Archive for October, 2008
ಶಿಕ್ಷಣ ಸಚಿವರ ಪಠ್ಯ ಬದಲಾವಣೋತ್ಸಾಹ
-ಎನ್ ಎ ಎಂ ಇಸ್ಮಾಯಿಲ್
‘ಬರೆವ ಬದುಕಿನ ತಲ್ಲಣ’ ಬ್ಲಾಗ್ ನಿಂದ
ಮನುಷ್ಯನನ್ನು ಪ್ರಾಣಿಗಳಿಂದ ಭಿನ್ನವಾಗಿಸುವ ಮುಖ್ಯ ಲಕ್ಷಣಗಳ ಲ್ಲೊಂದು ಭಾಷೆ. ಹಾಗಿದ್ದರೆ ಪ್ರಾಣಿಗಳಿಗೆ ಭಾಷೆ ಇಲ್ಲವೇ? ಅವುಗಳೂ ತಮ್ಮದೇ ಆದ ರೀತಿಯಲ್ಲಿ ಸದ್ದುಗಳನ್ನು ಸೃಷ್ಟಿಸುವ ಮೂಲಕ ಪರಸ್ಪರ ಸಂವಹನವನ್ನು ಸಾಧಿಸುತ್ತವೆಯಲ್ಲವೇ ಎಂಬ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಈ ಪ್ರಶ್ನೆಗಳು ಸರಿಯಾಗಿಯೇ ಇವೆ. ಆದರೆ ಇವು ಮನುಷ್ಯನ ಭಾಷೆಯ ವೈಶಿಷ್ಟ್ಯವನ್ನು ಅರಿಯದೇ ಇರುವುದರಿಂದ ಹುಟ್ಟಿರುವ ಪ್ರಶ್ನೆಗಳು.
ಪ್ರಾಣಿಗಳ ಭಾಷೆಯೆಂದರೆ ನಿರ್ದಿಷ್ಟ ಸಂಖ್ಯೆಯ ಸಂಜ್ಞೆಗಳು ಮಾತ್ರ. ಹಸಿವಾದಾಗ ಒಂದು ಸಂಜ್ಞೆ, [...]
ಅಮೃತಾ ಪ್ರೀತಂ ಇನ್ನಿಲ್ಲವಾದ ದಿನ ಇಂದು
ಒಂದು ರಸೀತಿ ಟಿಕೆಟ್ ನಷ್ಟು ಬದುಕು ಮಾಡಿದ ಅಮೃತಾ ಪ್ರೀತಂ ಇನ್ನಿಲ್ಲವಾದ ದಿನ ಇಂದು. ನೆನಪುಗಳ ಹುಚ್ಚು ಅಲೆಯನ್ನು ಮೀಟಿದ ಅಮೃತಾ ಅವರನ್ನು ನೆನೆಯುತ್ತಿದ್ದೇವೆ. ಪ್ರೀತಂ ಬಗ್ಗೆ ‘ಒಳಗೂ ಹೊರಗೂ’ ಬ್ಲಾಗ್ ಇನ್ನಿಲ್ಲದಷ್ಟು ಬರೆದಿದೆ.
Read Full Post | Make a Comment ( None so far )‘ನೀನಾಸಂ’ ಜುಗಲಬಂದಿ
ನೀನಾಸಂ ನೆಲದಲ್ಲಿ ನೆನಪ ಮೆರವಣಿಗೆ
ಸಂಜೆಗೆ ಶಂಕರ್ ಮೊಕಾಶಿ ಪುಣೇಕರ್ ರ ‘ನಟನಾರಾಯಣಿ’ ನಾಟಕ ತಾನೆ? ಸ್ನೇಹಿತೆಯೊಬ್ಬಳು ಹಲ್ಲುಜ್ಜುತ್ತಾ ಕೇಳಿದಳು. ತುಸು ತಡವಾಗಿಯೇ ನನಗದು ಅರ್ಥವಾಯಿತು, ಅವಳು ಬಾಯಲ್ಲಿ ಟೂತ್‌ಬ್ರಶ್ ಇಟ್ಟುಕೊಂಡೇ ಮಾತನಾಡಿದ್ದರಿಂದ. ನಂತರ ನಾನು ಹೌದೆಂದೆ. ಚಿಕ್ಕವಳಿದ್ದಾಗ ನೋಡುತ್ತಿದ್ದ ಕಂಪನಿ ನಾಟಕದ ನೆನಪು ಬೆನ್ನುಹತ್ತಿತು. ಹಾಗೆ ಬೆನ್ನು ಹತ್ತಿದ್ದೇ, ಮನಸಿನೊಳಗೆ ನಡೆಯುತ್ತಿದ್ದ ಮೆರವಣಿಗೆಯೊಳಗಿನ
ಪಲ್ಲಕ್ಕಿ ನಿಧಾನವಾಗಿ ಹಿಮ್ಮುಖ ಚಲಿಸಲಾರಂಭಿಸಿತು. ಹದಿನೈದಿಪ್ಪತ್ತು ವರ್ಷಗಳ ಹಿಂದಿನದೆಲ್ಲವೂ ದೃಶ್ಯಗಳಂತೆ ಕಾಣಲಾರಂಭಿಸಿದವು.
ಸಂಪೂರ್ಣ ಓದಿಗೆ ಭೇಟಿ ಕೊಡಿ : ಆಲಾಪ
+++
ಹೆಗ್ಗೋಡಿನ ಬೆಳಗಿನಲ್ಲೊಂದು ಸ್ವಗತ
ಸಾಲದ್ದಕ್ಕೆ ಹಿಂದಿನ [...]
ಸಂಚಯ ಕಾವ್ಯ ಮತ್ತು ಲೇಖನ ಸ್ಪರ್ಧೆ
ನಂ. 100, 2ನೇ ಮುಖ್ಯರಸ್ತೆ, 6ನೇ ಬ್ಲಾಕ್, 3ನೇ ಹಂತ, 3ನೇ ಘಟ್ಟ, ಬನಶಂಕರಿ
ಬೆಂಗಳೂರು – 560 085
ಫೋನ್ ನಂ. 080-26791925 ಮೊಬೈಲ್: 98440 63514
prahlad118@yahoo.com
ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಂಚಯ ಸಾಹಿತ್ಯ ಪತ್ರಿಕೆಯು ಈ ವರ್ಷವೂ ಕನ್ನಡದ ಕಾವ್ಯ ಮತ್ತು ಲೇಖನ ಸ್ಪರ್ಧೆಗಳನ್ನು ಆಯೋಜಿಸಿದೆ.
ಕಾವ್ಯ ಸ್ಪರ್ಧೆ
ಇದರಲ್ಲಿ ಭಾಗವಹಿಸುವವರು ತಮ್ಮ ಸ್ವಂತ ರಚನೆಯ ಎರಡು ಕವಿತೆಗಳನ್ನು ಕಳುಹಿಸಬೇಕು. ಅನುವಾದಗಳಾಗಲೀ, ಈಗಾಗಲೇ ಪ್ರಕಟಗೊಂಡಿರುವ ಕವಿತೆಗಳಿಗಾಗಲೀ ಅವಕಾಶವಿಲ್ಲ.
ಲೇಖನ ಸ್ಪರ್ಧೆ
ಈ ಸ್ಪರ್ಧೆಗೆ ಕೊಟ್ಟಿರುವ ಐದು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ [...]
ಜೋಗಿ ಕಹಾನಿ
ಅದೇ ನನ್ನ ಉತ್ತರ
ನೂರು ಪತ್ರ ಬರೆದಿದ್ದೀನಿ. ಒಂದಕ್ಕೂ ಉತ್ತರ ಬರೆದಿಲ್ಲ.
ಶಿಷ್ಯ ಆಕ್ಷೇಪಿಸುತ್ತಾ ಗೊಣಗಿಕೊಂಡ. ಗುರು ಹೇಳಿದ:
ಅದೇ ನನ್ನ ಉತ್ತರ’.
ಇಲ್ಲಿ, ಡಾರ್ಕ್ ರೂಂನಲ್ಲಿ ನಾನು ’ನಾನು’ ಮಾತ್ರ ಆಗಿರುತ್ತೇನೆ
‘ಮೌನ ಕಣಿವೆ’ ಸುರಗಿ ಅವರ ಬ್ಲಾಗ್. ಸುರಗಿ ಯಾರು? ಈ ಪ್ರಶ್ನೆ ಬ್ಲಾಗ್ ಪ್ರಪಂಚದಲ್ಲಿ ಓಡಾಡುತ್ತಲೇ ಇದೆ. ಅನಾಮಿಕತೆ ಉಳಿಸಿಕೊಳ್ಳುವುದರ ಹಿಂದೆ ಇರುವ ಸ್ವಾತಂತ್ರ್ಯವನ್ನು ಸುರಗಿ ಇಲ್ಲಿ ವಿವರಿಸಿದ್ದಾರೆ. ಈ ಹಿಂದೆ ಎನಿಗ್ಮಾ ಬಳಗ ಈ ಅನಾಮಿಕತೆಯ ಬಗ್ಗೆ ಬರೆದ ಬರವಣಿಗೆಗೆ ಇದು ಪೂರಕ ಓದು-
ಡಾರ್ಕ್ ರೂಂನಲ್ಲಿ ಕುಳಿತ್ಯಾಕೆ ಬರೀಬೇಕು?
ಕೆಲವು ಜನ ಮೆಸೇಜ್ ಮಾಡಿ ’ಸುರಗಿ ನಿಮ್ಮ ನಿಜವಾದ ಹೆಸರಾ?’ ಎಂದು ಕೇಳಿದ್ದಾರೆ. ಹೆಸರಿನಲ್ಲೇನಿದೆ ಮಹಾ ಎಂದುಕೊಂಡರೂ, ಎಲ್ಲಾ ಇರುವುದು ಹೆಸರಲ್ಲೇ ಎಂಬುದು ನನಗೆ ಗೊತ್ತಿದೆ.
ಸಾರ್ವಜನಿಕ [...]
ಕಿ ರಂ ಮತ್ತು ಚಾಕಲೇಟು
ಭಯದ ಬಣ್ಣ ಹೇಗಿರುತ್ತದೆ?
`ಮೋಹನದಾಸ’ ಉದಯಪ್ರಕಾಶರ ನೀಳ್ಗತೆ. ಗಾತ್ರದ ದೃಷ್ಟಿಯಿಂದ ಇದನ್ನು ಕಾದಂಬರಿ ಎನ್ನಬಹುದಾದರೂ ನೀಳ್ಗತೆ ಎನ್ನುವುದೇ ಸೂಕ್ತ. ಇದನ್ನು ಹಿಂದಿಯಿಂದ ಅನುವಾದಿಸಿದವರು ಆರ್.ಪಿ.ಹೆಗಡೆ. ಇವರು `ತಿರೀಛ’ ಕತೆಯನ್ನು `ದೇಶಕಾಲ’ದಲ್ಲಿ ಓದಿ ಪ್ರಭಾವಿತರಾಗಿ ಉದಯಪ್ರಕಾಶರ `ಮೋಹನದಾಸ’ ಎಂಬ ನೀಳ್ಗತೆಯನ್ನು ತರಿಸಿ ಓದುತ್ತಾರೆ ಮತ್ತು ವಸ್ತು, ಶೈಲಿ, ತಂತ್ರದ ದೃಷ್ಟಿಯಿಂದ ಅದ್ಭುತವೆನಿಸುವ ಈ ನೀಳ್ಗತೆ ಕನ್ನಡಿಗರೆಲ್ಲರನ್ನು ತಲುಪಬೇಕೆಂಬ ಉದ್ದೇಶದಿಂದ ಅನುವಾದಿಸಲು ಮುಂದಾಗುತ್ತಾರೆ. ಆರ್.ಪಿ.ಹೆಗಡೆಯವರ ಈ ಘನ ಅಭಿರುಚಿಯ ಫಲಶ್ರುತಿ ಇದೀಗ ಲೋಹಿಯಾ ಪ್ರಕಾಶನದಿಂದಾಗಿ ನಮ್ಮೆಲ್ಲರ ಕೈಸೇರುವಂತಾಗಿರುವುದು ನಿಜಕ್ಕೂ ಅಭಿನಂದನೀಯ.
ಸಂಪೂರ್ಣ ಓದಿಗೆ [...]
ಜೋಗಿ ಅವರ ‘ಹನಿ ಕಹಾನಿ’
ಬೆಲೆ ಎಷ್ಟು?
ಇಬ್ಬರು ದರವೇಶಿಗಳು ಕಿತ್ತಾಡುತ್ತಿದ್ದರು. ಒಬ್ಬ ಇನ್ನೊಬ್ಬನಿಗೆ ಹೇಳುತ್ತಿದ್ದ:
ನಿನಗೆ ಸಿಕ್ಕಿರುವ ಈ ವೈರಾಗ್ಯದ ಬದುಕಿನ ಬೆಲೆ ನಿನಗೆ ಗೊತ್ತಿಲ್ಲ? ತುಂಬ ಅಗ್ಗಕ್ಕೆ ಅದು ನಿನಗೆ ಸಿಕ್ಕಿಬಿಟ್ಟಿದೆ ನೋಡು, ಅದಕ್ಕೆ ಈ ಉಡಾಫೆ ನಿನಗೆ. ನಿನ್ನಂಥವನಿಗಿದು ಸಿಕ್ಕಿದ್ದು ದಂಡಕ್ಕೆ.’
ಇನ್ನೊಬ್ಬನಿಗೆ ಸಿಟ್ಟು ಬಂತು:
ಅಷ್ಟೆಲ್ಲ ಮಾತಾಡ್ತೀಯಲ್ಲಪ್ಪಾ.. ನೀನೇನು ಮಹಾ ಕೊಟ್ಟಿದ್ದೀಯಾ? ಎಷ್ಟು ಕೋಟಿ ಕೊಟ್ಟು ಕೊಂಡುಕೊಂಡೆ ಈ ಬದುಕನ್ನ?’ ಕೇಳಿದ.
ನನ್ನ ಸಾಮ್ರಾಜ್ಯವನ್ನೇ ಕೊಟ್ಟು ತಗೊಂಡೆ ಕಣಯ್ಯಾ.. ಆದ್ರೂ ತುಂಬ ಕಡಿಮೆ ಬೆಲೆಗೆ ಸಿಕ್ತು ಅನ್ನಿಸ್ತಿದೆ ನಂಗೆ’.
‘ಮುತ್ತುಪ್ಪಾಡಿ’ ಸೃಷ್ಟಿಯಾದದ್ದು ಹೀಗೆ…
ಮೂರು ದಶಕದ ಕತೆ
ಮೂವತ್ತು ವರ್ಷಗಳು ಕಳೆದು ಹೋದವು.`ಬದ್ದತೆಯೆಂಬುದು ಸೃಜನಶೀಲತೆಗೆ ಮೊದಲ ಶತ್ರು, ಎಂಬ ಫಲಕ ತೂಗುತ್ತಿತ್ತು. ಪಕ್ಕದಲ್ಲಿ, `ಬರಹದಿಂದ ಬದುಕು ಬದಲು ಮಾಡಲಾಗದು’ ಎಂಬ ವಾದವನ್ನು ಸುಳ್ಳು ಮಾಡುತ್ತಿದ್ದ, ಹಲವು ನಿಲುವುಗಳಿಗೆ ಬದ್ದವಾದ, ಧರ್ಮಗ್ರಂಥಗಳು ಕಣ್ಣೆದುರಿಗಿದ್ದವು. ಆದ್ದರಿಂದ, ಕೆಲವು ಸೂತ್ರಗಳಿಗೆ ಬದ್ದನಾಗಿಯೇ ನಾನು ಬರವಣಿಗೆ ಆರಂಭಿಸಿದ್ದೆ; ಯಾಕೆಂದರೆ ನನ್ನೆದುರು ಎರಡು ಗುರಿಗಳಿದ್ದವು.
ಕನ್ನಡದ ಓದುಗರಿಗೆ ಅಷ್ಟೇನೂ ಪರಿಚಿತವಲ್ಲದ ಜನಸಮೂಹವೊಂದನ್ನು (ಅವರನ್ನು ದ್ವೀಪವೆಂದೂ ಕರೆಯಲಾಗುತ್ತಿತ್ತು) `ಹೌದಾ, ಅವರು ಹಾಗಿಲ್ಲವಾ? ಎಂಬಂತೆ ಉಳಿದವರಿಗೆ ಪರಿಚಯಿಸುವುದು ಮೊದಲ ಗುರಿ. ಅಂತೆಯೇ, ಕನ್ನಡದ ಓದಿಗೆ [...]
ಯಾರೂ…?
‘ಸಿರಿ’ ಬಂದ ಕಾಲಕ್ಕೆ…
-ಮೃಗನಯನಿ
ಟೆರೇಸಿನ ಮೂಲೆಯೊಂದರಲ್ಲಿ ಜಾಗ ಹಿಡಿದು ಯಾವುದೋ ಯೋಚನೆಯಲ್ಲಿ ಮಗ್ನಳಾಗಿದ್ದ ಬಬ್ಲಿಯ ಬಳಿಗೆ ಹೋಗಿ ಕೂತೆ. ಅವಳಿಗೆ ಏನೋ ಹೇಳಬೇಕಿತ್ತು ನಾನು. ಹೇಗೆ ಹೇಳುವುದೆಂದು ತಿಳಿಯುತ್ತಿರಲಿಲ್ಲ, ಹೇಳುವುದು ಹೇಗೆಂದು ಯೋಚಿಸುತ್ತಾ ಟೆರೇಸಿನ ಗೋಡೆಯ ಒರಟು ಚರ್ಮಕ್ಕೆ ನನ್ನ ಬೆನ್ನೊರಗಿಸಿ ಕೂತು ನಿಟ್ಟುಸಿರಿಟ್ಟೆ.
ಇದೆಲ್ಲಾ ಶುರುವಾಗಿದ್ದು ಮೂರುದಿನದ ಹಿಂದೆ, ನಾನು ಮಧು ರೂಮಿಗೆ ಹೋಗಿಬಂದಾಗಿನಿಂದ. ಮಾರನೇ ದಿನ ಸೈಕಾಲಜಿ ಇಂಟರ್ನಲ್ಸ್ ಇತ್ತು ನನ್ನ ಬಳಿ ಒಂದು ಪಾಠದ ನೋಟ್ಸ್ ಇರಲಿಲ್ಲ. ಇಡೀ ಹಾಸ್ಟಲ್ಲಿನ ಏಳ್ನೂರುಜನರಲ್ಲಿರುವ ನನ್ನ ಏಕೈಕ ಕ್ಲಾಸ್ [...]
« Previous Entries


