Archive for June, 2008
ಜಿ ಟಿ ಎನ್ ಅವರಿಗೆ ಹೆಚ್ಚು ಕೆಲಸವಿತ್ತು…
-ಜಿ ಎನ್ ಮೋಹನ್
ಜಿ ಟಿ ನಾರಾಯಣರಾವ್ ಅವರು ಇನ್ನು ನೆನಪು ಮಾತ್ರ ಎಂದಾಗ ಏಕೋ ಒಂದು ಕ್ಷಣ ಮನಸ್ಸು ಒಪ್ಪಲು ಸಿದ್ಧವಾಗಲಿಲ್ಲ. ಮೈಸೂರಿನಿಂದ ನೋವಿನ ಈ ಸುದ್ದಿ ಹೊತ್ತ ರಮೇಶ್ ಪೆರ್ಲರ ಎಸ್ ಎಂ ಎಸ್ ಬಂದಾಗ ನನಗೆ ಆ ಒಂದು ದೊಡ್ಡ ದನಿ ಉಡುಗಿ ಹೋಯಿತಲ್ಲಾ ಎನಿಸಿತು.
ಆ ದೊಡ್ಡ ದನಿ ನನಗೆ ಯಾಕೆ ಮುಖ್ಯ ಎಂದರೆ ಅದು ಈ ಸಮಾಜದ ಒಂದು ದೊಡ್ಡ ದನಿಯೂ ಆಗಿತ್ತು ಎಂಬುದಕ್ಕೆ. ತನ್ನ ಕೊನೆಯ ದಿನದವರೆಗೆ ತಮ್ಮ ಮಕ್ಕಳಿಂದ ಹಿಡಿದು [...]
ಜಡೆಗೂ ಒಂದು ಬ್ಲಾಗ್?
ಜಡೆಗೂ ಒಂದು ಬ್ಲಾಗ್? ಆಶ್ಚರ್ಯ ಆದರೂ ನಿಜ. ಮಾಲಾ ರಾವ್ ಅವರಿಗೆ ಬರಹ ಸಲೀಸು. ಅದಕ್ಕೆ ಒಂದಿಷ್ಟು ಹಾಸ್ಯಪ್ರಜ್ಞೆಯ ಒಗ್ಗರಣೆ ಹಾಕುತ್ತಾರೆ ಹಾಗಾಗಿ ಇವರ ಬ್ಲಾಗ್ ಓದಲು ಇಂಟರೆಸ್ಟಿಂಗ್.
ಹೇಳಿಕೇಳಿ ಕವಿಗಳು ನೀಲವೇಣಿ ಪ್ರಿಯರು. ಮುಂಗುರುಳ ಮಾಲೆ ಪ್ರಿಯರು. ತಲೆಗೂದಲಲ್ಲೇ ಅಮಾವಾಸ್ಯೆ ಕಂಡವರು- ಕವಿಗಳು ಕಂಡ ಕೂದಲು ಈ ಬ್ಲಾಗ್ನಲ್ಲಿದೆ. ಅಷ್ಟೆ ಅಲ್ಲ ತಲೆಗೂದಲಲ್ಲಿ ವಾಕಿಂಗ್ ನಡೆಸುವ ಹೇನುಗಳ ಬಗ್ಗೆ ಅಣಕವಾಡುಗಳಿವೆ. ‘ಅಂದ ಕಾಲತ್ತಿಲ್’ ಕೂದಲಿಗೆ ಮಾಡುತ್ತಿದ್ದ ಅಜ್ಜಿ ಮದ್ದು ಇದೆ. ಫಾರಿನರ್ಸ್ ಕೂದಲು ಹೇಗೆ ನೋಡಿಕೊಳ್ಳುತ್ತಾರೆ ಎಂಬ [...]
ಓಓಓ…ಅಜ್ಜಿ ಕಾಲದ ಒಡವೆ…
ಮೊಗ್ಗಿನ ಜಡೆ ಬ್ಲಾಗ್ ನಿಂದ ಆಯ್ದ ಅಜ್ಜಿ ಕಾಲದ ಒಡವೆ ಬಗೆಗಿನ ಲೇಖನ ಇಲ್ಲಿದೆ-
ಬೈತಲೆ ಬೊಟ್ಟು
ಓಓಓ…ಅಜ್ಜಿ ಕಾಲದ ಒಡವೆ… ಅಂತ ಮೂಗು ಮುರಿಸಿಕೊಂಡು ಅಮ್ಮನ ಒಡವೆ ಪೆಟ್ಟಿಗೆಯ ತಳ ಸೇರಿದ
ಒಡವೆಗಳಿಗೆಲ್ಲಾ ಮತ್ತೆ ಗಾಳಿ ಬೆಳಕು ನೋಡುವ ಅವಕಾಶ ಪ್ರಾಪ್ತವಾಗುತ್ತಿದೆ
ಟಿವಿ ಯಲ್ಲಿ ಬರುವ ‘ ಕೆ ‘ ಅಕ್ಷರದ ಸೀರಿಯಲ್ ಗಳ ಪ್ರಭಾವವೋ ಅಥ್ವಾ ಕನ್ನಡದವರು ಒಂದಿಷ್ಟೂ ಮೂಲದಿಂದ ಬದಲಾಯಿಸದೆ ತೆಲುಗಿನಿಂದ ತರುವ ಸಿನಿಮಾಗಳ ಪ್ರಭಾವ ಇದಕ್ಕೆ ಕಾರಣವೋ ಹೇಳುವುದು ಕಷ್ಟ ಜೊತೆಗೆ ನಮ್ಮ ಹೆಪ್ ಹುಡುಗಿಯರಿಗೂ [...]
ಗೇರುತೋಪಿನ ಕಾವಲುಗಾರ
ಹೈವೇ 7 ವಿ ಎಂ ಮಂಜುನಾಥ್
———-
ಅಭಿನವ ಬೋದಿಲೇರ್ ಎಂದು ಕರೆಯಲ್ಪಡುವ ಹೊಸ ತಲೆಮಾರಿನ ಕವಿ ವಿ.ಎಂ.ಮಂಜುನಾಥ್ ತಮ್ಮ ಹಸಿ ಹಾಗೂ ತೀಕ್ಷ್ಣ ಪ್ರತಿಮೆಗಳ ಮೂಲಕ ಕನ್ನಡ ಕಾವ್ಯಾಸಕ್ತರನ್ನು ಅಚ್ಚರಿಗೊಳಿಸಿದವರು. ಅವರು ಈಚೆಗೆ ಬರೆಯುತ್ತಿರುವ ಹೈವೆ-೭ ಎಂಬ ಆತ್ಮಕಥನದ ಕೆಲವು ವಿಶಿಷ್ಟ ಭಾಗಗಳು
* * *
ನನ್ನ ಗ್ರಾಮದ ಕುಂಟಮುನಿಸ್ವಾಮಿ ಗೇರುತೋಪಿನ ಕಾವಲುಗಾರನಾಗಿ ಸೇರಿಕೊಂಡ. ಅವನಿಗೆ ಒಂದು ಕೈ ಇರಲಿಲ್ಲ. ನಾನು ಚಿಕ್ಕಂದಿನಿಂದ ಅವನನ್ನು ಹತ್ತಿರದಿಂದ ನೋಡಿ ಬೆಳೆದಿದ್ದರೂ ಅದು ಯಾವ ಕೈ ಎಂದು ನನಗೆ ಈಗ ಹೇಳಲಾಗುತ್ತಿಲ್ಲ [...]
ಕದ್ದೇ ಬಿಡಬೇಕು ಅನ್ನುವಂತೆ ಮಾಡಿದ್ದು …
ಕದಿಯಲೇ ಬೇಕು ಎನಿಸಿಬಿಡುವ ವಸ್ತುಗಳಿವೆ. ಆದರೆ ನಾವು ಮಾರುವೇಷದಲ್ಲಿ ಬ್ಲಾಗ್ ಸಂಚಾರ ನಡೆಸಿದಾಗ ಕದ್ದೇ ಬಿಡಬೇಕು ಅನ್ನುವಂತೆ ಮಾಡಿದ್ದು ಎರಡು ಕವಿತೆಗಳು. ಕದ್ದಿದ್ದೀರಾ ಎಂದು ಆ ಇಬ್ಬರೂ ಕವಿಗಳು ದೂರು ದಾಖಲು ಮಾಡಿದಲ್ಲಿ ಇನ್ನಷ್ಟು ಓದುಗರ ಮುಂದೆ ಅವರ ಕವಿತೆಗಳನ್ನು ಇಟ್ಟ ತಪ್ಪಿಗಾಗಿ ಅವರ ಠಾಣೆಯಲ್ಲಿ ಸ್ವಯಂ ಶರಣಾಗತರಾಗಲು ನಾವು ಸಿದ್ಧ.
ಇಲ್ಲಿ ನಾವು ಎನ್ನುವ ಬಳಕೆ ಸ್ವಾಮಿಗಳ ಲೋಕದಿಂದ ಎರವಲು ತಂದದ್ದಲ್ಲ. ‘ಅವಧಿ’ ನಡೆಸುತ್ತಿರುವವರು ಒಬ್ಬರೇ ಅಲ್ಲ ಎಂಬ ಕಾರಣಕ್ಕೆ. ತಲೆಹರಟೆ ನಿಲ್ಲಿಸಿ ನಿಮ್ಮ ಮುಂದೆ ಎರಡು [...]
ಪುಸ್ತಕ ಪ್ರೀತಿಸಲು ಬನ್ನಿ
ಕೇಳು ಜನಮೇಜಯ, ಬುಕ್ ಬಜಾರ್ ಸಾಲಿಗೆ ಈಗ ಮತ್ತೊಂದು ಸೇರ್ಪಡೆ- ‘ಪುಸ್ತಕ ಪ್ರೀತಿ’. ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಆರಂಭವಾಗಿರುವ ಈ ಬ್ಲಾಗ್ ಪುಸ್ತಕಕ್ಕೆ ಸಂಭಂದಿಸಿದಂತೆ ಒನ್ ಸ್ಟಾಪ್ ಶಾಪ್ ಆಗುವ ಕನಸು ಹೊಂದಿದೆ. ಪುಸ್ತಕದ ಬಗ್ಗೆ ಮಾಹಿತಿ, ವಿಮರ್ಶೆ ನೀಡುವುದೇ ಅಲ್ಲದೆ ರಾಜ್ಯಾದ್ಯಂತ ತನ್ನದೇ ಮಾರಾಟ ಜಾಲವನ್ನು ಹೊಂದುವ ಯೋಚನೆ ಇದೆ. ಪುಸ್ತಕವೆಂದರೆ ಪುಸ್ತಕವಲ್ಲ- ಅರಿವಿನ ಗೂಡು ಎಂಬ ಆಶಯದಲ್ಲಿ ನಂಬಿಕೆ ಹೊಂದಿರುವ ಈ ಬ್ಲಾಗ್ ಅಚ್ಚುಕಟ್ಟಾಗಿ ಟೇಕ್ ಆಫ್ ಆಗಿದೆ. ಈ ಬ್ಲಾಗ್ ‘ಚಿಂತನ’ [...]
Read Full Post | Make a Comment ( 8 so far )‘ಅಯ್ಯಪ್ಪನ ಸೀಸನ್ನಲ್ಲಿ ಸ್ವಲ್ಪ ಪ್ರಾಬ್ಲಮ್’
P for…
-ಲೀಲಾ ಸಂಪಿಗೆ
ಸುಮಾರು ಆರರಿಂದ ಆರೂವರೆ ಅಡಿ ಉದ್ದ, ಮೂರೂವರೆ ಅಡಿ ಅಗಲ, ಒಂದುವರೆ ಅಡಿ ಆಳ! ದಟ್ಟವಾದ ಕುರುಚಲು. ಏಳೆಂಟು ಅಡಿ ಬೆಳೆದು ಚಿಕ್ಕ ಚಿಕ್ಕ ಛತ್ರಿಯಂತೆ ಹರಡಿಕೊಂಡು ಇತ್ತ ನೆರಳಿಗೂ ಅಲ್ಲದ, ಅತ್ತ ಮರವೂ ಅಲ್ಲದ ಜಾಲಿ. ಒಂದೊಂದು ಗುಂಡಿಗಳಿಗೂ ನೆರಳು ಕೊಡುವ ಭ್ರಮೆಯಲ್ಲಿ ನಿಂತಿವೆಯೇನೋ ಎಂಬಂತೆ ನಿಂತ ಪೋಸ್. ಪ್ರತಿ ಗುಂಡಿಯ ಒಳಗಡೆ ಹಾಸಿರುವ ಸೀರೆ ಅಥವಾ ದುಪ್ಪಟಗಳು. ಇದು ತನ್ನದೇ ಗುಂಡಿ ಎಂದು ಖಡಕ್ಕಾಗಿ ಹೇಳೋಕೆ ಒಂದು ಐಡೆಂಟಿಟಿ.
ಇದೇನು ಸ್ಮಶಾನ ವರ್ಣನೆ [...]
“ತುಳಸಿವನ”-”ಸುಪ್ತದೀಪ್ತಿ”
ಕನ್ನಡ ಸಾಹಿತ್ಯ ವಲಯದಲ್ಲಿ ಸದಾ ಓಡಾಡುವ-ಓದಾಡುವ ಎಲ್ಲರಿಗೂ ಪರಿಚಿತ ಹೆಸರುಗಳೆರಡು ತಮ್ಮ ಮುಖಗಳನ್ನು ನಿಮ್ಮೆಲ್ಲರೆದುರು ತೋರಲಿವೆ.
ಜುಲೈ ತಿಂಗಳ ಕೊನೆಯ ಭಾನುವಾರ (೨೭ನೇ ತಾರೀಖು) ಬೆಳಗ್ಗೆ ೧೦ ಗಂಟೆಗೆ ಸುಚಿತ್ರ ಫಿಲ್ಮ್ ಸೊಸೈಟಿಯ ಸಭಾಂಗಣದಲ್ಲಿ ಅವರಿಬ್ಬರೂ ನಿಮ್ಮನ್ನೆಲ್ಲ ಎದುರುಗೊಳ್ಳಲಿದ್ದಾರೆ.
ನೀವೆಲ್ಲ ಅಲ್ಲಿಗೆ ಬರಬೇಕು- ಇವರಿಬ್ಬರ ಬೆನ್ನು ತಟ್ಟಲು, ಕೈ ಕುಲುಕಲು, ನೆತ್ತಿ ಸವರಿ ಹರಸಲು. ಯಾಕೇಂದ್ರೆ…
ಆದಿನ, ಇವರಿಬ್ಬರೂ ಆಸಕ್ತ ಓದುಗರ ಸಂಗ್ರಹಕ್ಕೆ ಸೇರಿಸಲು, ತಮ್ಮ ಹೊಸ ಕೃತಿಗಳ ಪೊರೆ ಕಳಚುವ ಹಂಚಿಕೆಯಲ್ಲಿದ್ದಾರೆ…
ಅವರಿಬ್ಬರು ಯಾರ್‍ಯಾರೆಂಬ ಕುತೂಹಲವೆ?
“ತುಳಸಿಯಮ್ಮ” ಖ್ಯಾತಿಯ ತ್ರಿವೇಣಿ ಶ್ರೀನಿವಾಸರಾಯರು “ತುಳಸಿವನ”ದ [...]
« Previous Entries







