Archive for September 30th, 2008
ನನ್ನ ದೇವರು
-ದೇವನೂರ ಮಹಾದೇವ
ಕನ್ನಡದ ಪ್ರಸಿದ್ದ ವಾರಪತ್ರ್ರಿಕೆಯೂಂದು ‘ನನ್ನ ದೇವರು’ ಹೆಸರಡಿ ಲೇಖಕರ, ಚಿಂತಕರ ಅನಿಸಿಕೆಗಳನ್ನು ಪ್ರಕಟಿಸುತ್ತಿತ್ತು. ಅಕಸ್ಮಾತ್ ನನ್ನನ್ನು ಕೇಳಿದರೆ ಇರಲಿ ಎಂದು ನಾನು ಬರೆಯ ಬೇಕಾದುದನ್ನು ಅಂದಾಜಿಸಿಕೊಂಡಿದ್ದೆ. ಆದರೆ ಪತ್ರಿಕೆಯವರು ನನಗೆ ದೇವರಿಲ್ಲ ಎಂದು ಅಂದಾಜಿಸಿಕೂಂಡೋ ಏನೋ ನನ್ನನ್ನು ಕೇಳಲೇ ಇಲ್ಲ.
ನಾನು ಅಂದಾಜಿಸಿಕೊಂಡಿದ್ದ ನನ್ನ ದೇವರು ನನ್ನೊಳಗೇ ಉಳಿಯಿತು.
ನನ್ನ ದೇವರು ನನ್ನೊಳಗೆ ಉಳಿದಿರುವುದು ಹೀಗೆ:
ಕವಿ ಸಿದ್ದಲಿಂಗಯ್ಯ ನನಗೆ ಒಮ್ಮೆ ಹೇಳಿದ ಕತೆಯಲ್ಲಿ ಮನೆಮಂಚಮ್ಮ ಎಂಬ ಗ್ರಾಮದೇವತೆಯ ಒಳಗಿಂದ ನನ್ನ ದೇವರು ಒಡಮೂಡುತ್ತದೆ-ಒಂದ್ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ [...]
ಆಮೇಲೆ ಏನಾಯಿತು ಅಂತ ಹೇಳಲಿಕ್ಕೆ ಅವಳಿಗೆ ನಾಚಿಕೆ
‘ಮನದ ಮೊಗ್ಗೊಡೆದು ಘಮಘಮಿಸಿ-ಅಕ್ಷರ ಹೂ‘ ಎನ್ನುವ ಘೋಷವಾಕ್ಯದೊಂದಿಗೆ ಬ್ಲಾಗ್ ಅಂಗಳಕ್ಕೆ ಇಳಿದವರು ಪ್ರಿಯಾ ಕೆರ್ವಾಶೆ. ಯಾರಿದು ಎನ್ನುವವರಿಗೆ ಅವರೇ ಕೊಡುವ ಉತ್ತರ- ನನ್ಹೆಸ್ರು ಪ್ರಿಯಾ, ದಟ್ಟ ಕಾಡುಗಳ ನಡುವೆ ಪುಟ್ಟ ಕುಂಜದಂತಹ ನನ್ನೂರು ಕೆರ್ವಾಶೆ. ಪಕ್ಕದಲ್ಲೇ ಮಲೆಬೆಟ್ಟು ಕಾಡು…ಯಾವಾಗಲೂ ಜೀವತುಂಬಿ ಹರಿವ ಸ್ವರ್ಣೆ… ಆದರೂ ನನ್ನದು ಖಾಲಿ ಬದುಕು ..ಖಾಸಗಿ ಟಿವಿ ಚಾನಲ್ ನಲ್ಲಿ ಕೈತುಂಬಾ ಕೆಲಸ..
ಪ್ರಿಯಾ ಚಾನಲ್ ಗಳ ವೇಗದ ಓಟದ ಮಧ್ಯದಲ್ಲಿಯೇ ಅದೇಗೆ ಅಕ್ಷರ ಹೂ ಮೂಡಿಸಲು ಸಮಯ ಹೊಂದಿಸಿಕೊಂಡರೋ ಗೊತ್ತಿಲ್ಲ. ಅವರ [...]
Read Full Post | Make a Comment ( 8 so far )

