Archive for February 23rd, 2008
ಹ್ಯಾರಿ ಪೀಟರ್ ಮತ್ತು ಜಾಕೆಲಿನ್
ಹೈವೇ 7
——–
ಮೇರಿ ಜಾಕೆಲಿನ್ ಎಂಬ ಶ್ರೀಪೆರಂಬೂರಿನ ಹೆಣ್ಣಿನ ಜೊತೆ ಹ್ಯಾರಿ ಪೀಟರ್ ಮದುವೆ ಮದ್ರಾಸಿನಲ್ಲಿ ನಿಶ್ಚಯವಾಯಿತು. ನಮ್ಮ ಮನೆಯಲ್ಲಿ ಅಪ್ಪ, ದೊಡ್ಡಣ್ಣನನ್ನು ಬಿಟ್ಟು, ನಾನು, ಅಕ್ಕ, ಚಿಕ್ಕಣ್ಣ, ಅಮ್ಮ ಇಷ್ಟು ಜನರು ಪೀಟರ್ ಜೊತೆ ಮದ್ರಾಸಿಗೆ ಹೋದೆವು. ಅಲ್ಲೇ ಒಂದು ಚರ್ಚಿನಲ್ಲಿ ವಿವಾಹ ಸರಳವಾಗಿ ಜರುಗಿತು. ಎಲ್ಲವೂ ಸರಿಯಾಗೇ ಇತ್ತು. ತನ್ನ ಹಿರಿ ಅಕ್ಕನ ಮನೆಯಾದ ಅರಿಟಾಳ ಮನೆಯಲ್ಲಿ ಇಬ್ಬರಿಗೂ ಒಂದೇ ಬಾಳೆ ಎಲೆಯಲ್ಲಿ ಕೋಳಿ ಊಟವನ್ನು ಬಡಿಸಿದ್ದರು. ಬಿಳಿಸೀರೆ ಉಟ್ಟುಕೊಂಡು ಸುಂದರವಾಗಿ ಕಾಣುತ್ತಿದ್ದ ಜಾಕೆಲಿನ್, ಕೈ [...]
ಪ ಸ ಕುಮಾರ್ ನೀವು ನಮಗಿಷ್ಟ
ಪ ಸ ಕುಮಾರ್ ಕನ್ನಡ ಕಂಡ ಮಹತ್ವದ ಕಲಾವಿದರು. ಕೆನ್ ಕಲಾಶಾಲೆ ಹಡಪದ್ ಮುಂದಾಳ್ತನದಲ್ಲಿ ತನ್ನ ವೈಭವವನ್ನು ಮೆರೆಯುತ್ತಿದ್ದ ಕಾಲದಲ್ಲಿ ಅಲ್ಲಿಂದ ಮೂಡಿ ಬಂದವರು ಪ ಸ ಕುಮಾರ್. ಪ ಸ ಇದ್ದಲ್ಲಿ ಸದಾ ನಗೆಬುಗ್ಗೆ ಇದ್ದೇ ಇರುತ್ತದೆ. ಅವರ ವ್ಯಕ್ತಿತ್ವವೇ ಅಂತಹದ್ದು. ಸದಾ ಖುಷಿಯಾಗಿದ್ದು, ಇತರರನ್ನೂ ಖುಷಿಯಾಗಿಡುವುದು ಅವರಿಗೆ ಕುಶಿಯ ಕೆಲಸ. ಈ ಕಾರಣಕ್ಕಾಗಿಯೇ ಪ ಸ ದುಃಖದಿಂದ ಬಳಲದಂತೆ ಅವರ ಸ್ನೇಹಿತರೂ ನೋಡಿಕೊಂಡಿದ್ದಾರೆ.
ಕನ್ನಡಪ್ರಭದಲ್ಲಿ ದಶಕಗಳ ಕಾಲ ಕಲಾವಿದರಗಿದ್ದ ಪ ಸ ಈಗ ನಿವೃತ್ತರಾಗಿದ್ದಾರೆ. ಪ [...]







