ವೆಬ್ ವಿಹಾರ-ಅವಕಾಶ ಅಪಾರ
ನನ್ನ ಹೊಸ ಪುಸ್ತಕಗಳು – ‘ವೆಬ್ ವಿಹಾರ’ ಹಾಗೂ ‘ಅವಕಾಶ ಅಪಾರ’ – ಬರುವ ಜುಲೈ ೨೦ರಂದು
ಸಂಜೆ ಬೆಂಗಳೂರು ಬಸವನಗುಡಿಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್
ಕಲ್ಚರ್‌ನಲ್ಲಿ ಬಿಡುಗಡೆಯಾಗಲಿವೆ.
ದಯವಿಟ್ಟು ಈ ಕಾರ್ಯಕ್ರಮಕ್ಕೆ ಬನ್ನಿ.
ಬಿಡುಗಡೆಯಾಗುತ್ತಿರುವ ಪುಸ್ತಕಗಳ ಪರಿಚಯ ಹೀಗಿದೆ:
೧. ವೆಬ್ ವಿಹಾರ – ಅಂತರಜಾಲ ಲೋಕಕ್ಕೊಂದು ಬೆಳಕಿಂಡಿ
ಇದು ಅಂತರಜಾಲ (ಇಂಟರ್ ನೆಟ್) ಹಾಗೂ ವಿಶ್ವವ್ಯಾಪಿ ಜಾಲದ (WWW) ಸಂಕ್ಷಿಪ್ತ ಪರಿಚಯ
ನೀಡಿ ಅದರ ಅನೇಕ ಸೌಲಭ್ಯಗಳನ್ನು ಬಳಸಲು ಓದುಗರಿಗೆ ನೆರವಾಗುವ ಪುಸ್ತಕ. ಮಾಹಿತಿ
ಎಂದರೇನು ಎಂಬಲ್ಲಿಂದ ಪ್ರಾರಂಭಿಸಿ ಗಣಕ ಜಾಲಗಳು, ಅಂತರಜಾಲದ ಹುಟ್ಟು, ವಿಶ್ವವ್ಯಾಪಿ
ಜಾಲ ಬೆಳೆದ ಬಗೆ, ಇಮೇಲ್, ಬ್ಲಾಗಿಂಗ್, ಇ-ಶಾಪಿಂಗ್, ಆನ್ ಲೈನ್ ಬ್ಯಾಂಕಿಂಗ್,
ಬ್ಲಾಗಿಂಗ್, ವಿಶ್ವವ್ಯಾಪಿ ಜಾಲವನ್ನು ಕಾಡುತ್ತಿರುವ ಸಮಸ್ಯೆಗಳು (ವೈರಸ್, ಫಿಷಿಂಗ್,
ಮಾಲ್‌ವೇರ್, ಸ್ಪಾಮ್ ಇತ್ಯಾದಿ )ಮುಂತಾದ ಅನೇಕ ವಿಷಯಗಳನ್ನು ಇದು ವಿವರಿಸುತ್ತದೆ.
ವಿಶ್ವವ್ಯಾಪಿ ಜಾಲದಲ್ಲಿ ಕನ್ನಡದ ಸ್ಥಿತಿಗತಿಗಳ ಬಗೆಗೂ ಬಹಳಷ್ಟು ಮಾಹಿತಿ ಇದೆ. ಶ್ರೀ
ನಾಗೇಶ ಹೆಗಡೆಯವರು ಮುನ್ನುಡಿ ಬರೆದಿದ್ದಾರೆ.
೨. ಅವಕಾಶ ಅಪಾರ
ಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆ ನಾನು
ಉದ್ಯೋಗ ವಿಜಯಕ್ಕೆ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ. ಅಗತ್ಯವಿದ್ದ ಕಡೆ ಇತ್ತೀಚಿನ
ಮಾಹಿತಿ ಸೇರಿಸಲು ಲೇಖನಗಳನ್ನು ಪರಿಷ್ಕರಿಸಿದ್ದೇನೆ. ಒಟ್ಟು ಮೂವತ್ತಾರು ಲೇಖನಗಳಿರುವ
ಈ ಪುಸ್ತಕಕ್ಕೆ ಡಾ. ಯು. ಬಿ. ಪವನಜರ ಮುನ್ನುಡಿ ಇದೆ.
ಧನ್ಯವಾದಗಳು.
ನಿಮ್ಮ ಆಗಮನದ ನಿರೀಕ್ಷೆಯಲ್ಲಿ,
ಶ್ರೀನಿಧಿ
+91 98866 74001



All the Best Shreenidhi
Ganadhalu Srikanta
July 4, 2008