Archive for March, 2008
“ಛೀ! ಹಾಳು ಗಂಡಸು!” ಅನ್ನಿಸುತ್ತೆ ನಿಜ..
ಚೇತನಾ ತೀರ್ಥಹಳ್ಳಿ ಬರೆವ ಕಥೆ ರೂಪದ ಕವಿತೆಗಳು ಅಥವಾ ಕವಿತೆ ರೂಪದ ಕಥೆಗಳು ಅವಧಿ ಓದುಗರನ್ನು ಇನ್ನಿಲ್ಲದಂತೆ ಕಾದಿದೆ. ಈ ಮಧ್ಯೆ ಚೇತನಾ ಸಮಕಾಲೀನ ವಿಷಯಗಳನ್ನು ಕೈಗೆತ್ತಿಕೊಂಡು ತಮ್ಮ ಸ್ಪರ್ಶ ನೀಡಲು ಪ್ರಯತ್ನಿಸಿದ್ದಾರೆ. ಓದಿ ನೋಡಿ. ಇಷ್ಟ ಆಯಿತು ಎನ್ನುವುದಾರೆ ಇಂತಹ ಇನ್ನಷ್ಟು ಬರಹಗಳನ್ನು ಅವರು ಬರೆಯಲಿದ್ದಾರೆ.
*** ಬರೋಬ್ಬರಿ ನಲವತ್ತು ವರ್ಷಗಳ ಕಾಲ ಹೆಂಡತಿಯನ್ನ ಹುರಿದುಮುಕ್ಕಿದ ನೈಪಾಲರು ಕನ್ಫೆಸ್ ಮಾಡಿಕೊಂಡಿದ್ದಾರೆ. “ಬಹುಶಃ ನಾನು ನಿರಂತರವಾಗಿ ನೀಡಿದ ಮಾನಸಿಕ ಹಿಂಸೆಯೇ ಅವಳನ್ನು ಕೊಂದಿತು” ಎಂದು ಹೇಳಿಕೊಂಡಿದ್ದಾರೆ. ಪ್ಯಾಟ್ರಿಕ್ ಫ್ರೆಂಚ್ ಮೂಲಕ [...]
ಬಾಲ್ಯ ಕಾಲ ಎಂಬ ಸಖಿ
“ಡೋರ್ ನಂ 142″
ಬಹುರೂಪಿ
“ಒಂದ್ನಿಮಿಷ ಇರು” ಅಂತ ಹೇಳಿದ ಅಪ್ಪ ದಿಢೀರ್ ಮಾಯಾ ಆದ್ರು. ಟ್ರೇನ್ ಆಗಲೇ ಶಿಳ್ಳೆ ಹಾಕ್ತಾ ನಿಂತಿತ್ತು. ಇನ್ನು ಯಾವ ಕ್ಷಣದಲ್ಲಿ ಬೇಕಾದರೂ ಹೊರಟುಬಿಡ್ತೀನಿ ಅನ್ನೋ ಥರಾ ರಾಗ ಎಳೀತಿತ್ತು. ಕಿಟಕಿಯಿಂದ ಆಚೆ ಎಲ್ಲಾ ಕಡೆ ಕಣ್ಣಾಡಿಸ್ದೆ. ಅಪ್ಪ ಕಾಣ್ತಿಲ್ಲ. ಟ್ರೇನ್ ಓಡಿಸೋರಿಗೆ ಏನು ಗೊತ್ತಾಗುತ್ತೆ? ನಾನು ಅಪ್ಪನ್ನ ಕಾಯ್ತಾ ಇದೀನಿ ಅಂತ. ಚುಕ್ ಚುಕ್ ಅಂತ ಸದ್ದು ಮಾಡ್ತಾ ಹೊರಟೇಬಿಡ್ತು. ಅಪ್ಪ ಕೈಬೀಸಿ ನನ್ನ ಕಳಿಸ್ದೇ ಇದ್ರೆ ನನಗೆ ಯಾಕೋ ಎಲ್ಲಾ ಸರಿ [...]
Read Full Post | Make a Comment ( 1 so far )ಇವತ್ತು ಮನೆಯ ನಂಬರ್ ಅಳಿಸಿ ಹಾಕಿದ್ದೇನೆ..
‘ಅಲೆಮಾರಿ’ ಕನ್ನಡದ ಭರವಸೆಯ ಅನುವಾದಕರಾಗಬಲ್ಲ ಕಸುವು ಹೊಂದಿದ್ದಾರೆ. ಅವರ ಓದಿನ ವಿಸ್ತಾರ ಸಹಾ ಬೆರಗು ಹುಟ್ಟಿಸುವಂತಿದೆ. ಅಮೃತಾ ಪ್ರೀತಂ ರ ಕವನ, ಕಥೆಗಳು ಹಲವರ ಕೈನಲ್ಲಿ ಅರಳಿದೆ. ಕೆಲವರ ಕೈನಲ್ಲಿ ನರಳಿದೆ. ಇಂತಹ ಪರಿಸ್ಥಿತಿಯ ನಡುವೆ ಈ ಅಲೆಮಾರಿ ಅನುವಾದದ ರುಚಿ ನೋಡಿ. ಚೆನ್ನಾಗಿದೆ ಅನಿಸಿದರೆ ಬರೆಯಿರಿ-alemaricta@gmail.com
***
ವಾರದ ಹಿಂದೆ ಊರಿಗೆ ಹೋಗುವಾಗ ನನಗೀ ಪದ್ಯಗಳು ಸಿಕ್ಕವು. ಅಮೃತಾ ಪ್ರೀತಂ ವ್ಯಾಮೋಹ. ಆಕೆಯ ಕಥೆಯನ್ನು ಓದುತ್ತಾ ಊರು ಸೇರಿದ ಮೇಲೆ ಈ ಪದ್ಯಗಳನ್ನು ಓದಿ ಮುಗಿಸಿದೆ. ಓದು ತುಂಬಾ [...]
ಹೃದಯದ ಬಾಗಿಲು ಬಡಿಯುವ ಚೇತನಗಳು
ಒಡನಾಟ
ಎಸ್ ಅರ್ ವಿಜಯಶಂಕರ
ವ್ಯಕ್ತಿಚಿತ್ರಗಳು
ಆನಂದ ಕಂದ ಗ್ರಂಥಮಾಲೆ
ಮಲ್ಲಾಡಿಹಳ್ಳಿ -೫೭೭೫೫೧
ಚಿತ್ರದುರ್ಗ
ಈ ಬರಹಗಳನ್ನು ಓದುವಾಗ ನನಗೆ ಆತ್ಮೀಯವಾಗಿ ಕಂಡದ್ದು ವಿಜಯಶಂಕರ ಅವರ ವಿಸ್ತಾರ ಓದು ಮತ್ತು ಸೂಕ್ಷ್ಮ ಗ್ರಹಿಕೆ. ಸಣ್ಣ ಪ್ರಸಂಗಗಳನ್ನೂ ಅನೂಹ್ಯವಾದ ಎತ್ತರದಲ್ಲಿ ಚಿಂತಿಸಬಲ್ಲಂತೆ ಮಾಡುವ ಅವರ ವಿಶ್ಲೇಷಣೆಯಿಂದಾಗಿ ಒಂದು ಬೌದ್ಧಿಕ ಮತ್ತು ಮಾನವೀಯ ನೆಲೆಗಳು ಇಲ್ಲಿನ ಬರಹಗಳಿಗೆ ತಾನೇ ತಾನಾಗಿ ಒದಗಿ ಬಂದಿವೆ.
ಇಲ್ಲಿ ರೂಪುಗೊಂಡ ಹಲವು ವ್ಯಕ್ತಿತ್ವಗಳು ಸಾಹಿತ್ಯ-ಸಂಸ್ಕೃತಿ ವಲಯದವು, ಇನ್ನೂ ಹಲವು ಸಂಶೋಧನಾ ವಲಯಕ್ಕೆ ಸೇರಿದವು: ಇನ್ನಷ್ಟು ಲೋಕದ ಇನ್ನು ಹಲವು ಜ್ಞಾನ ವಲಯಕ್ಕೆ ಸೇರಿದವು. [...]
ಬ್ರೇಕಿಂಗ್ ನ್ಯೂಸ್ -ಇದು ಅಪಾ’ರಂ’
‘ಮದ್ಯಸಾರ’ ಬರೀತಾ ಇರೋ ಅಪಾರ ಈಗ ‘ಗುಂಡ್ ಮಾಸ್ಟರ್’ ಅಂತಾನೇ ಫೇಮಸ್. ಅವರು ಗುಂಡು ಹಾಕ್ತಾರೋ ಇಲ್ವೋ ಗೊತ್ತಿಲ್ಲ ಆದ್ರೆ ಗುಂಡು ಹಾಕ್ದೋರು ಕಾಣೋದಕ್ಕಿಂತ ಜಾಸ್ತಿ ಲೋಕ ಕಂಡಿದಾರೆ. ರೀಸೆಂಟಾಗಿ ಒಬ್ಬ ಕಲಾವಿದರು- ‘ಅಪಾರ ಬರೀತಾ ಇದಾರಲ್ಲ ನಾಲ್ಕು ಕಾಲಿನ.. ಸಾರಿ, ನಾಲ್ಕು ಸಾಲಿನ ಕವನ ಅದನ್ನ ಕನ್ನಡ ಸಾಹಿತ್ಯದಲ್ಲಿ ಏನಂತ ಕರೀತಾರೆ?’ ಅಂತ ಕೇಳಿದ್ರು. ಜೊತೆಯಲ್ಲಿದ್ದವರು ತಕ್ಷಣ ಹೇಳಿದರು- ಅಪಾರಂ ಅಂದ್ರೆ ಅಪಾ’ರಂ’ ಅಂತ.
ಡುಂಡಿರಾಜ್ ಒಂದ್ಸಲ ಹೇಳಿದ್ರು-
ಅಪ್ಪಾ ಕುಮಾರವ್ಯಾಸ
ನಾನು ನಿನ್ನ ದಾಸ
ನೀನು ಬರೆದದ್ದು ಭಾಮಿನಿ
ನನ್ನದೋ ಬರೀ [...]
ಗುಜ್ಜಾರ್ ಗೆರೆ ೮
ಮಾರುಕಟ್ಟೆಗೆ ಬರಲಿರುವ ಕನ್ನಡ ಟೈಮ್ಸ್ ನ ಮುಂದಿನ ಸಂಚಿಕೆಯಲ್ಲಿ ಪ್ರಸಕ್ತ ರಾಜಕಾರಣದ ಬಗ್ಗೆ ಗುಜ್ಜಾರ್ ಹರಿಸಿದ ನೋಟ ಇಲ್ಲಿದೆ.
Read Full Post | Make a Comment ( None so far )ಬ್ಲಾಗಮಂಡಲ
‘ಚಂದಿನ’- ಅವಧಿಯ ಖಾಯಂ ಓದುಗರು. ಅಪಾರ ಪ್ರೀತಿಯಿಂದ ನಮ್ಮ ಬರಹಗಳಿಗೆ ಪ್ರತಿಕ್ರಿಯಿಸುತ್ತಾರೆ. ಕವಿತೆ ಇವರನ್ನು ಸೆಳೆದಿದೆ. ಹಾಗಾಗಿ ತಮ್ಮ ಭಾವನೆಗಳಿಗೆ ವೇದಿಕೆ ಒದಗಿಸಲು ‘ಕೂಗು’ ಬ್ಲಾಗ್ ರೂಪಿಸಿದ್ದಾರೆ. ಹತ್ತು ಹಲವು ವಿಷಯಗಳ ಸುತ್ತ ಇವರ ಕವನಗಳು ಗಿರಕಿ ಹೊಡೆಯುತ್ತವೆ. ಈ ಬಾರಿ ಕನ್ನಡದ ಬ್ಲಾಗ್ ಗಳನ್ನೇ ಆಧರಿಸಿ ಕವಿತೆ ರಚಿಸಿದ್ದಾರೆ. ಕುತೂಹಲಕರವಾಗಿದೆ. ಓದಿ…
ನಲ್ದಾಣಗಳ ಸುತ್ತೋಣ
ಪದಗಳ ಜಗದಲಿ ಗಾಳಿ ಬೆಳಕು
ನವಿಲುಗರಿಯ ಕಣ್ಣಿನ ನೆನಪು
ಭಾಮಿನಿ ಷಟ್ಪದಿ ದೇಶ ಕೋಶ
ಬಾ ಕವಿತಾ ಬ್ಲಾಗಮಂಡಲಕೆ
ಚಿನ್ನದ ಪುಟಗಳ ಬುಕ್ ಬಝಾರಿಗೆ
ಟೈಂಪಾಸ್ ಕಡ್ಲೆಕಾಯ್ ಜೊತೆ
ಮಹಮ್ಮದ್ ಮ್ಯಾಜಿಕ್ [...]
ಸಾಯಿನಾಥ್ ಎಂಬ ಮೋಡಿಗಾರ
ಮಾಧ್ಯಮ ಲೋಕದ ಭಿನ್ನ ಪಯಣಿಗ ಪಿ ಸಾಯಿನಾಥ್ ಬೆಂಗಳೂರಿಗೆ ಬಂದಿದ್ದರು. ಜಾಗತೀಕರಣದ ಕಾಲದಲ್ಲಿನ ಮಾಧ್ಯಮಕ್ಕೆ ಒಂದಿಷ್ಟಾದರೂ ವಿವೇಕ ತಂದು ಕೊಡಲು ಪ್ರಯತ್ನಿಸುತ್ತಿರುವ ಸಾಯಿನಾಥ್ ಅವರ ಹಲವು ಮುಖಗಳು ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ..
ಚಿತ್ರಗಳು : ಜಿ ಎನ್ ಮೋಹನ್
ಶಾನುಭೋಗರ ಮಗಳು
ರಜನಿ ಅಮ್ಮೆಂಬಳ
ಕೆ.ಎಸ್.ನರಸಿಂಹಸ್ವಾಮಿಯವರ “ಶಾನುಭೋಗರ ಮಗಳು” ಕವನದಲ್ಲಿ ಚಿತ್ರಣಗೊಂಡಿರುವ ಹುಡುಗಿ ನಮಗೆ ಬಲು ಗುರ್ತಿನವಳು. ತನ್ನ ಸಂಕೋಚದಿಂದ, ಕಡಿಮೆ ಮಾತುಗಳಿಂದ ಮತ್ತು ಇಷ್ಟವಿಲ್ಲದ್ದನ್ನು ಒಲ್ಲೆನೆಂಬ ನೇರವಂತಿಕೆಯಿಂದಲೇ ಮನಸ್ಸು ಗೆಲ್ಲುವ ಹುಡುಗಿ ಆಕೆ.
ತಾಯಿಯಿಲ್ಲದ ಆ ಹುಡುಗಿಯ ಬಗ್ಗೆ ಅಕ್ಕರೆಯಿಂದ ವರ್ಣಿಸುವ ಕವಿ, ತಾವರೆಕೆರೆಯ ಜೋಯಿಸರ ಮೊಮ್ಮಗ ಆಕೆಯನ್ನು ನೋಡಲು ಅವರ ಮನೆಗೆ ಬಂದಾಗಿನ ಪ್ರಸಂಗವನ್ನು ಹೇಳುತ್ತಾರೆ. ಆಕೆ ಕೋಣೆಯೊಳಗಿಂದಲೇ “ವೈದಿಕರ ಮನೆಯಲ್ಲಿ ಊಟ ಹೊತ್ತಾಗುತ್ತೆ, ಒಲ್ಲೆ” ಎಂದುಬಿಡುತ್ತಾಳೆ.
ಆದರೆ ನಿಜವಾಗಿಯೂ ಅವಳು ಈ ಸಂಬಂಧ ನಿರಾಕರಿಸಲು ಕಾರಣ ಅದಾಗಿರುವುದಿಲ್ಲ. ತನ್ನನ್ನು ನೋಡಲು [...]
ನೋವಿನ ಮುಂದೆ ನಿರಂತರ ಯುದ್ಧ
“ಭಾಮಿನಿ ಷಟ್ಪದಿ”
ಚೇತನಾ ತೀರ್ಥಹಳ್ಳಿ
ಮತ್ತೆ ಮತ್ತೆ ಕ್ಲಿಪ್ಪು ಟಪಟಪಾರೆನಿಸಿ ಜುಟ್ಟು ಬಿಗಿದಳು.
ಊಹೂಂ… ಅವೆರಡು ಕೂದಲು ಒಳಸೇರ್ತಲೇ ಇಲ್ಲ. ತುದಿ ಬೇರೆ ಮಾವಿನ ಕಾಯಿ ಮೂತಿಯಾಗಿದೆ!
ಐ ಲೈನರು ತೀಡಿ, ಲಿಪ್ ಸ್ಟಿಕ್ಕು ಮೆತ್ತಿ, ಅಂತೂ ರೆಡಿ! ಟೈಮ್ ಟೇಬಲಿನಲ್ಲಿ ಅದಕ್ಕಂತಲೇ ಅರ್ಧ ಗಂಟೆ ನಿಗದಿಯಾಗಿದೆ.
ಹೀಗೆ ದಿನಕ್ಕೊಂದು ರೀತಿ ಡ್ರೆಸ್ಸು ಮಾಡ್ಕೊಂಡು ಛಿಲ್ಲನೆ ನಗುತ್ತ ಹುಡುಹುಡುಗಿಯಾಗಿ ಸಂತೂರ್ ಅಡ್ವರ್ಟೈಸಿನ ಮಾಡೆಲಾಗೋದು ಅವಳಿಗೆ ಖುಶಿ.
ಆದರೆ,
ಆದರೆ ಅದರಲ್ಲಿ ಬರುವ ಹಾಗೆ ‘ಮಮ್ಮೀ…’ ಅನ್ನುತ್ತ ಓಡಿ ಬರಲು ಮಗುವೊಂದು ಬಳಿಯಿಲ್ಲ.
ಇದು “ಅಷ್ಟೇ” ಅಂದು ಸುಮ್ಮನಾಗುವ ವಿಷಯವಲ್ಲ.
*
“ಹೆಣ್ಣಲ್ಲ, [...]
« Previous Entries







