Archive for September 29th, 2008
ಸಣ್ಣ ಪದ್ಯವೊಂದು ಗಾಂಧಿ ಆಶ್ರಮಕ್ಕೆ ಬಂತು
ಗಾಂಧಿ ದಿನ ಹತ್ತಿರವಾಗುತ್ತಿದೆ. ಗಾಂಧಿ ಎಂಬ ಅಜ್ಜನನ್ನು ಆರೋಪಗಳ ಕಟಕಟೆಯಲ್ಲಿ ನಿಲ್ಲಿಸುವ ಮನಸ್ಸುಗಳೂ ಹೆಚ್ಚಿವೆ. ಈ ನಡುವೆ ತಣ್ಣಗೆ ತನ್ನ ಸತ್ವದಿಂದ ಕಾಡಿದ ಕವಿತೆ ‘ಒಳಗೂ…ಹೊರಗೂ..’ಬ್ಲಾಗ್ನಲ್ಲಿ ಸಿಕ್ಕಿತು. ಗಾಂಧಿ ಎಂಬ ಗಾಂಧೀ ಇಲ್ಲಿದಾರೆ ಅನಿಸುತ್ತಿದೆ-
ಒಂದು ದಿನ ಸಣ್ಣ ಪದ್ಯವೊಂದು
ಗಾಂಧಿ ಆಶ್ರಮಕ್ಕೆ ಬಂತು;
ಗಾಂಧಿಯನ್ನು ನೋಡಬೇಕಿತ್ತು ಅದಕ್ಕೆ.
ಗಾಂಧಿಯ ಕೈಯಲ್ಲಿ ನೂಲಿತ್ತು.
ಬಾಯಲ್ಲಿ ರಾಮನಾಮ.
ಬಾಗಿಲಲ್ಲಿ ನಿಂತಿದ್ದ ಪದ್ಯವನ್ನು
ಅವರು ನೋಡಲೇ ಇಲ್ಲ.
ಪದ್ಯ,
ನಾನೊಂದು ಭಜನೆಯಾದರೂ
ಆಗಬೇಕಿತ್ತು ಅಂದುಕೊಂಡಿತು,
ಗಂಟಲು ಸರಿ ಮಾಡಿಕೊಂಡಿತು. ಗಾಂಧಿ ಬೀರಿದರು ಓರೆ ನೋಟ,
ನರಕವನ್ನೇ ಕಂಡ ತಮ್ಮ
ಕನ್ನಡಕದ ಮೂಲಕ.
‘ಎಂದಾದರೂ ನೂಲುವ ಕೆಲಸ ಮಾಡಿದ್ದೀಯಾ?’
‘ಎಂದಾದರೂ ಜಾಡಮಾಲಿಯ
ಕೈಗಾಡಿ [...]
ನಿಜ.. ಬೆಕ್ಕಿನ ಮರಿ ಬೆಲೆ 35,000 ರೂಪಾಯಿ…!
ಮಲ್ಲಿಕಾರ್ಜುನ ತಿಪ್ಪಾರ ಅವರ ಬ್ಲಾಗ್- ನನ್ನ ಹಾಡು. ಸರಳವಾದ ವಿಷಯಗಳನ್ನು ಸ್ವಾರಸ್ಯಕರವಾಗಿ ಬರೆಯುವ ಮಲ್ಲಿಕಾರ್ಜುನ್ ಅವರು ಇತ್ತೀಚಿಗೆ ೩೫ ಸಾವಿರ ರೂಪಾಯಿಯ ಬೆಕ್ಕನ್ನು ಕಂಡು ‘ಅಬ್ಬಾ’ ಎಂದು ಉದ್ಘಾರವೆತ್ತಿದ್ದಾರೆ -
ನಿಜ.. ಬೆಕ್ಕಿನ ಮರಿ ಬೆಲೆ 35,000 ರೂಪಾಯಿ…! ಭಾರತ ಬಡವರ ರಾಷ್ಟ್ರ ಅಂತ್ ಯಾರು ಹೇಳ್ತಾರೆ. ಇಷ್ಟೆ ಬೆಲೆಯ ಏಳೆಂಟು ಬೆಕ್ಕಿನ ಮರಿಗಳನ್ನು ಹೊಂದಿರುವ ಒಡೆಯರು ಬೆಂಗಳೂರಿನಲ್ಲಿದ್ದಾರೆಂದರೆ ಹುಬ್ಬೇರಿಸಬೇಡಿ.
ಮೊನ್ನೆ ಬೆಂಗಳೂರಿಗೆ ಹೋಗಿದ್ದೆ. ನನ್ನ ಮಾಧ್ಯಮ ಮಿತ್ರ ಯಾವುದೋ ಒಂದು ಫೆಸ್ಟ್ ವರದಿ ಮಾಡಲು ನನ್ನನ್ನು ತನ್ನ [...]


