Archive for August 12th, 2008
ಅಂತರಿಕ್ಷಕ್ಕೆ ‘ಮಾವಿನಕಾಯಿ ಹಲ್ವ’
‘ನಾನು ನಿಮ್ಮಂತಹ ಮಾನವರೆಂಬ ಮಹಾನ್ ಸಾಗರದ ಒಂದು ಕಣ’ ಎಂದು ತಮ್ಮ ರಾಮಾಯಣ ಬಿಚ್ಚಿಡುವ ಹರಿಪ್ರಸಾದ್ ಬಹುಷಃ ಕನ್ನಡ ಬ್ಲಾಗ್ ಲೋಕಕ್ಕೆ ಖಗೋಳ ಲೋಕವನ್ನು ಪರಿಚಯಿಸುತ್ತಿರುವ ಏಕೈಕ ವ್ಯಕ್ತಿ. ಇವರ ಬತ್ತಳಿಕೆಯಲ್ಲಿ ಮೂರು ಬ್ಲಾಗ್ ಗಳಿವೆ. ಇವರ ಬರಹ ಎಷ್ಟು ಸರಳ ಮತ್ತು ಆಸಕ್ತಿದಾಯಕವಾಗಿರುತ್ತದೆ ಎಂಬುದಕ್ಕೆ ಈ ಲೇಖನ ಓದಿ-
ವ್ಯೋಮದಲ್ಲಿ ಊಟ…
“ಅನ್ನ ದೇವರ ಮುಂದೆ ಇನ್ನು ದೇವರುಂಟೇ? “
ಅಲ್ಲವೇ ಸ್ವಾಮೀ?
ದಿಲ್ಲಿಯ ಗೌಡನಿಂದ ಹಳ್ಳಿಯ ಗೊಲ್ಲನವರೆಗೆ ಎಲ್ಲರಿಗೂ ಬೇಕು ಆಹಾರ.
ಹಾಗಿರುವಾಗ ಈ ವ್ಯೋಮಯಾನಿಗಳು ಈ ಅನ್ನದೇವನ ಬಿಟ್ಟು [...]
ಚಿರತೆ ಊರಿಗೆ ಯಾಕೆ ಬರುತ್ತೆ ?
-ಹರೀಶ್ ಕೇರ
ಇದೆಲ್ಲ ಪೂರ್ಣಚಂದ್ರ ತೇಜಸ್ವಿ ಅವರ ಕತೆಗಳಲ್ಲಿ ಮಾತ್ರ ನಡೆಯುವಂಥದು. ಅಷ್ಟೊಂದು ಅಸಂಗತ. ಆದರೂ ನಡೆಯಿತು.
ಒಂದು ಮುಂಜಾನೆ ಮಂಗಳೂರು ಮಹಾನಗರದ ನಟ್ಟ ನಡುವೆ ಚಿರತೆಯೊಂದು ಪ್ರತ್ಯಕ್ಷವಾಗಿಬಿಟ್ಟಿತು. ಅರ್ಧ ಕಟ್ಟಿದ ಕಟ್ಟಡವೊಂದರ ಪಿಲ್ಲರುಗಳ ನಡುವೆ ಅದು ಮಲಗಿತ್ತು. ಬೆಳಗ್ಗೆ ನೀರು ಹಾಕಲು ಬಂದ ಕೆಲಸಗಾರರಿಗೆ ಚಿರತೆ ಕಂಡಿತು. ಅರೆಕ್ಷಣವಾದರೂ ಅವರಿಗೆ, ತಾವು ದಟ್ಟಾರಣ್ಯದ ನಡುವಿನ ಪಾಳು ಭವನಕ್ಕೆ ಬಂದುಬಿಟ್ಟಿದ್ದೇವೆ ಅನಿಸಿದ್ದರೆ ಆಶ್ಚರ್‍ಯವಿಲ್ಲ.
ಅಲ್ಲಿಂದ ಓಡಿಹೋದ ಅವರು ಸುದ್ದಿ ಹಬ್ಬಿಸಿ ಜನ ಸೇರಿಸಿದರು. ಮನುಷ್ಯನನ್ನು ಕಂಡು ಭಯಪಡದಿರಲು ಅದೇನು ಮೃಗಾಲಯದಿಂದಾಗಲೀ, [...]






