ನಾನೊಬ್ಬಳು ‘ಮಲ್ನಾಡ್ ಹುಡ್ಗಿ’
ಇಂದಿನಿಂದ ಆರಂಭ
ಪ್ರತೀ ಭಾನುವಾರ
ಕಾಡುವ ಮನಸ್ಸಿಗೆ ಕೈಯಿಡುವ ಅಂಕಣ ಮಾಲೆ-
‘ಸಿರಿ’ ಬಂದ ಕಾಲಕ್ಕೆ …
ಇದರೊಂದಿಗಿದೆ ಮೊದಲ ಬರಹ
ನಾನೊಬ್ಬಳು ‘ಮಲ್ನಾಡ್ ಹುಡ್ಗಿ’
ನಾನು ಮಲೆನಾಡ ಹುಡುಗಿ. ನಮ್ಮೂರಷ್ಟು ಚಂದದ ಸ್ಥಳ ಮತ್ತೊಂದಿಲ್ಲ. ನಮ್ಮೂರ್ ಬಗ್ಗೆ ನಂಗೆ ಅಹಂಕಾರ ಅನ್ಕೊಂಡ್ರೂ ಪರ್ವಾಗಿಲ್ಲ ನೀವು.
ನನಗೆ ಸಾಹಿತ್ಯದಲ್ಲಿ ಆಸಕ್ತಿ..ಕುವೆಂಪು, ಅವ್ರ ಮಗ ಪೂ ಚಂ ತೇ, ಬಿ ಜಿ ಎಲ್ ಸ್ವಾಮಿ, ಭೈರಪ್ಪ, ಕಾರಂತ, ಬೆಳೆಗೆರೆ, ವಸುಧೇಂದ್ರ, ಕಾಯ್ಕಿಣಿ, ಜೋಗಿ, ವಿವೇಕ್ ಶಾನಭಾಗ್, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಮಾಸ್ತಿ ಇಷ್ಟ ಆಗ್ತಾರೆ. ಕೆ ಎಸ್ ನ, ಲಕ್ಷ್ಮೀನಾರಾಯಣ ಭಟ್ಟ, ಎಚ್ ಎಸ್ ವೆಂಕಟೇಶ ಮೂರ್ತಿ, ನಿಸಾರ್ ಅಹ್ಮದ್ ಇವರ ಕವಿತೆಗಳು ಇಷ್ಟ.
ಇಗೀಗ ಶೆಲ್ಲಿ, ಬೈರನ್, ಕೀಟ್ಸು, ವರ್ಡ್ಸ್ ವರ್ಥ್, ಬ್ಲೇಕ್, ಯೇಟ್ಸ್, ಏಲಿಯಟ್, ಡಿಕನ್ಸ್, ಕುಷ್ವಂತ್ ಸಿಂಗ್, ರಸ್ಕಿನ್ ಬಾಂಡ್, ಆರ್ ಕೆ ನಾರಾಯಣ್, ಜೇನ್ ಆಸ್ಟೆನ್, ಚಾರ್ಲೆಟ್ ಬ್ರಾಂಟೆ ಮುಂತಾದವರದನ್ನೆಲ್ಲಾ ಓದಕ್ ಶುರು ಮಾಡಿದಿನಿ ಅರ್ಥ ಆಗ್ದಿದ್ರೂ….
ನಂಗೆ ಮಳೆ , ಮುಂಜಾವು, ಮುಸ್ಸಂಜೆ, ತಂಪಾದ ರಾತ್ರಿ, ಬೆಳದಿಂಗಳು, ಸಮುದ್ರ, ಕತ್ತಲು, ಅಮ್ಮ ಅಂದ್ರೆ ತುಂಬಾ ಇಷ್ಟ…ಮಳೆ, ಮಳೇಲಿ ನೆನೆಯೋದು, ಮಳೆ ಬರೋದನ್ನ ನೋಡೋದು, ಮಳೆ ಸದ್ದು ಕೇಳೋದು ಅಂದ್ರೆ ಪ್ರಾಣ…





ಶ್ರೀನಿವಾಸ ಗೌಡ್ರೆ, ನಿಮ್ಮ ತಳಮಳ ನೋಡೋಕಾಗ್ತಿಲ್ಲ, ಅದೇನು ನಿರೀಕ್ಷೆ ಅಂತ ಹೇಳಿ ಬಿಡ್ರಿ,
ಲೀಲಾಸಂಪಿಗೆ
leelasampige
September 4, 2008
ನಿಮ್ಮೂರ್ ಬಗ್ಗೆ ನಿಮ್ಗೆ ಅಹಂಕಾರವಲ್ಲ. ಮಲೆನಾಡಿನ ಪ್ರತಿಯೊಬ್ಬರಿಗೂ ಅವರವರ
ಊರಿನ ಬಗೆ ಇರುವ ಹೆಮ್ಮೆ. ನನಗೂ ಬೆಂಗಳೂರಿಗೆ ಬಂದ್ ಮೇಲೆನೆ ನನ್ನ್ ಊರು
ಎಷ್ಟೂ ಸುಂದರ ಮತ್ತು ಅದ್ಬುತ ಅನ್ನಿಸಿದ್ದು.
ಮಲ್ನಾಡ್ ಹುಡುಗ.
September 2, 2008
ರೀ ಮಲ್ನಾಡ್ ಹುಡ್ಗಿ,
ನಿಮ್ಮನ್ನು ನೋಡಿದರೆ ಅಪ್ಪಟ ಬೆಂಗಳೂರು ಹುಡುಗಿ ತರಹ ಕಾಣುತ್ತಿರಾ!
ನಿಮ್ಮ ಫೋಟೋ ನೋಡಿ ಫೀದಾ ಅಗ್‌ಬಿಟ್ಟು ನಿಮ್ಮ ಎಲ್ಲಾ ಬರಹಗಳನ್ನು ಗ್ಯಾರಂಟಿ ಮೆಚ್ಚಿಕೊಂಡು ಓದುತ್ತಿನಿ
neelanjala
September 1, 2008
chennagide…!aadru neevu Nemichandrara
YADVASHEM mattu Peruvina Kaniveyalli oodi
nangoo malenaadu hagu male andre preeti adakke naanalle irodu..!
jithendra
September 1, 2008
ಇಷ್ಠೇನಾ… ಹೋಗ್ರಿ ಹೋಗ್ರೀ,
ಬೇಗಾ ಇನ್ನೇನಾದ್ರು ಬರ್ದು ಪೋಸ್ಚ್ ಮಾಡಿ..
ಕಾಯ್ತ ಇರ್ತಿವಿ ಆಯ್ತಾ…
ಶ್ರೀನಿವಾಸಗೌಡ
September 1, 2008