Archive for September 12th, 2008
ಈ ಫೋಟೋ ನೋಡಿದಿರಾ?
ಇದು ಅಪರೂಪದ ಫೋಟೋ. ಸುಶ್ರುತ ದೊಡ್ಡೇರಿ ಇದನ್ನು ‘ಚುರುಮುರಿ’ಯಲ್ಲಿ ಗಮನಿಸಿ ನಮಗೆ ಕಳಿಸಿಕೊಟ್ಟಿದ್ದಾರೆ. ಇದರ ಸ್ವಾರಸ್ಯಕರ ಕಥೆಗೆ ‘ಚುರುಮುರಿ’ ಗೆ ಭೇಟಿ ಕೊಡಿ.
Read Full Post | Make a Comment ( 1 so far )ಮೊಗಳ್ಳಿ ಮತ್ತು ಕುಂ ವೀ
ಕನ್ನಡದ ಇಬ್ಬರು ಮುಖ್ಯ ಸಾಹಿತಿಗಳು ಈ ಭಾನುವಾರ ಬೆಂಗಳೂರಿನಲ್ಲಿರುತ್ತಾರೆ. ಕುಂ ವೀರಭದ್ರಪ್ಪ ಹಾಗೂ ಮೊಗಳ್ಳಿ ಗಣೇಶ್ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ನೀಡಿದ್ದಾರೆ. ಮೊಗಳ್ಳಿ ಗಣೇಶ್ ಅವರ ಮೂರು ಕೃತಿಗಳನ್ನು ಚನ್ನಪಟ್ಟಣದ ಪಲ್ಲವ ಪ್ರಕಾಶನ ಪ್ರಕಟಿಸಿದ್ದು ಯು ಆರ್ ಅನಂತಮೂರ್ತಿ ಅವರು ಬಿಡುಗಡೆ ಮಾಡಲಿದ್ದಾರೆ. ಕೆ ಟಿ ಶಿವಪ್ರಸಾದ್. ಕಿ ರಂ ನಾಗರಾಜ್, ಜಿ ಪಿ ಬಸವರಾಜು, ಮೂಡ್ನಾಕೂಡು ಚಿನ್ನಸ್ವಾಮಿ ಹಾಗೂ ಕೃಷ್ಣಮೂರ್ತಿ ಹನೂರು ಮುಖ್ಯ ಅತಿಥಿಗಳು.
ಕುಂ ವೀರಭದ್ರಪ್ಪ ಅವರ ಸಾಹಿತ್ಯದ ಬಗ್ಗೆ [...]
Read Full Post | Make a Comment ( None so far )ಮತ್ತೆ ಮಳೆ ಹೊಯ್ಯುತಿದೆ…ಎಲ್ಲ ನೆನಪಾಗುತಿದೆ..
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ..
ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಸುರಿಯುವ ಮಳೆ ಕಂಡು ಅವಳಿಗೆ ಅವಳೂರು ನೆನಪಾಗಿ ಹೊಟ್ಟೆಕಿಚ್ಚಾಗುತ್ತದೆ. ಊರಲ್ಲಾದರೆ ಮಳೆಗಾಲದಲ್ಲಿ ನಾಲ್ಕು ತಿಂಗಳು ಒಂದೇ ಸಮ ತೊಯ್ದು ಖುಷಿಪಡುವ ಅವಳಿಗೆ ಬೆಂಗಳೂರಿನ ಮಳೆಯಲ್ಲಿ ಅಂಥಹ ವಿಶೇಷತೆ ಕಾಣುವುದಿಲ್ಲ. ಆದರೂ ಆಗಾಗ ಒಂದೇ ಸಮನೆ ಹುಯ್ಯುವ ಮಳೆಯ ಸೊಬಗನ್ನು ಎಷ್ಟಾಗುತ್ತೋ ಅಷ್ಟನ್ನಾದರೂ ಸವಿಯುವ ಆಸೆ. ಕಛೇರಿ ಕಿಟಕಿಯಿಂದಲೇ ನೋಡಿ ತೃಪ್ತಿಪಡುತ್ತಾಳೆ.
ಅಪರೂಪಕ್ಕೊಮ್ಮೊಮ್ಮೆ ಅವಳು ಮನೆಯಲ್ಲಿದ್ದಾಗ ಧೋ ಎಂದು ಮಳೆ ಸುರಿಯತೊಡಗುತ್ತದೆ. ಅದನ್ನವಳು ತನ್ನ ಸೌಭಾಗ್ಯವೆಂದೇ ತಿಳಿದುಕೊಳ್ಳುತ್ತಾಳೆ. ಸದ್ಯ [...]






