Archive for February 28th, 2008
ಪ. ಸ. ಅವರ ರೇಖಾ…
ಪ ಸ ಕುಮಾರ್ ಅವರ ವರ್ಣಚಿತ್ರಗಳು ‘ಅವಧಿ’ ಓದುಗರಿಗೆ ಮೋಡಿ ಹಾಕಿದೆ. ಅವರ ರೇಖಾಚಿತ್ರಗಳನ್ನು ನೀಡುವಂತೆ ಬಹುತೇಕ ಮಂದಿ ‘ಹಕ್ಕೊತ್ತಾಯ’ ಮಂಡಿಸಿದ್ದಾರೆ. ಇಲ್ಲಿದೆ ಅವರ ಇನ್ನೊಂದು ಬಗೆಯ ಪ್ರತಿಭೆಯ ಮಿಂಚು. ಇದಲ್ಲದೆ ಇನ್ನಷ್ಟು ಪಕ್ಕದ ನಮ್ಮ ಫೋಟೋ ಗ್ಯಾಲರಿಯಲ್ಲಿದೆ.
ಒಳಗೂ…ಹೊರಗೂ… ಬ್ಲಾಗ್ ನ ‘ಅಲೆಮಾರಿ’ಯವರ ನೆನಪುಗಳೂ ಇವೆ.
ಅಲೆಮಾರಿ | alemaricta@gmail.com | olagoo-horagoo.blogspot.com |
ಪ.ಸ.ಕುಮಾರ್-
ನನಗೆ ತುಂಬಾ ಇಷ್ಟದ ಕಲಾವಿದರು. ಅವರೊಂದಿಗೆ ಇದ್ದ ಎಲ್ಲ ಸಂದರ್ಭಗಳಲ್ಲಿ ಅವರ ಆಸಕ್ತಿ, ಉತ್ಸಾಹಗಳನ್ನು ಕಂಡು ನಾಚಿದ್ದೂ ಇದೆ. ಯಾಕೆಂದರೆ ಅವರು [...]
’ಲೇಸು, ಕೊಳ್ಳದಿರುವುದೇ ಲೇಸು!’
ಶ್ರೀಕಾಂತ್ ವೆಂಕಟೇಶ್-ತಮ್ಮನ್ನ ‘ಶ್ರೀಸಾಮಾನ್ಯ’ ಅಂತ ಬಣ್ಣಿಸಿ ಕೊಳ್ಳೋದು ಇವರಿಗೆ ಖುಷಿ. ಐ ಟಿ ಕ್ಷೇತ್ರದಲ್ಲಿ ಕೆಲಸ. ‘ಬ್ಲಾಗಾಯಣ’ ಇವರ ಬ್ಲಾಗ್. ಬೆಂಗಳೂರಿನಿಂದ ಅಮೆರಿಕಾದ ಮಯಾಮಿ ಸೇರಿದವರು. ಅಮೇರಿಕಾ ಲೈಫ್ ಹೇಗಿದೆ? ಅಂತ ಕೇಳೋಕೆ ಮುನ್ನವೇ ಹೀಗಿದೆ ಅಂತ ಅವರು ಬರೆದ ಲೇಖನ ಇಲ್ಲಿದೆ.
ಅಮೆರಿಕೆಯಲ್ಲಿ ಗ್ರಾಹಕರು ವಸ್ತುಗಳನ್ನು ಕೊಳ್ಳುವಾಗ ಅತ್ಯಂತ ಒತ್ತಡಕ್ಕೆ ಒಳಗಾಗಿ ಮನೋವೈದ್ಯರ ಮೊರೆ ಹೊಕ್ಕಿದ್ದಾರಂತೆ!
ಬಹಳ ಹಿಂದೆ ನಾನು ಭಾರತದ ಒಂದು ಪತ್ರಿಕೆಯಲ್ಲಿ ಈ ವಿಷಯ ಓದಿದ ನೆನಪು.ಆಗ ನಾನು,ಇದು ಅತಿಶಯೋಕ್ತಿಯ ಮಾತು ಎಂದು ತಿಳಿದು ಮನದಲ್ಲೆ [...]
ಊರು ತಾತ
ಹೈವೇ 7
——
ಕಾಲಾನುಕ್ರಮೇಣ ಊರುತಾತ ಬಾಡತೊಡಗಿದ್ದ. ಸೂಕ್ತ ಆರೈಕೆಯಿಲ್ಲದೆ ಗೂರಲು ಅವನ ಬುಡವನ್ನೇ ಮೀಟಿಹಾಕಿತ್ತು. ಎತ್ತುಗಳನ್ನು ಕಟ್ಟಿಹಾಕುವ ಕೊಟ್ಟಿಗೆಯಲ್ಲಿ ಬಟ್ಟೆಯನ್ನೆಲ್ಲ ಬಿಚ್ಚಿಕೊಂಡು, ಕುಳಿತಲ್ಲೇ ಕುಳಿತುಕೊಂಡು ಕೂರೆಹೇನುಗಳನ್ನು ಹಾಯುತ್ತಿದ್ದ. ಬಹಳ ಪ್ರಾಯಸದಿಂದ ಕತ್ತೆತ್ತಿ ನಮ್ಮನ್ನು ನೋಡಿ ನಗಲೆತ್ನಿಸುತ್ತಿದ್ದ. ಮರದೊಳಗೆ ಸುಟ್ಟ ಬಳ್ಲಿಯಂತೆ ಕಾಣುತ್ತಿದ್ದ ಊರುತಾತನ ಮೈಯೆಲ್ಲ ಅಸಂಖ್ಯಾತ ತಿಗಣೆ, ಕೂರೆಹೇನುಗಳು ಬೀಡುಬಿಟ್ಟಿದ್ದವು. ನಮ್ಮ ಚಿಕ್ಕಮ್ಮ ಆಂಜಿನಮ್ಮ ಊರುತಾತನಿಗೆ ಕುಳಿತಲ್ಲೇ, ಮಲಗಿದಲ್ಲೇ ಸ್ನಾನ ಮಾಡಿಸಿ, ಬಟ್ಟೆಬರೆಗಳಲ್ಲಿ ಕೂರೆಹೇನುಗಳನ್ನು ಹೆಕ್ಕಿ ತೆಗೆದು, ಒಗೆದು ತೊಡಿಸುತ್ತಿದ್ದಳು.
ಭಾಗ: ಒಂಭತ್ತು
ವಿ ಎಂ ಮಂಜುನಾಥ್
ಅರಸಿ ವಂಶದ ಹಿರೀ ಹೆಣ್ಣುಮಗಳ [...]







