Archive for February 29th, 2008
ಅಕ್ಷರವೆಂದರೆ ಅಕ್ಷರವಲ್ಲ..
ಅಕ್ಷರಗಳು ಮೋಡಿ ಮಾಡುತ್ತಾವೆ ಎನ್ನುತ್ತಾರೆ. ಅಂತಹ ಮೋಡಿ ಮಾಡುವ ಅಕ್ಷರಗಳ ಸ್ಯಾಂಪಲ್ ಇಲ್ಲಿದೆ. ಸುದೇಶ್ ಮಹಾನ್ ಅಂತಹ ಮೋಡಿ ಅಕ್ಷರಗಳಿಗೆ ಹೆಸರಾದವರು. ಅವರ ಅಕ್ಷರಗಳನ್ನು ನೋಡುವುದೇ ಒಂದು ಚಂದ. ಇವರು ನಾಟಕಗಳಿಗೆ ಬರೆದ ಪೋಸ್ಟರ್ ಗಳಲ್ಲಿ ಚಿತ್ರದಂತೆಯೇ ಇದ್ದ ಈ ಅಕ್ಷರಗಳೂ ಕಾಡಿದ್ದವು. ಟಿ ವಿ ದಾರವಾಹಿಗಳಾದ ಮಂಥನ, ಮುಕ್ತ ಗಳಲ್ಲಿ ಇವರ ಅಕ್ಷರವೂ ಹಲವರನ್ನು ಗೆದ್ದಿದೆ.
Read Full Post | Make a Comment ( 1 so far )ಗೇಟ್ ಬಳಿ ಕಾದಿರುತ್ತೇನೆ….
ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಪತ್ರಿಕೋದ್ಯಮ ಮೇಷ್ಟ್ರು, ಹಿತೈಷಿಗಳು, ಹಿರಿಯರಾದ ನಾಗೇಶ ಹೆಗಡೆ, ವನ್ಯಜೀವಿ ಸಂರಕ್ಷರಣೆಯಲ್ಲಿ ಅಪಾರ ಸೇವೆ ಸಲ್ಲಿಸಿರುವ ಡಾ.ಉಲ್ಲಾಸ ಕಾರಂತ ಹಾಗೂ ಪರಿಸರ ಸಂರಕ್ಷಣೆಗಾಗಿ ದುಡಿದಿರುವ ಡಾ.ಎಚ್.ಆರ್.ಕೃಷ್ಣಮೂರ್ತಿಯವರು 60 ವಸಂತಗಳನ್ನು ಪೂರೈಸಿದ್ದಾರೆ. ಈ ಶುಭ ಸಂದರ್ಭದಲ್ಲಿ ‘ಸಂಕುಲ’ ತಂಡ ಅವರನ್ನು ಅಭಿನಂದಿಸಲು ತೀರ್ಮಾನಿಸಿದೆ.
ಮಾರ್ಚ್ 2, 2008ರಂದು ಭಾನುವಾರ, ಜಯನಗರ 1ನೇ ಬ್ಲಾಕ್ ನಲ್ಲಿರುವ ಆರ್.ವಿ.ಟೀಚರ್ಸ್ ಕಾಲೇಜಿನಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಿದೆ. ಮಾಧ್ಯಮ ಕ್ಷೇತ್ರದ ಗೆಳೆಯರು, ಪರಿಸರ, ವನ್ಯಜೀವಿ ವಿಷಯದ ಬಗ್ಗೆ ಪ್ರೀತಿಯಿರುವ ಅನೇಕರು ಆ ಸಮಾರಂಭದಲ್ಲಿ ಭಾಗವಹಿಸುತ್ತಾರೆ. [...]
ಕಿಟಕಿಗಳನ್ನು ನಾನು ತೆಗೆಯಲಾಗುವುದಿಲ್ಲ..
ಇವರು ಚಿತ್ರಾ ಕರ್ಕೇರಾ ದೋಳ್ಪಾಡಿ. ಬೆಳದಿಂಗಳಿಗೂ ಇವರಿಗೂ ಬಿಡಲಾಗದ ನಂಟು. ಹಾಗಾಗಿಯೇ ‘ಬೆಳದಿಂಗಳೇ ನೀ ಕಲೆಗಾರ..’ ಎಂಬ ಟ್ಯಾಗ್ ಲೈನ್ ನಲ್ಲಿ ‘ಶರಧಿ’ ಎಂಬ ಬ್ಲಾಗ್ ಹೊಂದಿದ್ದಾರೆ. ಭಾವದಲೆಗಳ ಪಯಣ ಆರಂಭಿಸಿದ್ದಾರೆ. ಇವರು ತಮ್ಮ ಪರಿಚಯವನ್ನು ಮಾಡಿಕೊಳ್ಳುವುದು ಈ ರೀತಿ. ತಸ್ಲೀಮಾ ನಸ್ರೀನ್ ಅವರ ಇಂದಿನ ಮನಸ್ಥಿತಿಯನ್ನು ಸರಿಯಾಗಿ ಬಣ್ಣಿಸುವ ಅವರ ಕವನವನ್ನು ಚಿತ್ರಾ ಇಲ್ಲಿ ಅನುವಾದಿಸಿದ್ದಾರೆ.
‘ನನ್ ಬಗ್ಗೆ ಹೇಳಕ್ಕೇನೂ ಇಲ್ಲ..ನಾನ್ ಥೇಟ್ ನಿಮ್ ಥರಾನೇ. ಕೂತಾಗ-ನಿಂತಾಗ ಎಲ್ಲೋ ಒಂದೆಡೆ ಮನದಲ್ಲಿ ಉದಿಸಿದ ಭಾವದಲೆಗಳ ಪುಟ್ಟ ಪಯಣ [...]







