Archive for September 27th, 2008
ಪ್ರತಿಭಾ ನಂದಕುಮಾರ್ ಎಂಬ ಕವಿತೆ
ಆಹಾ ಪುರುಷಾಕಾರಂ! ಎಂಬ ಉದ್ಘಾರವೆತ್ತುವಂತೆ ಮಾಡಿದವರು ಪ್ರತಿಭಾ ನಂದಕುಮಾರ್. ಮೇ ಫ್ಲವರ್ ಮೀಡಿಯಾ ಹೌಸ್ ನ ಫಿಶ್ ಮಾರ್ಕೆಟ್ ನಲ್ಲಿ ಬೈ ಟು ಕಾಫೀ ಹೀರುತ್ತಾ ಕವಿತೆ ಓದಿದರು. ತಮ್ಮ ಕಾವ್ಯ, ತಮ್ಮನ್ನು ರೂಪಿಸಿದ ಪರಿಸರದ ಬಗ್ಗೆ ಮಾತನಾಡಿದರು. ಅದರ ಒಂದು ನೋಟ ಇಲ್ಲಿದೆ.
ನಾಳೆ ‘ಓದುಬಜಾರ್’ ನಲ್ಲಿ ಇನ್ನಷ್ಟು ಫೋಟೋಗಳನ್ನು ನೋಡಿ.
‘ಅವಧಿ’ಗಾಗಿಯೇ ಡಿ ಜಿ ಮಲ್ಲಿಕಾರ್ಜುನ್ ತೆಗೆದ ಪ್ರತಿಭಾ ಪೋರ್ಟ್ರೈಟ್ ಗಳು ನಾಳೆ ಕಾಣಸಿಗುತ್ತದೆ
ವಿಚ್ ಗಾ೦ಧಿ? ರಾಜೀವ್ ಆರ್ ಇ೦ದಿರಾ?
ಶಶಿಧರ ಭಟ್ ಏಷ್ಯಾನೆಟ್ ಸುವರ್ಣ ಸುದ್ದಿ ವಿಭಾಗದ ಮುಖ್ಯಸ್ಥರು. ಈ ಲೇಖನದಲ್ಲಿ ತಾವು ಕಳೆದುಕೊಂಡ ಒಂದು ಲೋಕಕ್ಕೆ ನೆನಪಿನ ದೋಣಿಯಲ್ಲಿ ಪಯಣಿಸಿದ್ದಾರೆ-
-ಶಶಿಧರ್ ಭಟ್
ಆಗಸ್ಟ್ ತಿ0ಗಳು ಬ0ದಾಗ ಅದೇ ನೆನಪು. ಆಕಾಶವೇ ನೀರಾಗಿ ಹರಿಯುತ್ತಿದೆಯೇನೋ ಎ0ಬ0ತೆ ಸುರಿಯುವ ಮಳೆ. ಬಣ್ಣದ ಕೊಡೆಯನ್ನು ಹಿಡಿದು ಮಳೆಯ ಆನ0ದವನ್ನು ಅನುಭವಿಸುತ್ತ ಹೆಜ್ಜೆ ಹಾಕುತ್ತಿದ್ದ ನಾವು.
ಮಳೆ ತು0ಬಾ ಜೋರಾದಾಗ ಶಾಲೆ ಮತ್ತು ಮನೆಯ ನಡುವೆಯಿದ್ದ ಹೊಳೆ ತು0ಬಿ ಹರಿಯುತ್ತಿತ್ತು. ಹೊಳೆಗೆ ಹಾಕಿದ್ದ ಅಡಿಕೆ ಮರದ ಸ0ತ ನೀರಿನಲ್ಲಿ ಮುಳುಗಿ ಹೋಗುತ್ತಿತ್ತು. ನಾವು [...]
ಎಸ್ ಪಿ ಗೀತೆಯೇ ನಮಗೆ ಸುಪ್ರಭಾತ
-ಅಮೃತಾ
ಊರ ಮು0ದಿನ ಕ0ಬಕ್ಕೆ ಸುತ್ತಿದ್ದ ತೋರಣದಲ್ಲಿ ಇನ್ನೂ ಹಸಿರು ಆರಿಲ್ಲ. ಊರಿಗೆ ಊರೇ ಸಿ0ಗಾರಗೊ0ಡಿದೆ. ಹಾಗೇ ಮನಸ್ಸೂ ಸಿ0ಗಾರಗೊ0ಡಿದೆ. ಊರಿನ ಜಾತ್ರೆಗೆ ಸಿದ್ಧವಾಗಬೇಕಿದೆ. ಮನೆಯಲ್ಲೆಲ್ಲಾ ಅದೇ ಮಾತು, ಅದೇ ಕಥೆ. ಅಟ್ಟದಲ್ಲಿ ಬೇಡದಿದ್ದು, ಬೇಕಿದ್ದನ್ನೆಲ್ಲಾ ಒತ್ತಟ್ಟಿಗಿಟ್ಟು ಸಾಕಪ್ಪಾ ಎನ್ನುವಾಗ ಮಧ್ಯಾಹ್ನ 2 ಗ0ಟೆ. ಇನ್ನು ಉಳಿದಿರುವುದು ಅರ್ಧ ಹಗಲು ಮತ್ತು ಪೂರ್ತಿ ರಾತ್ರಿ. ಮತ್ತೊ0ದು ಹಗಲು ಬರುವಾಗ ದೇವಸ್ಥಾನದ ಮು0ದೆ ದೇವರು ಕುಣಿಯಲಿಕ್ಕೆ ಶುರು ಮಾಡ್ತಾನೆ.
ಅದಕ್ಕಿ0ತಲೂ ಮೊದಲು ಬೆಳಗ್ಗೆ ಆರಾಗುವ ಹೊತ್ತಿಗೆ ಬೆ0ಗಳೂರಿನಿ0ದ ಬರುವವರು ಬೇಕಾದಷ್ಟು ಮ0ದಿಯಿದ್ದಾರೆ. [...]
Read Full Post | Make a Comment ( 1 so far )‘ಛಂದ ಮುಖಪುಟ ವಿನ್ಯಾಸ” ಸ್ಪರ್ಧೆ
ಪುಸ್ತಕ ಕೊಳ್ಳುವ ಉದ್ದೇಶವಿಲ್ಲದವರನ್ನೂ ಒಮ್ಮೆ ಪುಸ್ತಕ ಕೈಗೆತ್ತಿಕೊಳ್ಳುವಂತೆ ಮಾಡುವ ಶಕ್ತಿ ಮುದ್ದಾದ ಮುಖಪುಟಕ್ಕೆ ಇರುತ್ತದೆ. ಕೆಲವೊಮ್ಮೆ ಒಳಗಿನ ಬರಹದ ಬಗ್ಗೆ ಗೊತ್ತಿಲ್ಲದಿದ್ದರೂ ಇರಲಿ ತಗೊಂಬಿಡೋಣ ಎಂದು ಮರುಳು ಮಾಡುವಷ್ಟು ಅಂದವಾಗೂ ಇವು ಇರುತ್ತವೆ! ಕಂಪ್ಯೂಟರ್, ಫೋಟೋಶಾಪ್, ಡಿಜಿಟಲ್ ಕ್ಯಾಮರಾಗಳು ಎಲ್ಲರಿಗೂ ಸುಲಭವಾಗಿ ಎಟುಕುತ್ತಿರುವ ಈ ಕಾಲದಲ್ಲಿ ಅಂಥ ಚಂದದ ಮುಖಪುಟವೊಂದನ್ನು ರಚಿಸುವ ಆಸೆ ಬಹಳಷ್ಟು ಜನಕ್ಕೆ ಬಂದಿರಬಹುದು. ಆದರೆ ಅವಕಾಶ ? ಹಾಗಿದ್ದರೆ ನಿಮಗೊಂದು ಖುಷಿಯ ಸುದ್ದಿ.
ಹೊಸ ಕತೆಗಾರರ ಶೋಧ, ಕಡಿಮೆ ದರದಲ್ಲಿ ಪುಸ್ತಕ ಪ್ರಕಟಣೆ, ಸಿಡಿಯಲ್ಲಿ [...]
Read Full Post | Make a Comment ( None so far )

