Archive for September 25th, 2008
ಈ ಮೊಬೈಲು ಕಾತುರತೆಯನ್ನ ಕಸದ ಬುಟ್ಟಿಗೆ ಸೇರಿಸಿದೆ
‘ಸಿರಿ’ ಬಂದ ಕಾಲಕ್ಕೆ…
-ಮೃಗನಯನಿ
ಕಾಲೇಜಿನಲ್ಲಿ ಎಂತದ್ದೋ ಕಾನ್ಫರೆನ್ಸು ನಮಗೆಲ್ಲ ಒಂದು ವಾರ ರಜೆ. ಮನೆಗೆ ಬಂದೆ . ಊಟ- ಮಾತು ಆದ ಮೇಲೆ ಅಪ್ಪ ಏನೇನು ಹೊಸದು ತಂದಿದ್ದಾರೆ ಅಂತ ಚೆಕಿಂಗ್ ಮಾಡಿದೆ. ಬಂದ ರಿಸಲ್ಟು ನಾಲ್ಕು ಸೀಡಿ, ಎರಡು ಪುಸ್ತಕ…
ಮೂರು ಸೀಡಿಗಳು ಶಾಸ್ತ್ರೀಯ ಸಂಗೀತದ್ದು. ನಾಲ್ಕನೆಯದು ಅಶ್ವಥರ ಸಂಗೀತದಲ್ಲಿ, ಕೆ.ಎಸ್.ನ ಅವರ ಮೈಸೂರು ಮಲ್ಲಿಗೆ! ನನಗೆ ಕುಣಿಯೋಷ್ಟು ಖುಷಿ.
ಬಳೆಗಾರ ಚೆನ್ನಯ್ಯ ಬಂದು, “ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು” ಅಂತ ಶುರು ಮಾಡಿ “ಹೋಗಿ ಬನ್ನಿರಿ ಒಮ್ಮೆ ಕೈಮುಗಿದು [...]
Time hath, my lord, a wallet at his back…
ಕನ್ನಡ ಬ್ಲಾಗ್ ಲೋಕದ ಹಿರಿಯ, ‘ಕಾಮರೂಪಿ’ ಎಂದೇ ಹೆಸರಾದ ಎಂ ಎಸ್ ಪ್ರಭಾಕರ ಅವರು ಇತ್ತೀಚಿಗೆ ಎಸ್ ಬಾಗೇಶ್ರೀ ಅವರ ಬ್ಲಾಗ್ bageshree ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಾಗೇಶ್ರೀ ಅವರ ‘ಸಮಯವನ್ನು ನುಂಗುವ ಸಮಯ’ ಬರಹಕ್ಕೆ ನೀಡಿದ ಪ್ರತಿಕ್ರಿಯೆ ಇದೆ. ಬಾಗೇಶ್ರೀ ಅವರ ಬರಹಕ್ಕಿರುವ ವಿಶಿಷ್ಟ ಶಕ್ತಿ ಯತ್ತ ಗಮನ ಸೆಳೆಯಲು ಕಾಮರೂಪಿ ಅವರ ಪ್ರತಿಕ್ರಿಯೆಯನ್ನು ಇಲ್ಲಿ ನೀಡುತ್ತಿದ್ದೇವೆ
ಸಮಯವನ್ನು ನುಂಗುವ ಸಮಯ
ಶ್ರೀಮತಿ ಬಾಗೇಶ್ವರಿ ಅವರಿಗೆ ಹೃತ್ಪೂರ್ವಕ ಅಬಿವಂದನೆಘಳು, ಶುಭಾಶಯಗಳು. ನಿಮ್ಮ ಇತ್ತೀಚಿನ ಬ್ಲಾಗ್ ತುಂಬಾ ಮನಸ್ಸಿಗೆ ಹಚ್ಚಿಕೊಂಡಿತು. ಬಹಳ ಅರ್ಥಪೂರ್ಣವಾದ ಮತ್ತು ಚಿಂತನೆಗಳನ್ನು ಪ್ರಚೋದಿಸುವಂತಹ ಬರವಣಿಗೆ. ಕಾಲ [...]


