Archive for February 19th, 2008
ಹಾಯ್ ಗುಜ್ಜಾರ್..
ಕನ್ನಡ ಟೈಮ್ಸ್ ನ ಬರಲಿರುವ ಸಂಚಿಕೆಯಲ್ಲಿ ಗುಜ್ಜಾರ್ ಕಂಡ ಪೆಟ್ರೋಲ್ ಪಾಲಿಟಿಕ್ಸ್
Read Full Post | Make a Comment ( None so far )ಯಾರಿಲ್ಲಿಗೆ ಬಂದವರು ಕಳೆದ ಇರುಳು?
ಫಿಡೆಲ್ ಕ್ಯಾಸ್ಟ್ರೋ ಇಂದು ಕ್ಯೂಬಾ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದಾರೆ. ಅಂಗೈ ಅಗಲ ಇರುವ ಒಂದು ದೇಶ ಅಷ್ಟು ದೊಡ್ಡ ಅಮೆರಿಕಾದ ಅಹಂಕಾರವನ್ನು ಮೆಟ್ಟಿ ನಿಂತದ್ದು ಇತಿಹಾಸ. ಈ ಇತಿಹಾಸಕ್ಕೆ ಮುಂದಡಿ ಇಟ್ಟದ್ದು ಫಿಡೆಲ್, ಚೆಗೆವಾರ ಹಾಗೂ ರೌಲ್ ಕ್ಯಾಸ್ಟ್ರೋ. ಪುಟ್ಟ ನೌಕೆ ‘ಗ್ರಾನ್ಮಾ’ ಹತ್ತಿ ಹೊರಟ ಈ ದಂಡು ನಿರ್ಮಿಸಿದ ಇತಿಹಾಸ ಒಂದು ಗಾಢ ಕತ್ತಲೆಯ ನಡುವಿನ ಪುಟ್ಟ ದೀಪದಷ್ಟೇ ದೊಡ್ಡದು.
ನಮ್ಮ ಗುಜ್ಜಾರ್ ಗೆ ಫಿಡೆಲ್ ಕಂಡರೆ ಇನ್ನಿಲ್ಲದ ಹೆಮ್ಮೆ. ಅವರು ಈ ಹಿಂದೆ ರಚಿಸಿದ ಫಿಡೆಲ್ [...]
ಲ ಬ ಸಾ- ಇದೇನಿದು ಹೊಸ ಬಸ್ಸಾ..?
‘ಲಬಸಾ’- ಇದೇನಿದು ಹೊಸದು? ಎನ್ನುವವರಿಗೆ ಇಲ್ಲಿದೆ ಉತ್ತರ. ಯಶವಂತ ಚಿತ್ತಾಲರ ‘ಲಬಸಾ’ಗಳ ಸಂಗ್ರಹ ‘ದಣಪೆಯಾಚಿನ ಓಣಿ’ಯನ್ನು ಪ್ರಿಸಂ ಹೊರತಂದಿದೆ.
ತಾನು ಕಾವ್ಯ ಬರೆಯಲು ಸಾಧ್ಯವೇ? ಎಂದು ಅನುಮಾನಗೊಂಡ ಚಿತ್ತಾಲರು ಹುಡುಕಿದ ಕಾವ್ಯ ಪೂರ್ವ ಪ್ರಯೋಗವೇ ಲ. ಬ. ಸಾ. ಅಂದರೆ ಲಯಬದ್ದ ಸಾಲುಗಳು.
‘ನಾನು ಕವಿತೆ ಬರೆಯಲಾರೆ. ಅಣ್ಣನಿಗೆ ಮೀಸಲಾದ ಕ್ಷೇತ್ರವದು. ಅಲ್ಲಿ ಕಾಲಿಡುವ ಧೈರ್ಯವಿಲ್ಲ. ಅರ್ಹತೆಯೂ ಇಲ್ಲ’ ಎಂದು ತೀರ್ಮಾನಿಸಿದ ಯಶವಂತ ಚಿತ್ತಾಲರು ಬರೆದದ್ದು ಲಬಸಾ ಗಳನ್ನು. ಅವರನ್ನೂ ಕವಿತೆಗೆ ಕೈ ಹಚ್ಚುವಂತೆ ಮಾಡಿದ್ದು ಜಯಂತ್, ಎಂ ಎಸ್ [...]
ವಿಶ್ವನಾಥರ ಪುಸ್ತಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಗಳು…
“ಗಾಳಿ ಬೆಳಕು”
ನಟರಾಜ್ ಹುಳಿಯಾರ್
ವೃತ್ತಿ ರಾಜಕಾರಣಿ ಎಚ್ ವಿಶ್ವನಾಥ್ ಬರೆದ “ಹಳ್ಳಿ ಹಕ್ಕಿಯ ಹಾಡು” ಎಂಬ ಪುಸ್ತಕ ಕೊಂಚ ಧೂಳೆಬ್ಬಿಸತೊಡಗಿದೆ. ಈ ಪುಸ್ತಕ ಕೆಲವೆಡೆ ಪ್ರಾಮಾಣಿಕವಾಗಿದೆ; ಇನ್ನು ಕೆಲವೆಡೆ ಉತ್ಪ್ರೇಕ್ಷಾಲಂಕಾರಗಳಿಂದ ತುಂಬಿದೆ. ಘಟನೆಗಳನ್ನು ತಮಾಷೆಯಾಗಿ ವರ್ಣಿಸಬಲ್ಲ ವಿಶ್ವನಾಥರ ತುಂಟತನ ಕೂಡ ಈ ಪುಸ್ತಕದಲ್ಲಿ ಎದ್ದು ಕಾಣುತ್ತದೆ. ಆದರೆ ವಿಶ್ವನಾಥ್ ತಮ್ಮನ್ನು ತಾವು ಗೇಲಿ ಮಾಡಿಕೊಂಡಾಗ ಮಾತ್ರ ತಮ್ಮ ಪಬ್ಲಿಕ್ ಇಮೇಜಿಗೆ ಹೆಚ್ಚು ಧಕ್ಕೆಯಾಗದ ಹಾಗೆ ಗೇಲಿ ಮಾಡಿಕೊಂಡಿದ್ದಾರೆ. ಎಸ್ ಎಂ ಕೃಷ್ಣರಂಥ ಕೆಲವು ರಾಜಕೀಯ ನಾಯಕರನ್ನು ತುಸು ಹೆಚ್ಚಾಗಿಯೇ [...]







