Archive for August 11th, 2008
‘ಕುಚೇಲನ್’-‘ಕಥಾ ಪರೆಯಂಬೋಲ್’
ರಜನೀಕಾಂತ್ ಅಭಿನಯದ ‘ಕುಚೇಲನ್’ ತೆರೆ ಕಂಡಿದೆ. ಸುದ್ದಿಯೂ ಮಾಡುತ್ತಿದೆ. ಇದು ಮಲಯಾಳಂ ನ ‘ಕಥಾ ಪರೆಯಂಬೋಲ್’ ತಮಿಳು ರೂಪ. ಮೂಲದ ಸಿನೆಮಾದ ಬಗ್ಗೆ ಕಳ್ಳ-ಕುಳ್ಳ ಬ್ಲಾಗ್ನಲ್ಲಿ ಬಂದ ‘ಬಾರ್ಬರ್ ಕುಚೇಲ’ ಲೇಖನ ನೀವು ಓದಲಿ ಎಂದು ಇಲ್ಲಿ-
ಅದು ಆಖ್ಯಾನ, ಇದು ವ್ಯಾಖ್ಯಾನ
ಬಂದು ನಿಂತಿದ್ದಾನೆ ಕುಚೇಲ. ಎದುರಿಗೆ ಶ್ರೀಕೃಷ್ಣಪರಮಾತ್ಮನ ದೊಡ್ಡ ಅರಮನೆ. ಕಾವಲಿಗೆ ನೂರಾರು ಕಾಲಾಳುಗಳು. ಕಾಲಾಳುಗಳಿಗೂ ಹೊಳೆಹೊಳೆವ ಬಟ್ಟೆ. ಆದರೆ, ಕುಚೇಲ ತೊಟ್ಟ ತೊಡುಗೆ ಹರಿದಿದೆ, ಮಣ್ಣು ಮೆತ್ತಿದೆ. ಹಾಗಾಗಿ ಅವನ ಹರಕು ಬಟ್ಟೆ ಕೊಳೆಯಾದ [...]
Read Full Post | Make a Comment ( 1 so far )ಇದೇ ಈಗಿನ ‘ಹೊಸ ರುಚಿ’
ಕಳ್ಳ-ಕುಳ್ಳ ಬ್ಲಾಗ್ನಲ್ಲಿ ಒಂದಿಷ್ಟು ಸದ್ದಾಗುತ್ತಿದೆ. ಅಲ್ಲಿ ಇಲ್ಲಿ ಅಧೋರಾತ್ರಿಯ ಕೆಲಸವೇ ಸಾಕಷ್ಟಿರುತ್ತದೆ ಎನ್ನುತ್ತಿದ್ದ ಈ ಕಳ್ಳ-ಕುಳ್ಳರು ಈಗ ಬಿಡುವುಮಾಡಿಕೊಂಡು ಬ್ಲಾಗ್ಲೋಕಕ್ಕೆ ಮತ್ತೆ ಇಣುಕಿದ್ದಾರೆ-
ಹೊಸರುಚಿ
-ವಿಕಾಸ ನೇಗಿಲೋಣಿ
ಮೂರ್ನಾಲ್ಕು ದಿನಗಳಿಂದ
ನಾವು ನಮ್ಮ ನೆಂಟರ
ಕಾಲು, ಕೈ, ಹೃದಯ, ಕರುಳುಗಳನ್ನು
ಬೇಯಿಸಿಕೊಂಡು ತಿನ್ನುತ್ತಿದ್ದೇವೆ.
ಬೇಯಿಸಿದ್ದನ್ನು ತಿನ್ನುವಾಗ ಆಗುವ
ಸಂಭ್ರಮ ಹ್ಯಾಗಿರುತ್ತದೆಂದು ನನಗೆ
ತಿಳಿದೇ ಇರಲಿಲ್ಲ, ನೋಡಿ.
ಎಲ್ಲರೂ ಹೊಸ ರುಚಿ
ಮಾಡುವುದು ಹೇಗೆ ಎಂದು
ಕೇಳುತ್ತಾರೆ,
ಪತ್ರಿಕೆ, ಚಾನಲ್‌ನವರು
ಮಾಡುವ ವಿಧಾನವನ್ನಷ್ಟೇ
ಹೇಳುತ್ತಾರೆ.
ಆದರೆ ತಿನ್ನುವುದು ಹೇಗೆ?
ಈ ಸಲದ ನಮ್ಮ ಸ್ಪೆಷಲ್;
ನಾವು ಕಂಡುಕೊಂಡ ಆ ಹೊಸ ರುಚಿಯನ್ನು
ತಿನ್ನುವುದು ಹೇಗೆ?
ಬೆಳಿಗ್ಗೆಯಿಂದ ಸಂಜೆಯವರೆಗೆ
ಮನೆಗೆ ಫೋನು ಮಾಡಿ
ತಯಾರಾಗುತ್ತಿರುವ
ಹೊಸ ರುಚಿಯ ಬಗ್ಗೆ,
ನೆಂಟರಿಷ್ಟರ ಅವಯವಗಳು
ಖಾದ್ಯಗಳಾಗಿ [...]







