Archive for September 15th, 2008
ಯಾವ ಫೋಟೋಗಳಿಗೂ ‘ಕಾಪಿರೈಟ್’ ಇಲ್ಲ
ಕನ್ನಡ ಸಾಹಿತ್ಯದ ಆಗುಹೋಗುಗಳನ್ನು ಆ ಕ್ಷಣವೇ ಓದುಗರ ಮುಂದೆ ಇಡಬೇಕು ಎಂಬ ಹಂಬಲ ‘ಅವಧಿ’ಯದ್ದು. ಆ ಕಾರಣಕ್ಕಾಗಿಯೇ ಅವಧಿ ಹಾಗೂ ‘ಬುಕ್ ಬಜಾರ್’ ಎರಡರಲ್ಲಿಯೂ ಆಗಿಂದಾಗಲೇ ಫೋಟೋಗಳನ್ನು ಪ್ರಕಟಿಸುತ್ತಿದ್ದೇವೆ. ಒಂದೆರಡಲ್ಲ. ಇಡೀ ಕಾರ್ಯಕ್ರಮದಲ್ಲಿನ ವಾತಾವರಣವನ್ನು ದೂರದೂರು ಹಾಗೂ ದೇಶದಲ್ಲಿರುವವರಿಗೂ ಮುಟ್ಟಿಸಬೇಕು ಎಂಬುದು ನಮ್ಮ ಆಸೆ. ಹಾಗಾಗಿಯೇ ಪುಸ್ತಕ ಬಿಡುಗಡೆಗೆ ಮಾತ್ರವೇ ಸೀಮಿತವಾಗಿರದೆ ಆ ಕಾರ್ಯಕ್ರಮದ ಸ್ವಾದವನ್ನು ಸೆರೆ ಹಿಡಿಯಲು ಯತ್ನಿಸುತ್ತಿದ್ದೇವೆ.
ಇನ್ನೊಂದು ವಿಶೇಷವೆಂದರೆ ಹಾಗೆ ತೆಗೆದ ಎಲ್ಲ ಚಿತ್ರಗಳನ್ನೂ ಮೂಲ ಸೈಜ್ನಲ್ಲಿಯೇ ಕಾಪಿಡುತ್ತಿದ್ದೇವೆ. ಅಷ್ಟೆ ಅಲ್ಲ ಮೇಫ್ಲವರ್ ಮೀಡಿಯಾ [...]
ಈ ಹುಡುಗಿ ದೀಪಿಕಾ…
ಮೇ ಫ್ಲವರ್ ಅಂಗಳದಲ್ಲಿ ನಡೆಯುವ ಫಿಶ್ ಮಾರ್ಕೆಟ್ ಕಾರ್ಯಕ್ರಮಗಳಿರಲಿ ಅಥವಾ ನಗರದ ಯಾವ ಮೂಲೆಯಲ್ಲಾದರೂ ಜರುಗುವ ಕಾರ್ಯಕ್ರಮಗಳಿರಲಿ ಅಲ್ಲಿ ನಮ್ಮ ದೀಪಿಕಾ ಇರಲೇಬೇಕು. ಎಲ್ಲರ ಮೊಗದಲ್ಲಿ ನಗೆ ಅರಳುವಂತೆ ಕ್ಯಾಮೆರಾ ಫೋಕಸ್ ಮಾಡುವ, ಒಂದಷ್ಟು ಜನ ನೆಟ್ಟನೇರ ಗಂಭೀರವಾಗಿ ನಿಲ್ಲುವಂತೆ ಮಾಡುವ, ಅರಳು ಹುರಿದಂತೆ ಮಾತನಾಡುತ್ತಲೇ ಎಲ್ಲರನ್ನೂ ತನ್ನ ಕ್ಯಾಮೆರಾದಲ್ಲಿ ತುಂಬಿಕೊಳ್ಳುವ ಈ ಹುಡುಗಿ ದೀಪಿಕಾ.
ಬ್ಲಾಗ್ ಮಂಡಲದ ವಿಕಾಸ್ ಬಣ್ಣಿಸಿದಂತೆ ಫೋಟೋ ಟೆರರಿಸ್ಟ್ ಪೈಕಿ ಒಬ್ಬಳು. ಕೆನ್ ಕಲಾ ಶಾಲೆಯಲ್ಲಿ ಕ್ಯಾನ್ವಾಸ್ ಮೇಲೆ ಬಣ್ಣ ಹರಡುತ್ತಿದ್ದ ಈ [...]
Read Full Post | Make a Comment ( 5 so far )ಕುಂ ವೀ ಜಗತ್ತು
ಚಿತ್ರಗಳು: ದೀಪಿಕಾ ಎಂ ಜೆ
ಛಂದ ಪುಸ್ತಕದ ವತಿಯಿಂದ ಕುಂ ವೀ ಅವರ ಜಗತ್ತನ್ನು ಶೋಧಿಸುವ ಭಿನ್ನ ರೀತಿಯ ಕಾರ್ಯಕ್ರಮ ಬೆಂಗಳೂರಿನಲ್ಲಿ ಭಾನುವಾರ ಜರುಗಿತು. ಅದರ ನೋಟ ಇಲ್ಲಿದೆ.
ಇನ್ನಷ್ಟೋ ಫೋಟೋಗಳಿಗಾಗಿ ‘ಓದು ಬಜಾರ್’ ಗೆ ಭೇಟಿ ಕೊಡಿ-


