ಇವನು ಗೆಳೆಯ-ನಲ್ಲ….
‘ಸಿರಿ’ ಬಂದ ಕಾಲಕ್ಕೆ…
-ಮೃಗನಯನಿ
ಆವತ್ತು ಸಂಜೆ ಕಾಲೇಜು ಬಿಟ್ಟ ತಕ್ಷಣ ಯಾವುದೇ ಊರು ಸುತ್ತುವ ಪ್ರೋಗ್ರಾಮು ಇಲ್ಲದ್ದರಿಂದ ಟೀ ಎಂದು ಕರೆಯುವುದಕ್ಕೆ ಯಾವ ಅರ್ಹತೆಯೂ ಇಲ್ಲದ ಟೀ ಕುಡಿದು ಹ್ಯಾಮ್ಲೆಟ್ ಓದುತ್ತಾ ಕೂತಿದ್ದೆ. ಫ್ರಾನ್ಸ್‌ಗೆ ಹೊರಟು ನಿಂತ ಮಗನಿಗೆ ಪೊಲೋನಿಯಸ್ ಅಲ್ಲಿ ಹೇಗಿರಬೇಕು ಅನ್ನುವ ಒಂದು ಪುಟದ ಮಾತು ಓದುತ್ತಿದ್ದರೆ ನನಗೆ ಅಪ್ಪನ ನೆನಪಾಯ್ತು. ಅಷ್ಟರಲ್ಲಿ ಲಾಲಿ ದಬಾರೆಂದು ಬಾಗಿಲು ತಳ್ಳಿಕೊಂಡು ಒಳಬಂದು ಒಂದು ಮಾತಾಡದೇ ರೂಮ್ ಕ್ಲೀನ್ ಮಾಡತೊಡಗಿದಳು. ಅವಳು ಸಿಟ್ಟು ಬಂದಾಗೆಲ್ಲ ಹೀಗೆ ರೂಮ್ ಕ್ಲೀನ್ ಮಾಡಿಯೋ ಬಟ್ಟೆ ಒಗೆದೋ ಸಿಟ್ಟು ತೀರಿಸಿಕೊಳ್ಳುತ್ತಾಳೆ.
ಏನಾಯ್ತೆಂದು ಕೇಳಬೇಕನ್ನಿಸಿತು. ಆದರೆ ಮೊದಲು ರೂಮ್ ಕ್ಲೀನ್ ಮಾಡಿ ಕೋಪ ಇಳಿಯಲಿ ಎಂದು ಸುಮ್ಮನಾದೆ. ಒಂದರ್ಧ ಗಂಟೆಯ ನಂತರ ಅವಳ ಪಕ್ಕ ಬಂದು ಕೂತಳು. ಏನು ಓದುತ್ತಿದ್ದೀಯಾ ಅಂತ ಕೇಳಿದಳು. ಏನಾಯ್ತೇ’ ಕೇಳಿದೆ. ನಾನು ಅವನ ಬಗ್ಗೆ ಯಾವತ್ತೂ ಹಂಗೆ ಯೋಚಿಸಿರಲೇ ಇಲ್ಲ ಅಂದಳು. ಅವನು ಹೀಗ್ ಮಾಡ್ತಾನೆ ಅಂದ್ಕೊಂಡಿರಲಿಲ್ಲ ಕಣೇ. ಒಳ್ಳೇ ಫ್ರೆಂಡ್ ಆಗಿದ್ದ. ಎಲ್ಲಾ ಹಾಳ್ ಮಾಡಿಬಿಟ್ಟ. ನಂಗೆ ಪ್ರಪೋಸ್ ಮಾಡ್ದ ಕಣೇ’ ಬಿಕ್ಕಳಿಸಿದಳು.
ಹುಡುಗ ಹುಡುಗಿ ಸ್ನೇಹಿತರಾಗಿರುತ್ತಾರೆ. ಯಾವುದೋ ಒಂದು ದಿನ ಹುಡುಗ ಬಂದು ನೀನಂದ್ರೆ ಇಷ್ಟ, ನಿನ್ನ ಪ್ರೀತಿಸ್ತೀನಿ’ ಅಂತಾನೋ ಮದುವೆ ಆಗ್ತೀನಿ ಅಂತಾನೋ ಹೇಳ್ತಾನೆ. ಹುಡುಗಿಗೆ ಷಾಕ್ ಆಗುತ್ತೆ. ನಾನ್ಯಾವತ್ತೂ ನಿನ್ನ ಬಗ್ಗೆ ಹಿಂಗೆ ಯೋಚನೆ ಮಾಡಿರ್ಲಿಲ್ಲ ಅಂತಾಳೆ. ಅವನು ನಾನು ಎಷ್ಟೊಂದು ಸಲ ಇನ್‌ಡೈರೆಕ್ಟ್ ಆಗಿ ಹೇಳಿದ್ದೀನಿ. ನಿಂಗೆ ಅರ್ಥ ಆಗಿರುತ್ತೆ ಅಂದ್ಕೊಂಡಿದ್ದೆ’ ಅಂತಾನೆ.
ಹೀಗ್ಯಾಕಾಗತ್ತೆ ಅಂತ ಕಾರಣ ಹುಡುಕುತ್ತಾ ಹೋದರೆ ಇದು ಏಣಿಯಾಟವಯ್ಯಾ ಅನ್ನುತ್ತೆ ಮನೋವಿಜ್ಞಾನ. ಹೌದು, ಲ್ಯಾಡರ್ ಥಿಯರಿ ಅಂತ ಒಂದಿದೆ. ಅದರ ಪ್ರಕಾರ ಹುಡುಗೀರ ಮನಸ್ಸಲ್ಲಿ ಎರಡು ಏಣಿ ಇರುತ್ತೆ. ಒಂದು ಲೈಂಗಿಕ ಸಂಗಾತಿಗೆ, ಮತ್ತೊಂದು ಸ್ನೇಹಿತನಿಗೆ. ಹುಡುಗೀರು ತನ್ನನ್ನು ಸಮೀಪಿಸುವ ಅಥವಾ ತಾನು ಭೇಟಿ ಮಾಡುವ ಪ್ರತಿಯೊಂದು ಹುಡುಗನನ್ನೂ ಯಾವ ಏಣಿಗೆ ಹತ್ತಿಸಬೇಕು ಅಂತ ಮೊದಲ ನೋಟದಲ್ಲೇ ನಿರ್ಧಾರ ಮಾಡಿರುತ್ತಾರೆ. ಇದು ತುಂಬ ಸಹಜವಾಗಿಯೇ ಆಗಿಹೋಗಿರುತ್ತೆ. ಆದರೆ, ಹುಡುಗರಿಗೆ ಇರುವುದು ಒಂದೇ ಏಣಿ. ಅವರು ಎಲ್ಲರನ್ನೂ ಅದೇ ಏಣಿಗೆ ಹತ್ತಿಸುತ್ತಾರೆ. ತುಂಬ ಹತ್ತಿರವಾದವರಿಗೆ, ತಮಗೆ ಸರಿಜೋಡಿ ಅನ್ನಿಸಿದವರಿಗೆ ಪ್ರಪೋಸ್ ಮಾಡುತ್ತಾರೆ.
ಹಾಗೆ ಪ್ರಪೋಸ್ ಮಾಡುವ ಹುಡುಗ, ಆಕೆಯ ಲೈಂಗಿಕ ಸಂಗಾತಿಯ ಏಣಿಯಲ್ಲಿದ್ದರೆ ಅವಳೂ ಒಪ್ಪಿಕೊಳ್ಳುತ್ತಾಳೆ. ಅಕಸ್ಮಾತ್, ಗೆಳೆಯನ ಏಣಿಯಲ್ಲಿದ್ದರೆ ಅವನು ಹೀಗೆ ಮಾಡ್ತಾನೆ ಅಂತ ಗೊತ್ತಿರಲಿಲ್ಲ’ ಎಂದು ಗೋಳೋ ಅಂತಾರೆ.
ಇದನ್ನೆಲ್ಲ ಲಾಲಿಗೆ ಹೇಳಬೇಕು ಅನ್ನಿಸಿತು. ಆದರೆ ಇಂಥ ಹೊತ್ತಲ್ಲಿ ಹೇಳಿದರೆ ಅರ್ಥವಾಗುವುದಿಲ್ಲ ಅನ್ನಿಸಿತು. ನಾ ಇನ್ಮೇಲೆ ಅವನ್ನ ಮಾತಾಡ್ಸಲ್ಲ’ ಎಂದವಳು ಎದ್ದು ಹೋದಳು.
ಒಂದಿನ ಸಾತ್ಯಕಿ ಜೊತೆ ಹೀಗೇ ಮಾತಾಡ್ತಾ ಲ್ಯಾಡರ್ ಥಿಯರಿ ಬಗ್ಗೆ ಹೇಳಿದ್ದೆ. ಅದಕ್ಕವನು ಲ್ಯಾಡರ್ ಥಿಯರೀನೂ ಇಲ್ಲ, ಸ್ನೇಕ್ ಥಿಯರೀನೂ ಇಲ್ಲ. ನೀವೆಲ್ಲ ಸೇರಿ ಮಾಡೋ ನಾಟಕ ಅದು. ಒಂದು ಹುಡುಗ ಇಷ್ಟ ಪಡ್ತಿದ್ದಾನೆ ಅಂತ ಗೊತ್ತಾಗಿರೋಲ್ವಾ ನಿಮಗೆ? ಅವನು ಪ್ರಪೋಸ್ ಮಾಡ್ಲಿ ಅಂತ ಕಾಯೋದು. ಆಮೇಲೆ ಹೀಗಂದ್ಕೊಂಡಿರ್ರ್‍ಇಲ್ಲ ಅನ್ನೋದು. ಇಷ್ಟ ಇಲ್ಲ ಅಂದ್ರೆ ಅವನಿಷ್ಟ ಪಡ್ತಾನೆ ಅಂತ ಗೊತ್ತಾದ ತಕ್ಷಣ ನೇರವಾಗಿ ಹೇಳಿಬಿಡಬೇಕಪ್ಪ. ನಾಟ್ಕ ಮಾಡೋದ್ಯಾಕೆ ಅಂತ ನನ್ನ ವಾದವನ್ನು ತಳ್ಳಿಹಾಕಿಬಿಟ್ಟಿದ್ದ.
ಹಾಸ್ಟೆಲ್‌ಗೆ ಬಂದ ಮೇಲೆ ಅವನ ಮೆಸೇಜು: in which ladder you have kept me?
ಇವನು ಉದ್ಧಾರ ಆಗೋಲ್ಲ ಅಂದುಕೊಂಡು ಸುಮ್ಮನಾದೆ.










enu hudgeero enu katheno?
vijay joshi
September 16, 2008
ಹತ್ತಲೆಂದು ನಾನು ಹೊರಟಿದ್ದೆನೊಂದು ಏಣಿ,
“ಅದಲ್ಲ ಕಣೋ, ಇದು” ಅಂತ ಕೂಗಿದಳು ಜಾಣಿ.
sunaath
September 5, 2008
ayyo hagadre nam frndz yella nammana onde yeni mele hatsidare ankobeka che che anyways ninnan illi nodi kushui aythu
agnichandra
September 5, 2008
nice story
fortunatly god has given u people 2 ladder. we got onlu 1. but i can make it 2 part. off of the ladder is fricne and another is love……just for fun
ur blog is gud.
i m a new “L” bourd bloger
rajayogi.wordpress.com
pls go thru it
wish u happy gowri-ganesha festival
yogesh
September 2, 2008
ಏಣಿ ಆಟದಲ್ಲಿ ಸೋತವನು ನಾನು.ನೀವು ಹೇಳಿರೋ ಸೈಕಾಲಜಿ ನಿಜ ಕಣ್ರಿ.
subramani
September 1, 2008
ಅಲ್ಲಾ ಕೆಲವರು ಹುಡುಗಿಯರಿಗೆ ಪ್ರಪೋಸ್ ಮಾಡಿದ ತಕ್ಷಣ, ಲೋ ನನ್ನನ್ನ ಹಾಗಂತ
ತಿಳ್ಕಂಡೆಯಾ,ನೀನು ಇಷ್ಠೇನಾ ನನ್ನ ಅರ್ಥ ಮಾಡಿಕಂಡಿದ್ದು ಅಂತಾರಲ್ಲ….
ಯಾಕೆ..?
ಹುಡುಗೀರನ್ನ ಇನ್ನೆಂಗೆ ಅರ್ಥ ಮಾಡಿಕೊಳ್ಳೋದು ಮೃಗ ನಯನಿ…
ಶ್ರೀನಿವಾಸಗೌಡ
September 1, 2008
ಊರಲ್ಲಿ ಅಡಿಕೆ ಗೊನೆ ಕೀಳೋರು ಒಂದು ಮರದಿಂದ ಹಾಗೇನೆ ಇನ್ನೊಂದು ಮರಕ್ಕೆಜಿಗೀತಾರಲ್ಲ ,ಹಾಗೇನಾದ್ರೂ ಏಣಿಯಿಂದ ಏಣಿಗೆ ಹಾರೋ option ಏನಾದ್ರೂ ಇದೆಯಾ ಮ್ಯಾಡಮ್??
ಸಾತ್ಯಕಿ ಹೇಳಿದ್ದು ನಿಜ,ಹುಡುಗರು ಮಾಡೋ ಎಲ್ಲ ಮಂಗ ಚೇಷ್ಟೆಗಳ ಸುಳಿವು ಹುಡುಗಿಯರಿಗೆ ಗೊತ್ತ್ತಾಗುತ್ತೆ .ಹೀಗಿದ್ದೂ ಅವರು ಕೊನೆ ತನಕ ಕಾಯ್ತಾರೆಂದ್ರೆ something is wrong!
ಅಷ್ಟಕೂ ಪ್ರಪೋಸ್ ಮಾಡಿದ್ರೆ ತಪ್ಪೇನು? ಇದೇನು ಘೋರ ಅಪರಾಧ ನಾ?ಅದನ್ನು ನಯವಾಗೇ ನಿರಾಕರಿಸಬಹುದಲ್ಲ?
Sandeep Kamath
September 1, 2008
ಇನ್ನು ಅವಧಿಯಲ್ಲಿ ಪ್ರೇಮಲೋಖ ಶುರುವಾಯಿತು ಅನ್ನಿಸುತ್ತೆ…ಅಷ್ಟಕ್ಕೂ ಪ್ರೇಮಿಗಳೇನು ಕಮ್ಮಿ ಇದ್ದಾರ? ಚಪ್ಪರಿಸಿಕೊಂಡು ಒದುತ್ತಾರೆ….ಮತ್ತೆ
ಓದುತ್ತೀನಿ ಕೂಡ..;)
ಸ್ವಾಗತ…
Somu
September 1, 2008
ಅಯ್ಯೋ ಹುಡುಗಿಯರೇ ಏಣಿ ಹತ್ತಿಸೋದಾ ನಮಗೆ ಆಯ್ಕೆ ಮಾಡೊಕಾಗಲ್ವಾ??:(
Sandeep Kamath
September 1, 2008
Mr. bigbuj, ‘big start’ means what? should it be a breaking news in TV channels? or should it be headlines of all newspapers?
Anyhow,Good start, Nice Ladder theory
ಮಿಲನ್
September 1, 2008
I was expecting a big start from you in
Avadhi..!!!.. Any how Good start Keep going.
Going further,
Expecting more and more good
articles/stories/column from you
Bigbuj
September 1, 2008