Archive for February 17th, 2008
ಮರೆಯಲಾಗದ ಚಾಪ್ಲಿನ್
ಆ ಚಾಪ್ಲಿನ್ ಮತ್ತೆ ..ಮತ್ತೆ ನೆನಪಾಗುತ್ತಿದ್ದಾನೆ. ನಗಿಸಿದ, ಕಾಡಿಸಿದ, ಅದರ ಹಿಂದೆ ಒಂದಿಷ್ಟು ಅಳಿಸಿದ, ಯೋಚಿಸುವಂತೆ ಮಾಡಿದ ಚಾಪ್ಲಿನ್ ಮತ್ತೆ ಮತ್ತೆ ನೆನಪಾಗುತ್ತಿದ್ದಾನೆ. ಈತನ ಇನ್ನಷ್ಟು ಫೋಟೋ ಗಳಿಗಾಗಿ ನಮ್ಮ ಗ್ಯಾಲರಿ ನೋಡಿ.
ಕುಂ ವೀರಭದ್ರಪ್ಪ ಚಾಪ್ಲಿನ್ ಜೀವನ ಕುರಿತು ತುಂಬಾ ಒಳ್ಳೆಯ ಪುಸ್ತಕ ಬರೆದಿದ್ದಾರೆ. ಕಾಮಧೇನು ಪ್ರಕಾಶನ ಇದನ್ನು ಬೆಳಕಿಗೆ ತಂದಿತ್ತು. ಈಗ ಕನ್ನಡ ಪುಸ್ತಕ ಪ್ರಾಧಿಕಾರ ಮರು ಮುದ್ರಿಸಿದೆ. ಓದಿ..
ಚಾಪ್ಲಿನ್
-ಕುಂ ವೀರಭದ್ರಪ್ಪ
ಕನ್ನಡ ಪುಸ್ತಕ ಪ್ರಾಧಿಕಾರ
ಕನ್ನಡ ಭವನ
ರವೀಂದ್ರ ಕಲಾಕ್ಷೇತ್ರ ಆವರಣ
ಬೆಂಗಳೂರು- ೫೬೦೦೦೧
ಕೆ ಡಿ ಶಿವಕುಮಾರ್ ಹಾತ್ಮಚರಿತ್ರೆ!
ಅಮಾಸೆ ಟೈಮ್ಸ್. ಕನ್ನಡ ಟೈಮ್ಸ್ ಪತ್ರಿಕೆಯನ್ನು ರೆಗ್ಯೂಲರ್ ಆಗಿ ಓದುವವರಿಗೆ ಈ ಅಮಾಸೆ ಟೈಮ್ಸ್ ರುಚಿ ಗೊತ್ತಿರುತ್ತದೆ. ಇದರ ಆರೋಗ್ಯಕರ ಕೀಟಲೆ ಖುಷಿ ಕೊಡುವಂಥದ್ದು. ಇದರ ರುಚಿಯನ್ನು ಅವಧಿಯ ಓದುಗರಿಗೂ ಬಡಿಸೋಣ ಎಂಬ ಆಸೆ.
* * *
ಅತ್ತ “ಕನಕನ ಕಿಂಡಿ” ಫೈಟರ್ ವಿಶ್ವನಾಥ್ ತಮ್ಮ ಮಹಾತ್ಮ ಚರಿತ್ರೇಲಿ ಎಸ್ ಎಂ ಕೃಷ್ಣ ಪಾತ್ರ ರಚಿಸಲು ಹೋಗಿ ಪದ್ಮಸ್ತ್ರೀ ಸರೋಜಾದೇವಿಯ ಪೋಷಕ ಪಾತ್ರವನ್ನೂ ಪ್ರಸ್ತಾಪಿಸಿರುವರಷ್ಟೇ? ಇದಕ್ಕೆ ಪ್ರತಿಯಾಗಿ ಕೆ ಡಿ ಶಿವಕುಮಾರ್ ಎನ್ನುವವರು ಪ್ರತ್ಯಾತ್ಮ ಚರಿತ್ರೆ ಬರೆಯಲು ರೆಡಿಯಾಗಿ [...]
ಚಾಪ್ಲಿನ್ ಬದಲಾದ!
ಇದು ಆಶ್ಚರ್ಯ, ಆದರೂ ನಿಜ…ಈ ಬ್ಲಾಗ್ ನ ಹೆಸರು ‘ಕಳ್ಳ-ಕುಳ್ಳ ಬ್ಲಾಗ್’. ಇದು ಇಬ್ಬರು ಪತ್ರಕರ್ತರು ತಮ್ಮ ಮುಂದೆ ಎದುರಾದ ವೈಚಾರಿಕ ಹಾಗೂ ಸಂವೇದನೆಯ ಏಕಾಕಿತನವನ್ನು ತೊಡೆದುಕೊಳ್ಳಲು ಮಾಡುತ್ತಿರುವ ಪ್ರಯತ್ನ. ವಿಕಾಸ್ ನೇಗಿಲೋಣಿ ಹಾಗೂ ಚೇತನ್ ನಾಡಿಗೆರ್ ಈ ಬ್ಲಾಗ್ ನ ಕಳ್ಳ ಹಾಗೂ ಕುಳ್ಳರು. ಈ ಇಬ್ಬರಲ್ಲಿ ಯಾರು ಕಳ್ಳ ಹಾಗೂ ಕುಳ್ಳ ಎಂಬುದನ್ನು ಓದುಗರೇ ನಿರ್ಧರಿಸಿಕೊಳ್ಳಲಿ ಎಂದು ಸುಮ್ಮನಾಗಿದ್ದಾರೆ. ಬ್ಲಾಗ್ ಹೆಸರು ನೋಡಿ ಇದು ಲಘುವಾದ ಬ್ಲಾಗ್ ಎಂದುಕೊಳ್ಳಬೇಡಿ ಎಂಬ ಎಚ್ಚರಿಕೆ ಯನ್ನೂ ನೀಡಿದ್ದಾರೆ. [...]
Read Full Post | Make a Comment ( None so far )






