Archive for August 27th, 2008
‘ಸಿರಿ’ ಬಂದ ಕಾಲಕ್ಕೆ…
ಈಕೆ ಸಿರಿ ಅರ್ಥಾತ್ ‘ಮೃಗನಯನಿ’.
ತನ್ನ ಕಣ್ಣುಗಳಿಂದ ಕಂಡ ಲೋಕವನ್ನು ಅವಧಿಯಲ್ಲಿ ಬಿಚ್ಚಿಡಲಿದ್ದಾರೆ.
ಹೊಸ ಅಂಕಣ – ಸಿರಿ ಬಂದ ಕಾಲಕ್ಕೆ…
ನಿರೀಕ್ಷಿಸಿ..
Read Full Post | Make a Comment ( 5 so far )ಹೇಳಲಿಕ್ಕಿನ್ನೂ ಸಾಕಷ್ಟು ಬಾಕಿ ಇದೆ…
ತುಟಿಯ ರಂಗು ಕಳೆದಿದೆ.
ಇಲಾಸ್ಟಿಕ್ ಸ್ಮೈಲೂ…
ಇನ್ನು ಮುಂದೆ ಮುಖವಾಡದ ಅಗತ್ಯವಿಲ್ಲ.
ಕಣ್ ಬಿಟ್ಟಾಗಿನಿಂದ ಕಂಡಿದ್ದು ಗುಬ್ಬಚ್ಚಿ ಗೂಡಂಥ ಬೆಚ್ಚನೆ ಸಂಸಾರ. ಅಲ್ಲಿ ಕುಂತು ಹೆಣೆದ ಕನಸುಗಳೂ ಬೆಚ್ಚಬೆಚ್ಚನೆಯವೇ.
ಇದ್ದಕ್ಕಿದ್ದ ಹಾಗೇ ಒಮ್ಮೆ, ಬೆಂಕಿ ಬಿತ್ತು ನಿದ್ದೆಗೆ! ಅದರ ಸುತ್ತ ಅವನ ಶಲ್ಯದ ತುದಿಗೆ ಸೆರಗು ಕಟ್ಟಿಕೊಂಡ ನಾನು, ತಲೆ ತಗ್ಗಿಸಿ ಪ್ರದಕ್ಷಿಣೆ ಬಂದೆ. ಕನಸುಗಳೆಲ್ಲ ಬೆಂಕಿಯೊಳಗೆ ಸುರಿದುಬಿದ್ದವು.
ಹಾಗಂತ ಗೊತ್ತಾಗುವ ಹೊತ್ತಿಗೆ ಸುತ್ತಮುತ್ತ ಹೊಗೆ ತುಂಬಿ ದಮ್ಮುಕಟ್ಟಿತ್ತು. ಒಂದೇ ಸಮ ಉರಿ.
ಕಣ್ಣಲ್ಲೂ, ಎದೆಯಲ್ಲೂ.
ಸತ್ತಿದ್ದು ಸಾಕು ಅನಿಸಿತು. ಬದುಕಲಿಕ್ಕೆ ಹೊಸ ಗಾಳಿ ಬೇಕಲ್ಲ? ಬಾಗಿಲು [...]
ಸೇತುವೆಯ ಮೇಲೊಂದು ಹುಣ್ಣಿಮೆಯ ಆಟ
-ವಿಕ್ರಮ್ ಹತ್ವಾರ್
ಗಂಡ ಮತ್ತು ಮಗಳ ಆರೈಕೆಯಲ್ಲೆ ಅರ್ಧ ಆಯಸ್ಸು ಸವೆದ ಹೆಂಗಸು ಅವಳು. ಮಗಳ ಮದುವೆ ನಿಶ್ಚಯವಾಗಿದೆ. ಅದೊಂದು ದಿನ ಮಗಳು ತಾಯಿಯನ್ನು ಎದುರು ಕೂರಿಸಿಕೊಂಡು, ‘ನನ್ನನ್ನು ನಿನ್ನದೇ ಪ್ರತಿರೂಪ ಅನ್ನುತ್ತಾರೆ ಎಲ್ಲ, ಎಲ್ಲಿ ನೋಡುವ…’ ಎಂದು ತನ್ನ ಮದುವೆಯ ದುಪಟ್ಟವನ್ನು (ಗೂಂಘಟ್) ತಾಯಿಯ ತಲೆಯ ಮೇಲೆ ಹೊದಿಸಿ, ತನ್ನ ಹೊಸ ಕೆಂಪು ಬಳೆಗಳಲ್ಲಿ ನಾಲ್ಕಾರನ್ನು ಅವಳಿಗೆ ತೊಡಿಸಿ ತಾಯಿಯನ್ನು ಕಣ್ತುಂಬ ನೋಡುತ್ತಾಳೆ. ಇವತ್ತೊಂದು ದಿನ ಇದನ್ನ ತೆಗೆಯಬೇಡ, ಇರಲಿ……ಅದ್ಯಾಕೆ ನೀನು ಬಣ್ಣಬಣ್ಣದ ಬಟ್ಟೆ ಹಾಕುವುದಿಲ್ಲ? ಎಷ್ಟು [...]

