಇಂಕು. ಬಂಗಾಳದಲ್ಲಿ ದುರ್ಗಾಷ್ಟಮಿ ಸಂಭ್ರಮಕ್ಕೂ ಒಂದು ಬಗೆಯ ಮಂಕು. ಇನ್ನುಮುಂದೆ ಹಳೆಯ ವಿಡಿಯೋಗಳಲ್ಲಷ್ಟೆ ಕಾಣಬಹುದು ಕ್ರೀಸಿನಿಂದ ಮುನ್ನುಗ್ಗಿ ಬರುತ್ತಿರುವ ಬಂಗಾಳದ ಹುಲಿ; ಆಫ್‌ಸೈಡಿನಲ್ಲಿ ಎಂಟು ಜನ ಫೀಲ್ಡರುಗಳ ಕಣ್ತಪ್ಪಿಸಿ ಬೌಂಡರಿಯೆಡೆ ಸಾಗುವ ಬಾಲ್‌ಮಿಂಚು.
ಹನ್ನೆರಡು ವರ್ಷ ಆಡಿದ್ದಾನೆ, ವಯಸ್ಸಾಯ್ತು, ಮೊದಲಿನ ಸಾಮರ್ಥ್ಯ ಈಗ ಉಳಿದಿಲ್ಲ, ಅಷ್ಟಲ್ಲದೆ ಎಲ್ಲ ಒಳ್ಳೆಯ [...]
« Previous Entries Next Entries »







