Archive for September 22nd, 2008
ಮಹಾರಾಜ ಕಾಲೇಜಿನಲ್ಲಿ ಅನಂತಮೂರ್ತಿ
ಯು ಆರ್ ಅನಂತಮೂರ್ತಿ ಅವರ ಸಮಕಾಲೀನ ಚಿಂತನೆಗಳ ಪ್ರಖರತೆ ಗೊತ್ತಾಗಬೇಕಾದರೆ ಅವರ ಬ್ಲಾಗ್- ‘ಋಜುವಾತು’ಗೆ ಭೇಟಿ ಕೊಡಬೇಕು.
ಅಭಿನವದ ರವಿಕುಮಾರ್ ಅನಂತಮೂರ್ತಿ ಅವರಿಂದ ಹೆಕ್ಕಿ ತೆಗೆಸಿದ ಮಹಾರಾಜ ಕಾಲೇಜಿನ ನೆನಪುಗಳು ಇಲ್ಲಿವೆ-
ಮಹಾರಾಜಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ನನ್ನ ದಿನಗಳು
ನಾನು ಮೈಸೂರು ಮಹಾರಾಜಾ ಕಾಲೇಜನ್ನು ಸೇರಿದ್ದು 1950ರ ಪ್ರಾರಂಭದ ದಶಕದಲ್ಲಿ- ಇಂಗ್ಲಿಷ್ ಆನರ್ಸ್ ವಿದ್ಯಾರ್ಥಿಯಾಗಿ. ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ `ಕೆಮೆಸ್ಟ್ರಿ’ ವಿಷಯದಲ್ಲಿ ಒಂದು ವರ್ಷ ಫೇಲಾಗಿ ಮತ್ತೆ ಪಾಸಾದೆ. ಫೇಲಾಗಲು ಒಂದು ಕಾರಣ/ನೆವ, ಕಾಗೋಡು ರೈತ ಸತ್ಯಾಗ್ರಹ. ಆದರೆ ಫೇಲಾದ ವರ್ಷ [...]
Read Full Post | Make a Comment ( None so far )ಸಿಪ್ಪೆಗೂ ಒಂದು ಕಾಲ
ಅರವಿಂದ ನಾವಡ ಅವರು ವಿಜಯ ಕರ್ನಾಟಕ ಮೈಸೂರು ವಿಭಾಗದ ಮುಖ್ಯಸ್ಥರು. ತಮ್ಮ ‘ಚಂಡೆಮದ್ದಳೆ‘ ಬ್ಲಾಗ್ ನಿಂದ ಸಾಕಷ್ಟು ಪರಿಚಿತರು. ಸಾಹಿತ್ಯ ಇವರ ಪ್ರಮುಖ ಸೆಳೆತ. ನಂತರದ್ದು ಬಹುಷಃ ಇದೇ- ನಳಪಾಕ.
ಅಡುಗೆ ಬಗ್ಗೆ ಬ್ಲಾಗ್ ಗಳು ಇಲ್ಲಾ ಅಂತೇನೂ ಇಲ್ಲ. ಆದರೆ ‘ನಳ’ ಬರೆದ ರೆಸಿಪಿ ಕಡಿಮೆ. ಹಾಗಾಗಿ ನಾವಡರ ಈ ಬ್ಲಾಗ್ ಪಾಕಚಂದ್ರಿಕೆ ಗೆ ವಿಶೇಷ ಮಹತ್ವ. ಹ್ವಾಯ್ ಮಾರಾಯ್ರೇ.. ನೀವು ಯಾರು, ಬಂದಂತ ಕಾರಣವೇನು ಎಂದು ನಾವಡರನ್ನೇನಾದರೂ ಪ್ರಶ್ನಿಸಿದ್ದಲ್ಲಿ ಹೀಗೆ ಹೇಳಿಯಾರು-
ನನ್ನ [...]
ಈ ಮೂಲೆ ಹಳ್ಳಿಯಲ್ಲಿ ಕುವೆಂಪು
ವಿಮರ್ಶಕ ರಹಮತ್ ತರೀಕೆರೆ, ಕುವೆಂಪು ಕುರಿತ ತಮ್ಮ ಬರಹವೊಂದರಲ್ಲಿ (ಕೃತಿ: “ಕತ್ತಿಯಂಚಿನ ದಾರಿ”), ತಮಗಾದ ಎರಡು ಅನುಭವಗಳನ್ನು ದಾಖಲಿಸಿದ್ದಾರೆ. ಕುವೆಂಪು ಚಿಂತನೆ ಹೇಗೆ ಜಾತ್ಯತೀತವಾಗಿ ಹರಡಿದೆ ಎಂಬುದನ್ನು ಆ ಮೂಲಕ ನಿರೂಪಿಸಿದ್ದಾರೆ. ಆ ಎರಡು ಸಂಗತಿಗಳು ಇಲ್ಲಿವೆ.
* * *
ನಾನು ಭೈರವಾರಾಧಕ ಒಕ್ಕಲಿಗರು ನಡೆದುಕೊಳ್ಳುವ ಮೂಡಿಗೆರೆ ತಾಲೂಕು ಮಾಕೋನಹಳ್ಳಿಗೆ ಹೋಗಿದ್ದೆ. ಅಲ್ಲಿದ್ದ ಭೈರವ ಗುಡಿ ನೋಡಿಕೊಂಡು, ಅಲ್ಲೇ ಪಕ್ಕದಲ್ಲಿದ್ದ ಒಬ್ಬ ಒಕ್ಕಲಿಗರ ಮನೆಗೆ ಹೋದೆ- ಅಲ್ಲಿನ ಭೈರವಾರಾಧನೆಯ ಆಚರಣೆಗಳನ್ನು ತಿಳಿಯಲು. ಅವರು ವಿಶ್ವಾಸದಿಂದ ಒಳಗೆ ಕರೆದು, ಕಾಫಿ [...]
Read Full Post | Make a Comment ( None so far )

