Archive for July, 2008
ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”
-ನಟರಾಜ್ ಹುಳಿಯಾರ್
‘ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ’ನ ಸ್ಥಿತಿಯನ್ನು ನಿಷ್ಠುರ
ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ ತೀರ್ಥಹಳ್ಳಿಯವರ ಥರ ಹೇಳಿದವರು
ಕನ್ನಡದಲ್ಲಿ ತೀರಾ ತೀರಾ ಕಡಿಮೆ. ಮಾನವ ಸಂಬಂಧಗಳಲ್ಲಿನ ಸಣ್ಣಪುಟ್ಟ ಯಾತನೆಗಳಿಂದ
ಹಿಡಿದು ಎಲ್ಲ ಬಗೆಯ ಯಾತನೆಗಳೂ ಕ್ರಮೇಣ ಹೆಣ್ಣನ್ನು ಹಿಂಡಿ, ಅವಳ ಜೀವದ್ರವ್ಯವನ್ನೇ
ಹಿಂಗಿಸಿಬಿಡುವ ರೀತಿಯನ್ನು ಚೇತನಾ ಗಂಭೀರವಾಗಿ, ವ್ಯಂಗ್ಯವಾಗಿ ಅಥವಾ ಪ್ರತಿಭಟನೆಯ
ದನಿಯಲ್ಲಿ ಹೇಳಬಲ್ಲರು; ಹಾಗೆ ಹೇಳಲು ಪುರಾಣ, ದಂತಕಥೆ, ರೂಪಕ ಮುಂತಾಗಿ ಬಗೆಬಗೆಯ
ಭಾಷೆಗಳನ್ನೆಲ್ಲಾ ಬಳಸಬಲ್ಲರು. ಲೇಖಕಿಯೊಬ್ಬಳು ಯಾರ ಹಂಗೂ ಇಲ್ಲದೆ ನಿಜ
ನುಡಿಯತೊಡಗಿದಾಗ, ಇಂಡಿಯಾದ ಕುಟುಂಬಗಳಲ್ಲಿ ಕಂಡೂ ಕಾಣದಂತಿರುವ ಸೂಕ್ಷ್ಮ [...]
ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ..
‘ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ -
ಬಿಟ್ಟು ಕೂಡುವುದರಿಂದ..’
ಎಂಬ ಕವಿತೆಯ ಸಾಲುಗಳು ಯಾರವು ಎಂಬ ಗೊಂದಲವಿತ್ತು.
ಪತ್ರಕರ್ತೆ ವಿದ್ಯಾರಷ್ಮಿ ನಾವು ಎಕ್ಕುಂಡಿಯವರದು ಎಂದುಕೊಂಡಿದ್ದ ಈ ಕವನದ ಸಾಲುಗಳು ಕೆ ವಿ ತಿರುಮಲೇಶ್ ಅವರದ್ದು ಎಂದು ತಿಳಿಸಿದ್ದರು.
ಈಗ ಆ ಸಾಲುಗಳನ್ನೊಳಗೊಂಡ ಕವಿತೆಯನ್ನೇ ಕಳಿಸಿದ್ದಾರೆ. ವಿದ್ಯಾರಷ್ಮಿಗೆ ಥ್ಯಾಂಕ್ಸ್ ಹೇಳುತ್ತಾ ಆ ಕವನ ನಿಮಗಾಗಿ-
ಚಿತ್ರ: ಶಿವು
ಮುಖಾಮುಖಿ
1
ಪುಷ್ಟವಾದ ಒಂದು ಬೆಕ್ಕು ನನ್ನ ಮನೆಯ
ಡ್ರಾಯಿಂಗ್ ರೂಮಿನಲ್ಲಿ ಬಂದು ನನ್ನನ್ನು ಕಂಡು
ಹಠಾತ್ತನೆ ನಿಂತಿತ್ತು. ಅಲ್ಲಿ ಅದು ನನ್ನನ್ನು ನಿರೀಕ್ಷಿಸಿರಲಾರದು.
ಇಲ್ಲ, ಸೋಮವಾರ ಎಲ್ಲರೂ ಅವರವರ ಆಫೀಸಿಗೆ
ಹೋಗಿರುವ ಅಪರಾಹ್ನವಂತೂ ಖಂಡಿತ [...]
ಕನಸು ಕಂಗಳ ಹುಡುಗ
ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ಈ ಹುಡುಗ ತಾನೇ ಬಣ್ಣಿಸಿಕೊಳ್ಳುವಂತೆ ‘ಕನಸು ಕಂಗಳ ಹುಡುಗ’. ನೆಲ-ಮುಗಿಲು ಮುಟ್ಟುವ ಹಂಬಲದಿಂದ ‘ಹೆಜ್ಜೆ ‘ ಇಡಲು ಆರಂಭಿಸಿದ್ದಾರೆ. ಇವರ ಬ್ಲಾಗ್ನಲ್ಲಿ ಅಮೃತಾ ಪ್ರೀತಂ ಇದ್ದಾರೆ. ಓ ಹೆನ್ರಿ ಇದ್ದಾರೆ. ಒಳ್ಳೆಯ ಸಾಹಿತ್ಯದ ಹೂರಣವಿದೆ.
ಕಟಕಟೆ
ಕೋಣೆಯಾದರೆ
ಸಬೂಬುಗಳು
ಸಾಬೀತಾಗುವುದಿಲ್ಲ
ಆಡಿಸಿದ ಗೋಣು
ಗೇಣಿ ಕೇಳುತ್ತದೆ
ಒಂಟಿ ದಸಕತ್ತಿಗೆ
ಬೆಲೆಯಿಲ್ಲ
ಕಾಂಕ್ರೀಟು
ತೋಳುಗಳಲ್ಲಿ ದಿವ್ಯಸನ್ನಿಧಿ
ನಲುಗಿದರೆ
ಉಸಿರು ಹುಟ್ಟುವುದಿಲ್ಲ
ಎಕ್ಕುಂಡಿ ಹಬ್ಬದಲ್ಲಿ ‘ಬೆಳ್ಳಕ್ಕಿ ಹಿಂಡು’
ಎಕ್ಕುಂಡಿ ಎಂಬ ಹೆಸರೇ ಸೂಜಿಗಲ್ಲು. ಎಕ್ಕುಂಡಿ ಪ್ರತಿಯೊಬ್ಬರೊಳೊಗೆ ಎಷ್ಟು ಆಳವಾಗಿ ಬೆಸೆದುಕೊಂಡಿದ್ದರು ಎಂಬುದಕ್ಕೆ ‘ಸಂಚಯ’ ನಡೆಸಿದ ಕಾರ್ಯಕ್ರಮ ಸಾಕ್ಷಿಯಾಗಿ ಹೋಯಿತು.
ದೂರವಿದ್ದವರನ್ನು ಹತ್ತಿರಕೆ ತರಬೇ
ಕು, ಹರಿವ ಹೊಳೆಗೂ ಉಂಟು ಎರಡು
ತೋಳು
ಎಂದ ಕವಿ ಗತಿಸಿಹೋಗಿ ವರ್ಷಗಳಾದರೂ ತಮ್ಮ ಹೆಸರೊಂದರಿಂದಲೇ ಜನರನ್ನು ಬೆಸೆಯುತ್ತಿದ್ದಾರೆ.
ಕಿಕ್ಕಿರಿದಿದ್ದ ಸಭಾಂಗಣದಲ್ಲಿದ್ದವರ ಪೈಕಿ ಫೋಟೋದಲ್ಲಿರುವ ಕೆಲವರು:
ಯು ಆರ್ ಅನಂತಮೂರ್ತಿ, ಇಂದಿರಾ ಎಕ್ಕುಂಡಿ, ಆನಂದ ಝಂಜರವಾಡ, ಜಿ ಎನ್ ಮೋಹನ್, ಡಿ ವಿ ಪ್ರಹ್ಲಾದ್, ಎಕ್ಕುಂಡಿ [...]
ಎಲ್ಲ ನಾಯಕರುಗಳಿಗೂ ಒಂದೊಂದು ಚಿನ್ನವೀಡು
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ..
೧…
‘ಆಯಪ್ಪನ ಜೊತೆ ಮಲಗಿದ್ದಕ್ಕೆ ಅವಳಿಗೊಂದು ಮಂತ್ರಿ ಪದವಿ ಸಿಕ್ಕಿ ಬಿಡ್ತು’.
ಅವರ ಮಾತಿಗೆ ಧಡಾರನೆ ಕಾರು ಬಾಗಿಲು ಹಾಕಿ ಹೊರನಡೆದಿದ್ದೆ.
ಸಂಜೆಗೆ ಮತ್ತೆ ಅವರು ನನ್ನನ್ನು ಕೆಣುಕುವ ಮೂಡಿನಲ್ಲಿದ್ದರು. ನನಗೆ ಯಾವ ವಿಷಯಗಳು ಕಿರಿಕ್ ಮಾಡುತ್ತವೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತು.
‘ಯಾಕೆ ಅಷ್ಟು ಕೋಪ. ಈ ದೇಶದ ಹೆಣ್ಮಕ್ಕಳ ರಕ್ಷಣೆ ಗುತ್ತಿಗೆ ನೀನು ತಗೊಂಡಿದ್ದೀಯಾ?’
ನಾನು ಮೌನ.
ನನ್ನ ಮೌನ ಅವರನ್ನು ಕೆಣಕಿತ್ತೇನೋ?
‘ಯಾಕೆ ಸುಮ್ಮನಾದೆ. ಇದ್ದುದನ್ನು ಹೇಳ್ದೆ’.
ಏನೇ ಇರಲಿ ಹೆಣ್ಮಕ್ಕಳ ಬಗ್ಗೆ ಹಂಗೆಲ್ಲಾ ಮಾತಾಡೋದು [...]
ಭಾಷೆಯೇ ಮನುಷ್ಯನ ಶ್ರೇಷ್ಠ ಉಪಕರಣ
ಬೇಂದ್ರೆ ಕವಿತೆಗಳ ಬಗ್ಗೆ ಅಧಿಕಾರಯುತವಾಗಿ ಬರೆಯಬಲ್ಲ ಕೆಲವೇ ಕೆಲವರ ಪೈಕಿ ಸುನಾಥ್ ಒಬ್ಬರು. ಈ ಹಿಂದೆ ಅವಧಿ ಸುನಾಥರ ಸಲ್ಲಾಪ ಬ್ಲಾಗ್ನಿಂದ ಬೇಂದ್ರೆ ಕವಿತೆ ಕುರಿತ ನೋಟವನ್ನು ಹಂಚಿಕೊಂಡಿತ್ತು. ಈಗ ಭಾಷೆಯ ಕುರಿತು ಅವರ ವಿಭಿನ್ನ ನೋಟ ಇಲ್ಲಿದೆ.
ಭಾಷೆ ಎನ್ನುವ ಉಪಕರಣ
ಮಾನವಶಾಸ್ತ್ರಜ್ಞರು ಮಾನವನನ್ನು Tool using Primate ಎಂದು ಬಣ್ಣಿಸುತ್ತಾರೆ. Primateಗಳ ಗುಂಪಿನಲ್ಲಿ ಒರಾಂಗ ಉಟುಂಗ, ಚಿಂಪಾಂಝಿ, ಗೋರಿಲ್ಲಾ, ಕಪಿ ಹಾಗು ಮಾನವ ಮೊದಲಾದ ಜೀವಿಗಳ ಸೇರ್ಪಡೆಯಾಗುತ್ತದೆ.
ಉಳಿದ primateಗಳಿಗೂ ಮಾನವನಿಗೂ ಇರುವ ವ್ಯತ್ಯಾಸವೆಂದರೆ, ಮನುಷ್ಯನು ಉಪಕರಣಗಳನ್ನು ಸೃಷ್ಟಿಸಿಕೊಳ್ಳಬಲ್ಲ [...]
ಜನರೇಟರ್ ಕಪ್ಪು ಎರಡರ ಶ್ರುತಿಯಲ್ಲೇ ಇತ್ತು…
‘ಮನದ ನಾದಕ್ಕೆ ಶ್ರುತಿಯ ಸಾಥ್’ ನೀಡಲು ಬ್ಲಾಗ್ ಅಂಗಳಕ್ಕೆ ಬಂದವರು ಶ್ರೀದೇವಿ ಕಳಸದ. ಅವರು ಆಲಾಪದಲ್ಲಿ ಸಂಗೀತವನ್ನೇ ತುಂಬಿ ಕೊಟ್ಟಿದ್ದಾರೆ. ಅವರು ಆಲಾಪಿಸುವುದು ಹೀಗೆ- ಬೆಂಗಳೂರು ನನ್ನನ್ನು ಹಿಡಿದಿಟ್ಟುಕೊಂಡಿದೆ. ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಕೆಲಸ. ಅಭಿವ್ಯಕ್ತಿಗೆ ಬರೆವಣಿಗೆ. ನೋವು-ನಲಿವಿಗೆ ಹಿಂದೂಸ್ತಾನಿ ಸಂಗೀತ, ಧಾರವಾಡ ನನ್ನೂರು. ಅಪ್ಪ ಡಾ. ದೇವದಾಸ ಕಳಸದ. ಅಮ್ಮ ಕೌಸಲ್ಯೆ, ಪತಿ ಅರವಿಂದ್. ಇಷ್ಟು ಸಾಕೇನೋ…
ಜಯಮ್ಮ ಮತ್ತು ಜನರೇಟರ್ ಶ್ರುತಿ
-ಶ್ರೀದೇವಿ ಕಳಸದ
ಕಪ್ಪು ಎರಡರ ಶ್ರುತಿ ಹಿಡಿದೇ ಇತ್ತು ಜನರೇಟರ್
ಯಾರದೋ ಒತ್ತಾಯಕ್ಕೆಂಬಂತೆ ಆಗೊಮ್ಮೆ [...]
« Previous Entries







