Archive for September 13th, 2008
ಒಂದು ಹೂ ಎಲ್ಲ ಮಕ್ಕಳನ್ನು…
ಅಕ್ಷತಾ ಕೆ
ದಣಪೆಯಾಚೆ…
ಮೊದಲು ಮತ್ತು ತುದಿಯಲ್ಲಿ ಹಳದಿ ನಡುವಲ್ಲಿ ತುಸು ಕೆಂಪಿನ ಉದ್ದುದ್ದ ಪಕಳೆಗಳ ಮುಡಿಗಿಂತ ಅಗಲವಿರುವ ಡೇರೆ ಹೂವನ್ನು ಮುಡಿದು ಬಂದಿರುವ ರಂಜನಾ ಐದನೇ ತರಗತಿಯ ಹುಡುಗಿಯರ ಆ ದಿನದ ಆಕರ್ಷಣೆಯ ಕೇಂದ್ರ. ಸೀತಾಳದಂಡೆ, ಕೇದಿಗೆ, ಸುರಗಿ, ಡೇರೆ, ಸಂಪಿಗೆ, ಸೇವಂತಿಗೆ ಹೀಗೆ ಥರಾವರಿ ಹೂಗಳನ್ನು ದಿನವೂ ಮುಡಿದುಕೊಂಡು ಬರುವ ಮಲೆನಾಡಿನ ಆ ಹಳ್ಳಿ ಶಾಲೆಯ ಹುಡುಗಿಯರಿಗೆ ಹೂವೆಂದರೆ ವಿಶೇಷವಲ್ಲ ಆದರೆ ದಿನವೂ ನೋಡುವ, ಮುಡಿಯುವ ಹೂಗಳ ಬಗ್ಗೆ ಅವರಿಗಿರುವ ವಿಶೇಷ ಅಕ್ಕರೆಯಂತೂ ಎಷ್ಟು [...]
‘ಓದು ಬಜಾರ್’ ನಲ್ಲಿ
ಯಾಮಿನಿಯ ಸಂಗದಲ್ಲಿ ಪಾತ್ರಗಳ ಹಂಗಿಲ್ಲ. ಜೋಗಿ ಚೈನ್ ಸ್ಮೋಕರ್. ತೇಲಿಬಿಡುವ ಸಿಗರೇಟಿನ ಹೊಗೆಯಲ್ಲಿ ಜೀವಿಸುವುದಕ್ಕೆ ಆಗಾಗ ಲೈಟರ್ ಹೊತ್ತಿಕೊಳ್ಳುವಂತೆ ಈ ಕಾದಂಬರಿಯಲ್ಲಿ ಪಾತ್ರಗಳು ಕಾಣಿಸಿ ಕಣ್ಮರೆಯಾಗಿಬಿಡುತ್ತವೆ. ಚಿರಾಯುವಿನ ನೆನಪಿನ ಪುಸ್ತಕದಲ್ಲಿ ಎರಡೆರಡು ಪುಟಕ್ಕೊಂದು ಪಾತ್ರ. ಕೆಲವು ಪಾತ್ರಗಳ ಆಯಸ್ಸು ಎರಡು ಪ್ಯಾರಾ ದಾಟುವುದಿಲ್ಲ. ಅಸಲಿ ನೆನಪಿನ ದೋಣಿ ಹಾಯುವುದೇ ಹಾಗೇ……
ಓದಿ ಯಾಮಿನಿ ಕುರಿತು ವಿಕ್ರಮ್ ಹತ್ವಾರ್ ಬರೆದ ಲೇಖನ
‘ಓದು ಬಜಾರ್’ ನಲ್ಲಿ –
‘ಅಕಾಲ’ನ ಕಥೆಗಳು
ಒಬ್ಬ ರಾಜ
ಇನ್ನಾದರೂ ಹೂವಾಗಿ ಅರಳಬೇಕು ಅಂತ ಒಬ್ಬ ರಾಜ ಬೇರಿಳಿದು ಹೋದ. ಮುಳ್ಳಿನ ಗಿಡ ಹಾದಿಗಡ್ಡ ಅಂತ ಜನ ಕೂಯ್ದು ಎಸೆದರು.
ಗುರು ಮತ್ತು ಶಿಷ್ಯ
ಶಿಷ್ಯ ಸಿಕ್ಕ ಮೊದಲ ದಿನ ಗುರು ಹೇಳಿದ.
“ನಿನ್ನ ಕಾಲಿಗೆ ತಕ್ಕಂತೆ ನಾನು ಎಕ್ಕಡ ಹೊಲಿಯಲ್ಲ. ನನ್ನ ಚಪ್ಪಲಿ ಆಕಾರಕ್ಕೆ ನಿನ್ನ ಕಾಲು ಕತ್ತರಿಸುತ್ತೇನೆ.”
ಇದಾಗಿ ಎಷ್ಟೋ ವರ್ಷಗಳು ಸರಿದವು. ಒಂದು ದಿನ ಗುರುವಿನ ಕಿವಿಗೆ ಕ್ಷೀಣ ದನಿಯೊಂದು ಕೇಳಿಸಿತು.
“ನೀವು ಬರೀ ಕಾಲನ್ನಷ್ಟೇ ಕತ್ತರಿಸುತ್ತೀರಿ ಅಂತ ತಿಳಿದಿದ್ದೆ ಗುರುವೆ.”
ಶಿರವಿಲ್ಲದ ಶಿಷ್ಯ ಕುಸಿದು ಬಿದ್ದ.
ಇದಕ್ಕೆ ಕಾರಣ ನಿಮ್ಮ ಪುಸ್ತಕ ‘ಕರ್ವಾಲೋ’
(ನಮ್ಮ ಕಾಲದ ಬಹುಮುಖ್ಯ ಬರಹಗಾರ ಪೂರ್ಣ ಚಂದ್ರ ತೇಜಸ್ವಿ. ಅವರು ಬರೆದ ಕಾದಂಬರಿ ‘ಕರ್ವಾಲೋ’ಬಗ್ಗೆ ಮತ್ತೊಬ್ಬ ಬಹುಮುಖ್ಯ ಬರಹಗಾರ ಲಂಕೇಶ್ ಬರೆದ ವಿಮರ್ಶಾ ಪತ್ರ ಇಲ್ಲಿದೆ.)
ಪ್ರಿಯ ತೇಜಸ್ವಿ,
‘ಕನ್ನಡದ ಉಟ್ಟು ಓರಾಟಗಾರ’ರ ಕೆಲಸದಿಂದಾಗಿ ನನ್ನ ಮೈಯಲ್ಲಿ ಸರಿಯಿಲ್ಲದೆ ನಿಮಗೆ ಈ ಕಾಗದ ಬರೆಯುವುದು ತಡವಾಯಿತು. (ಆಗತಾನೆ ವಾಟಾಳ್ ನಾಗರಾಜ್ ಕಡೆಯವರಿಂದ ಲಂಕೇಶ್ ಮೇಲೆ ಹಲ್ಲೆಯಾಗಿತ್ತು) ಹೊಡೆತದಿಂದಾಗಿ ಮೈಕೈ ನೋವಾಗಿ ಮಲಗಿದ್ದಾಗ ಕೂಡ ನನ್ನ ಕೋಣೆಯ ತುಂಬ ನಗೆ ಹಬ್ಬಿತ್ತು. ನನ್ನನ್ನು ನೋಡಿದವರು ಅಚ್ಚರಿ [...]


