ದಿನೇಶ್ ಅಮೀನ್ ಮಟ್ಟು ಫ್ರಂ ಡೆಲ್ಲಿ …

Posted on October 8, 2008. Filed under: ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ |

ದಿನೇಶ್ ಅಮೀನ್ ಮಟ್ಟು ಬರೆಯುತ್ತಿರುವ ಅಂಕಣ ‘ದೆಹಲಿ ನೋಟ’ವನ್ನು ನೀವೆಲ್ಲಾ ಓದುತ್ತಲೇ ಬಂದಿದ್ದೀರಿ. ಇತ್ತೀಚಿಗೆ ಕನ್ನಡ ಪುಸ್ತಕ ಪ್ರಾಧಿಕಾರ ಈ ಅಂಕಣಗಳ ಸಂಕಲನವನ್ನು ಹೊರತಂದಿದೆ.

ದಿನೇಶ್ ವಡ್ಡರ್ಸೆ ರಘುರಾಮ ಶೆಟ್ಟರ ‘ಮುಂಗಾರು’ ಗರಡಿಯಲ್ಲಿ ಪಳಗಿದವರು. ಸದಾ ತಮ್ಮ ನೋಟವನ್ನು ಹರಿತಗೊಳಿಸಿಕೊಂಡೇ ಬಂದವರು. ‘ಸುದ್ದಿಮಾತು‘ ಅವರ ಬಗ್ಗೆ ಒಂದು ಪುಟ್ಟ ಟಿಪ್ಪಣಿ ಬರೆದಿದೆ.

ಅಂಡು ಸುಟ್ಟ ಬೆಕ್ಕಿನಂತೆ ಅಡ್ಡಾಡುತ್ತಿರುವ ಯಡಿಯೂರಪ್ಪ ಅವರನ್ನು ಕುರಿತು “ಸುದ್ದಿ ಮಾತು” ಬರೆಯಬೇಕೆನ್ನುವಷ್ಟರಲ್ಲಿ ಪ್ರಜಾವಾಣಿ ಪತ್ರಿಕೆಯ ದೆಹಲಿ ಪ್ರತಿನಿಧಿ ದಿನೇಶ್ ಅಮೀನಮಟ್ಟು ಈ ವಾರದ ತಮ್ಮ “ದೆಹಲಿನೋಟ” ಅಂಕಣದಲ್ಲಿ ನಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ.

ಸುದ್ದಿಮಾತಿನ ಮಿತಿ ಚಿಕ್ಕದು. ನಾವು, ಹೆಚ್ಚೆಂದರೆ ಏಳೆಂಟು ಪ್ಯಾರಾ ಬರೆಯುತ್ತಿದ್ದೆವು. ಕೇವಲ ಅದರಲ್ಲೂ ಕೇವಲ ಯಡಿಯೂರಪ್ಪ ಸುತ್ತಲೇ ಗಿರಕಿ ಹೊಡೆಯುತ್ತಿದ್ದೆವು. ಆದರೆ ದಿನೇಶ್ ಸಮಗ್ರವಾದ ಲೇಖನವೊಂದನ್ನು ಮುಂದಿಟ್ಟಿದ್ದಾರೆ.

ಹಾಗಾಗಿ ಇಂದಿನ ಸುದ್ದಿ ಮಾತು ದಿನೇಶ್ ಅಮೀನಮಟ್ಟು ಅವರ ಕುರಿತು. ಮಾತಿಗೆ ಮುನ್ನ ನೀವೊಮ್ಮೆ ದೆಹಲಿ ನೋಟದ ಇವತ್ತಿನ ಲೇಖನ “ಮುಖ್ಯಮಂತ್ರಿಗಳೇ, ಅಧಿಕಾರ ನಿಮ್ಮ ಕೈಯಲ್ಲೇ ಇರಲಿ’ ಓದಿ.
ದಿನೇಶ್ ಅಮೀನ್ ಮಟ್ಟು ಬಲು ಅಪರೂಪದ ಪತ್ರಕರ್ತ. ಸದಾ ಸಮಾಜಮುಖಿ ಆಲೋಚನೆಯನ್ನೇ ಧ್ಯಾನಿಸುವ ಬರಹಗಾರ. ಕನ್ನಡ ಪತ್ರಿಕೆಗೆ ದೆಹಲಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಇಡೀ ರಾಷ್ಟ್ರದ ಸಮಗ್ರ ಪರಿಕಲ್ಪನೆಯನ್ನು, ಚಿತ್ರಣವನ್ನು ಸ್ಪಷ್ಟವಾಗಿ ಹೇಳುವ ಸಾಮರ್ಥ್ಯ ಇರುವ ಏಕೈಕ ಪತ್ರಕರ್ತ.

ದಿನೇಶ್ ತಮ್ಮ ಇಂದಿನ ಲೇಖನದಲ್ಲಿ ಯಡಿಯೂರಪ್ಪ ಯಾವ ಮಾದರಿಯನ್ನು ಅನುಸರಿಸಿ ರಾಜ್ಯವಾಳುತ್ತಿದ್ದಾರೆ ಎಂಬುದನ್ನು ಚರ್ಚಿಸಿದ್ದಾರೆ. ಈ ಮೊದಲು ಯಡಿಯೂರಪ್ಪ ಅವರೇ ಪಠಿಸಿದ “ಮೋದಿ ಮಾದರಿ”, “ವಾಜಪೇಯಿ ಮಾದರಿ”ಗಳನ್ನು ತಿಳಿಸಿದ್ದಾರೆ. ಹಾಗೆಯೇ ಗಾಂಧೀ, ಬಸವಣ್ಣನ ಮಾದರಿಗಳ ಬಗ್ಗೆಯೂ ಮಾತನಾಡಿದ್ದಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ಜನಪರ ಮಾದರಿಯಾದರೆ ಎಲ್ಲವನ್ನೂ ಸಾಧಿಸಬಹುದು ಎಂದಿದ್ದಾರೆ. ಈ ಮೂಲಕ ದಿನೇಶ್ ಅಮೀನಮಟ್ಟು ಅವರು ಯಡಿಯೂರಪ್ಪ ಅವರಿಗೆ ಜನಪರ ಮಾದರಿ ಹೇಳಿಕೊಟ್ಟಿದ್ದಾರೆ.

ಅದೇ ರೀತಿ ಅವರೂ ಕೂಡ ಇದನ್ನೇ ಪ್ರತಿಪಾದಿಸುವಂಥವರು. ಇತ್ತೀಚೆಗೆ ಜಮ್ಮು ಕಾಶ್ಮೀರ ವಿಚಾರವನ್ನು ಚರ್ಚಿಸಿದ್ದ ದಿನೇಶ್ ಆ ಲೇಖನದಲ್ಲೂ ಜಮ್ಮು-ಕಾಶ್ಮೀರದಲ್ಲಿ ಜನಮತ ಗಣನೆ ಆಗಲಿ ಎಂದು ಪ್ರತಿಪಾದಿಸಿದ್ದರು. ಹಾಗಾಗಿಯೇ ಅವರು ಜನಪರ ಮಾದರಿಯನ್ನು ಮುಂದಿಟ್ಟಿದ್ದಾರೆ. ಈಗಲಾದರೂ ಯಡಿಯೂರಪ್ಪನವರಿಗೆ ಜನಪರ ಮಾದರಿ ನೆನಪಾಗುವುದೆ?

Make a Comment

Make A Comment: ( 5 so far )

blockquote and a tags work here.

5 Responses to “ದಿನೇಶ್ ಅಮೀನ್ ಮಟ್ಟು ಫ್ರಂ ಡೆಲ್ಲಿ …”

RSS Feed for ಅವಧಿ Comments RSS Feed

ಸ್ವಂತ ಪತ್ರಿಕೆ ಇದ್ದರೆ ಲಂಕೇಶ್ ತರ ಬರೆಯುವ ತಾಕತ್ತುಳ್ಳ ದಿನೇಶ್ ರವರ ರಾಜಕಾರಣದ
ಒಳನೋಟಗಳು ಲಂಕೇಶ್ ರವರನ್ನ್ನೂ ಮೀರಿಸುವಂತಹದ್ದು.ಲಾಬಿಯ ಲಾಭಕ್ಕೆ ಬಲಿಯಾಗಿ
ಬರೆಯುವವರ ಮಧ್ಯೆ ಸ್ವಚ್ಚ,ಚೆತೋಹಾರಿ ವಿಶ್ಲೇಷಣೆ ಅವರದ್ದು.

Nishturathana,Nispaksyapath mattu
janaparakalaji-ivu dinesh avara
barahagala vaishistya. eevattina
patrakartharige mattu odugarige
begagiruvudu kooda ade alve?

Nishanth N.

athyantha niraashadaayaka kaalaghattadalli paya
nisuthiruva namage ‘dinesh amin mattu’avara ankana
chaitanyadayaka. Naalina namma nireekshe amin
ravaru.
Tumkur naveed

I am a regular reader of Dehalinnota. Frist
time in Kannada, a kannada journalist analysing
National politics so beautifully,in kannada.
His depth of political knowledge,commitment to
the common people whether they are from bihar,
UP or gujarath is loudable. His writings are
model of good journalism
-Purushottam K.V.

ದಿನೇಶ್ ಅಮ್ಮಿನಮಟ್ಟು ಅವರ ಅಂಕಣಗಳು ಓದಿ ಮರೆಯುವಂಥವಲ್ಲ.
ಅವು ಈಗ ಪುಸ್ತಕ ರೂಪದಲ್ಲಿ ಓದುಗರಿಗೆ ಸಿಗುತ್ತಿರುವುದು ಸಂತೋಷದ ಸಂಗತಿ.
ಅವರ ಬಗ್ಗೆ ನೀವು ಹೇಳಿರುವ ಮಾತುಗಳನ್ನು ನಾನು ಅನುಮೋದಿಸುತ್ತೇನೆ.

ಡಾ ಪಂಡಿತಾರಾಧ್ಯ ಮೈಸೂರು


Where's The Comment Form?

  • Flickr Photos

    pa sa art

    sketch12

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

  • ತಿಂಗಳ ಕಂತು

  • a

  • Twitter Updates

    • ‘ಛಂದ’ದಲ್ಲಿ ಸಡಗರ: ಈ ದಿನ ಬೆಂಗಳೂರಿನಲ್ಲಿ ಪುಸ್ತಕಗಳ ಸಡಗರ. ಪುಸ್ತಕ ಪ್ರೇಮಿಗಳಿಗೆ ತಾವು ಎಲ್ಲಿರಬೇಕು ಎಂದು ಗೊಂದಲ ಹು.. http://tinyurl.com/mxu6jh 2 hours ago
    • Ravi hegde recommends…: ಇತ್ತೀಚೆಗೆ ನನಗೆ ತುಂಬಾ ಇಷ್ಟವಾದ ಎರಡು ಪುಸ್ತಕಗಳಲ್ಲಿ Stay Hungry Stay Foolish ಕೂಡ ಒಂದು... http://tinyurl.com/mnlcfy 1 day ago
    • ವೀಣೆಗೊಬ್ಬರು ರಾಜ: http://tinyurl.com/kwfgkn 2 days ago
    • ಸುಳಿಯಂಚಿನಲ್ಲಿ ಹಿರೇಜಂಬೂರು: http://tinyurl.com/mpnezo 2 days ago
    • ಅಸ್ಟ್ರೋ ಯೋಗಿ ಫಾರ್ ಮಕರ..: ಖಾಸಗಿ ಡೈರಿ -ಎಂ ಬಿ ಶ್ರೀನಿವಾಸ ಗೌಡ ನಾವೇ ತೋಡಿಕೊಂಡ ಖೆಡ್ಡಾಕ್ಕೆ ಬೀಳುವುದೆಂದರೆ ಇದೇ ಇರಬಹುದು ನೋಡಿ .. http://tinyurl.com/mgh3nd 2 days ago

Liked it here?
Why not try sites on the blogroll...