Archive for September 19th, 2008
ಕಾರಂತರ ನೆನಪುಗಳ ಕತ್ತಲೆ ಬೆಳಕಿನಲ್ಲಿ….
ಇಂದು ಬಿ ವಿ ಕಾರಂತರ ಜನ್ಮದಿನ. ಆ ನೆನಪಿಗೆ ಜೋಗಿ ಕಾರಂತರ ಆತ್ಮಕಥನ (ವೈದೇಹಿ) ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ..’ ಕುರಿತು ಬರೆದ ಬರಹವನ್ನು ನೀಡುತ್ತಿದ್ದೇವೆ. ಜೊತೆಗೆ ನೆನಪಿನ ಆಲ್ಬಂನ ಪುಟವಿದೆ. ಡಾ. ವಿಜಯಾ ದಶಕಗಳ ಹಿಂದೆ ಆಕಾಶವಾಣಿಗಾಗಿ ಬಿ ವಿ ಕಾರಂತರನ್ನು ಸಂದರ್ಶಿಸಿದ್ದು ಹೀಗೆ..
-ಜೋಗಿ
ಕೊನೆಗೂ ಬಿ.ವಿ. ಕಾರಂತರ ಆತ್ಮಚರಿತ್ರೆ ಬಿಡುಗಡೆಯಾಗಿದೆ. ಹಕ್ಕುಗಳು ಬಿವಿ ಕಾರಂತರ ಪ್ರತಿಷ್ಠಾನದ ವಶವಾಗಿದೆ. ಅಲ್ಲಿಗೆ ಪುಸ್ತಕಕ್ಕೆ ಸಂಬಂಸಿದಂತೆ ಎಲ್ಲ ರಗಳೆಗಳೂ ಮುಗಿದಂತಾಗಿದೆ.
ಐನೂರೈವತ್ತು ಪುಟಗಳ ಕಾರಂತರ ಆತ್ಮಚರಿತ್ರೆಯನ್ನು ಓದುತ್ತಿದ್ದಾಗ ಮೊದಲು ಕಣ್ಣಿನ [...]
ಮೂಗಿನ ಮೇಲೆ ಬೆರಳಿಟ್ಟುಕೊಂಡು..
ಅನಾಮಿಕತೆ ಎಂಬುದನ್ನೂ ಹೀಗೆಲ್ಲಾ ಹೇಳಬಹುದೇ ಎಂದು ಬೆರಗಿನಿಂದ
ಮೂಗಿನ ಮೇಲೆ ಬೆರಳಿಟ್ಟುಕೊಂಡು ‘ಎನಿಗ್ಮಾ’ದ ಬರಹ ಕೊಡುತ್ತಿದ್ದೇವೆ.
“ಸದ್ಯಕ್ಕೆ ಎನಿಗ್ಮಾ ಅನಾನಿಮಸ್” ಎಂದಿದೆ ಅವಧಿ. ಬಹುಶಃ ಯಾವತ್ತೂ ಅನಾಮಿಕವಾಗೇ ಇರಲು ಎನಿಗ್ಮಾಕ್ಕೆ ಇಷ್ಟ. ಈ ಇಷ್ಟವನ್ನು ಕಾಯುವ ಭಾರ ಜಗತ್ತಿಗಿರಲಿ.
ಯೆಂಡ್ಕುಡ್ಕ ರತ್ನನ ಅದ್ಭುತ ಸಾಲುಗಳು ನೆನಪಾಗುತ್ತವೆ:
ಬೆಳದಿಂಗಳ ರಾತ್ರೀಲಿ ಈ ಚೋರಿ ಬತ್ತಂದ್ರೆ
ಈಚ್ಲೆಂಡ ಕುಡ್ದಂಗೆ ನೆಪ್ಪಾಯ್ತದೆ
ಆಕಾಸದ ಚಂದ್ರನ್ನ ಪಡಖಾನೆ ದೀಪಕ್ಕೆ
ವೋಲಿಸ್ದೆ ವೋಯ್ತಂದ್ರೆ ತೆಪ್ಪಾಯ್ತದೆ.
ಅನಾಮಿಕನ ಸುಖ ಮತ್ತು ಸ್ವಾತಂತ್ರ್ಯ ಇದು. ಪರಿಚಿತರ ಲೋಕದಲ್ಲಿ ಸಂಕೋಚದ ಮುದ್ದೆಯಾಗುವುದಕ್ಕಿಂತ ಹೌದೊ ಅಲ್ಲವೊ ಅನ್ನುವಂಥ ಸಣ್ಣ ಹ್ಯಾಂಗೋವರ್ [...]
ಬ್ಯೂಟಿ ಪಾರ್ಲರ್ ಕೆಲಸವನ್ನು ಯಾಕೆ ಎಳೆತಂದಿರಿ ?
‘ನೆಲ್ಸನ್ ಮಂಡೇಲರಿಗೆ ಕ್ಷೌರ ಮಾಡುವಾಸೆ’ ಎಂಬ ಅವಧಿ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು ‘ದೇಸಿಮಾತು’ ಎಂಬ ಬ್ಲಾಗ್ ಬಗ್ಗೆ ಗಮನ ಸೆಳೆದಿವೆ. ದೇಸಿಮಾತು ಸಮಕಾಲೀನ ಆಗುಹೋಗುಗಳತ್ತ ಬೆಳಕು ಚೆಲ್ಲುತ್ತಿದೆ.
ಪತ್ರಕರ್ತ ದಿನೇಶ್ ಕುಮಾರ್ ಅವರು ತಮ್ಮನ್ನು ಬಣ್ಣಿಸಿಕೊಳ್ಳುವುದು ಹೀಗೆ- ಹುಟ್ಟಿದ್ದು ಸಕಲೇಶಪುರ ಎಂಬ ಪುಟ್ಟ ಊರು. ಮಲೆನಾಡಿನ, ಮಳೆಹಾಡಿನ ನಡುವೆ ಹೇಮದಂಡೆಯಲ್ಲಿ ಬೆಳೆದವನು. ಸದ್ಯಕ್ಕೆ ‘ಇಂದು ಸಂಜೆ ಎಂಬ ಪತ್ರಿಕೆಯ ಸಂಪಾದಕ. ಬರೆಯುವುದು ಹವ್ಯಾಸ ಎನ್ನುವುದಕ್ಕಿಂತಲೂ ಬದುಕುವ ಕ್ರಿಯೆ. ಸದ್ಯಕ್ಕೆ ಇಷ್ಟು ಸಾಕು…
ಪ್ರಜಾವಾಣಿ ಹೀಗೇಕಾಯ್ತು ಎನ್ನುವುದರಿಂದ ಹಿಡಿದು [...]
ಕವಿತೆಯ ಸಾಲುಗಳನ್ನು ಬೊಗಳುತ್ತಿರುತ್ತದೆ..
‘ಅಲೆಮಾರಿ‘ ಬರಹಗಳು ಇಷ್ಟವಾಗುವುದು ಎರಡು ಕಾರಣಕ್ಕೆ. ಮೊದಲನೆಯದು ಅವರಿಗೆ ಸರಿಯಾದದ್ದನ್ನು ಗುರುತಿಸುವ ಕಣ್ಣಿದೆ ಎರಡನೆಯದಾಗಿ ಹಾಗೆ ಗುರುತಿಸಿದ್ದನ್ನು ಇದು ಕನ್ನಡದಲ್ಲೆ ಹುಟ್ಟಿದ ಕವಿತೆಯೇನೋ ಎಂಬಂತೆ ಕಟ್ಟಿಕೊಡಬಲ್ಲ ಶಕ್ತಿ ಇದೆ. ಈ ಎರಡೂ ಗುಣಗಳಿಗೆ ನಮೋ ಎನ್ನುತ್ತಾ ನಮ್ಮೆಲ್ಲರ ಪ್ರೀತಿಯ ಅಮೃತಾ ಪ್ರೀತಂ ಅವರ ಕವನಗಳನ್ನು ಮುಂದಿಡುತ್ತಿದ್ದೇವೆ-
ಪುಟ್ಟ ಗುಡಿಸಲು ನನ್ನದು
ಎಲ್ಲಿ ಹಾಸಲಿ ಹೇಳು ಚಾಪೆ?
ನಿನ್ನ ನೆನಪಿನ ಕಿಡಿಯೊಂದು
ಅತಿಥಿಯಾಗಿ ನನ್ನ ಮನೆಗೆ ಬಂದಿದೆ..
******
ಬಾನೆಂಬ ಪವಿತ್ರ ಜಾಡಿ
ಮೋಡವೆಂಬ ಜಾಮನೆತ್ತಿ
ಬೆಳದಿಂಗಳ ಗುಟುಕು ಕುಡಿದಿದ್ದೇನೆ,
ಧರ್ಮನಿಂದೆಯ ಮಾತಾಡಿದ್ದೇನೆ..
****
ನನ್ನೊಳಗಿನ ಕಿಚ್ಚೆ, ಅಭಿನಂದನೆ,
ಸೂರ್ಯನಿಂದು ನನ್ನಲ್ಲಿಗೆ ಬಂದಿಹನು,
ಇದ್ದಿಲ ತುಂಡೊಂದನ್ನು ಕೇಳಿ
ತನ್ನ [...]






