Archive for September 10th, 2008
ಅವ್ಳು ನಂಗ್ ನಂಗೇ ಬೇಕು, ಪೂರ್ತಿ ಬೇಕು..
‘ಸಿರಿ’ ಬಂದ ಕಾಲಕ್ಕೆ…
-ಮೃಗನಯನಿ
“ಅವ್ಳು ನಂಗ್ ನಂಗೇ ಬೇಕು .ಪೂರ್ತಿ ಬೇಕು” ಅಂದ ಪ್ರದಿ. ನಾನು ಮಧು ಮುಖ ಮುಖ ನೋಡ್ಕೂಂಡ್ವಿ. “ಮೊನ್ನೆ ನೀನೂ ಹೀಗೇ ಆಂದಿದ್ದೆ.”ಅಂದ್ಲು ನಂಗೆ ಆಶ್ಚರ್ಯ ಆಯಿತು. “ಹೂ ಮೊನ್ನೆ ನಂದ ಕೊಟ್ಟಿದ್ ಡೈರಿ ಮಿಲ್ಕ್ ಚಾಕಲೇಟ್ ನಂಗ್ ನಂಗೇ ಪೂರಾ ಬೇಕು ಅಂತ ಹಠ ಮಾಡಿರಲಿಲ್ವ…”
ನಾನು, ಮಧು (ಮಧುಮಿತ), ಪ್ರದೀಪ್ ಮೂರು ಜನನೂ ಫಾರ್ಮ್ ಫುಡ್ನಲ್ಲಿ ಕೂತಿದ್ವಿ. ನಮ್ಮ ಹಾಸ್ಟೇಲಿನ ಊಟ (?) ಬೇಜಾರಾದಾಗಳೆಲ್ಲಾ ಅಂದ್ರೆ ವಾರದಲ್ಲಿ ಹತ್ತು ದಿವ್ಸ ಹಾಸ್ಟೆಲ್ ಹಿಂದಿರೋ [...]
ಬರುತಿಹೆವು ನಾವು ಬರುತಿಹೆವು
ಕೆ ರಾಮಯ್ಯ ರಾಜ್ಯದ ಅನೇಕ ಚಳವಳಿಗಳನ್ನು ಕಟ್ಟಿ ಬೆಳಸಿದವರು. ಬರುತಿಹೆವು ನಾವು ಬರುತಿಹೆವು, ಯುಗ ಯುಗಗಳಿಂದ ನೀವ್ ತುಳಿದ ಜನಗಳ ಕೊರಳ ದನಿಗಳು ನಾವು…ಎಂಬ ಹಾಡು ದಶಕಗಳ ಕಾಲ ರಾಜ್ಯದ ಧಮನಿತರ ಮಧ್ಯೆ ಸಂಚಲನವನ್ನು ಉಂಟು ಮಾಡಿತ್ತು. ಹೊಸ ರಾಜಕೀಯಕ್ಕೂ ನಾಂದಿ ಹಾಡಿತ್ತು. ರಾಮಯ್ಯ ಬ್ಯಾಂಕ್ ನಲ್ಲಿದ್ದು ನಂತರ ಲಂಕೇಶ್ ಪತ್ರಿಕೆ, ಮುಂಗಾರು, ಸುದ್ದಿ ಸಂಗಾತಿ ಮೂಲಕ ದೃಶ್ಯ ಮಾಧ್ಯಮದತ್ತ ನಡೆದು ಬಂದವರು. ಚಲನಚಿತ್ರ ರಂಗದಲ್ಲಿ ಪ್ರಶಸ್ತಿ ಪಡೆದವರು. ಮಕ್ಕಳ ರಂಗಭೂಮಿಯನ್ನು ತಾಯಿ [...]
Read Full Post | Make a Comment ( 2 so far )’ಹೋಗು ದಕ್ಷನ ಮಗಳೇ’
ಈಕೆ ‘ಸುರಗಿ’- ಮಳೆ, ನದಿ, ಕಾಡು, ಬೆಟ್ಟಗುಡ್ಡ, ಸಮುದ್ರ, ನೀಲಾಕಾಶದ ಬಗ್ಗೆ ಹಿಮಾಲಯದಷ್ಟೇ ವಿಸ್ಮಯ. ನನ್ನ ಹಳ್ಳಿ ನನ್ನ ಸ್ಥಾಯಿ ಭಾವ. ಚಿತ್ತಭಿತ್ತಿಯಲ್ಲಿ ಹರಡಿರುವ ಲ್ಯಾಂಡ್ ಸ್ಕೇಪ್- ಎಂದು ತನ್ನನ್ನು ಪರಿಚಯಿಸಿಕೊಳ್ಳುವ ಇವರ ಬ್ಲಾಗ್ ‘ಮೌನ ಕಣಿವೆ’. ಫ್ರೆಶ್ ಫ್ರೆಶ್ ಬರಹಗಳ ಮೊತ್ತ. ಕಡಲ ಕಿನಾರೆಯ ರುದ್ರಪಾದೆಯಲ್ಲಿ ಮಂಡಿಗೆ ಗಲ್ಲ ಹಚ್ಚಿ ಏನನ್ನೂ ಮನಸ್ಸಿನೊಳಗೆ ಕಟ್ಟಿಕೊಳ್ಳಬಲ್ಲೆ. ಹಾಗೆ ಕಟ್ಟಿಕೊಂಡದ್ದನ್ನು ಬ್ಲಾಗ್ ಗೆ ಇಳಿಸಬಲ್ಲೆ ಎಂಬ ಉತ್ಸಾಹ ಇರುವವರು. ಅವರ ಬರಹದ ರುಚಿ ನೋಡಲೆಂದು ಇಲ್ಲಿದೆ- [...]
Read Full Post | Make a Comment ( 1 so far )

