Archive for August 22nd, 2008
‘ಕಾಮರೂಪಿ’ ಎಂಬ ಎಂ ಎಸ್ ಪ್ರಭಾಕರ್
‘ಕಾಮರೂಪಿ’ ಎಂಬ ಕಾವ್ಯನಾಮದಿಂದ ಹೆಸರಾದ ಎಂ ಎಸ್ ಪ್ರಭಾಕರ್ ಅವರು ತಮ್ಮ ೭೩ ನೆಯ ವಯಸ್ಸಿನಲ್ಲಿ ಬ್ಲಾಗ್ ಅಂಕಣಕ್ಕೆ ಇಳಿದಿದ್ದಾರೆ. ಕನ್ನಡ ಕಂಡ ಒಬ್ಬ ಮಹತ್ವದ ಬರಹಗಾರ ತಮ್ಮ ವಯಸ್ಸನ್ನು ಸೋಲಿಸುತ್ತಾ ಯೌವನಕ್ಕೆ ಕೈ ಚಾಚುತ್ತಿರುವುದು ‘ಅವಧಿ’ಗೆ ಸಂತಸ ತಂದಿದೆ.
ಇತ್ತೀಚೆಗಷ್ಟೇ ಸುಗತ ಶ್ರೀನಿವಾಸರಾಜು ‘ಔಟ್ ಲುಕ್’ ನ ತಮ್ಮ ಅಂಕಣದಲ್ಲಿ ಕಾಮರೂಪಿಯನ್ನು ಪರಿಚಯಿಸಿದ್ದರು. ಈಗ ಅವರ ಬರಹಗಳನ್ನೋಳಗೊಂಡ ಬ್ಲಾಗ್ ನಿಮ್ಮ ಮುಂದಿದೆ. ಸ್ವೀಕರಿಸಿ.
ಅದು, ಇದು
ನಮಸ್ಕಾರ. ಇದು ನನ್ನ ಬ್ಲಾಗ್. ಬ್ಲಾಗ್ ಪದದ ಕನ್ನಡದ ಏನಾದರೂ [...]
ಚಂದಮಾಮನ ಹಿಡಿದು ಗಲ್ಲಿಗೇರಿಸುತ್ತಾರೆ
ರಮೇಶ್ ಸೋಗೆಮನೆ ಮೌನವನ್ನು ಧ್ಯಾನಿಸುವವರು. ಹತ್ತು ಹಲವು ಕನಸುಗಳನ್ನು ಹೊತ್ತವರು. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದು ಈಗ ಈಟಿವಿ ಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸೋಗೆಮನೆ ಎಂಬುದು ತುಮಕೂರಿನ ಬಳಿಯ ಒಂದು ಪುಟ್ಟ ಹಳ್ಳಿಯಲ್ಲಿರುವ ಒಂದು ಪುಟ್ಟ ಮನೆ. ಈ ಮನೆಯಿಂದಲೇ ಜಗತ್ತನ್ನು ಕಟ್ಟಿಕೊಂಡ ರಮೇಶ್ ವಿಶಿಷ್ಟ ಬರಹಗಾರ. ಅವರು ಬ್ಲಾಗ್ ಲೋಕ ಪ್ರವೇಶಿಸಿದ್ದಾರೆ. ಅವರ ಬರಹಕ್ಕಿರುವ ಶಕ್ತಿಯನ್ನು ಧ್ಯಾನಿಸುತ್ತಾ ಅದರ ಸವಿ ಬಡಿಸುತ್ತಿದ್ದೇವೆ.
ಇದು ಕಥೆಯಲ್ಲ
ಚಂದಮಾಮನ ಕಥೆಯಲ್ಲಿ ಸುಲಭಕ್ಕೆ ತಾರೆ ಜಾರುತ್ತಿರಲಿಲ್ಲ. ಸೂರ್ಯ ಸುಡುತ್ತಿರಲಿಲ್ಲ ಸಾಮ್ರಾಜ್ಯ ಆಳಿಯುತ್ತಿರಲಿಲ್ಲ ರಾಜ [...]
Read Full Post | Make a Comment ( 4 so far )





