Archive for February 15th, 2008
ಬಾಲ್ಯದಲ್ಲಿ ಕಂಡ ಕಾಮಲೋಕ
ಹೈವೇ 7
——-
ಅನಾಥವಾಗಿದ್ದ ಹಲಸಿನ ಮರ ಫಲ ನೀಡದ ಬಂಜೆಯಾಗಿ, ನೆರಳು ನೀಡುತ್ತಿದ್ದು ಆಯಿಲ್, ಗ್ರೀಸ್, ವಿಷಯುಕ್ತ ಕೆಮಿಕಲ್ ನಿಂದ ಸುಟ್ಟು ಕ್ರಮೇಣ ಯಾವುದೋ ರೋಗ ತಗುಲಿ, ಒಂದೆಲೆಯೂ ಇಲ್ಲದೆ ಆ ಹೆಣ್ಣಿನಂತಾಗಿ ಹೋಯಿತು. ನಂತರ ಅವಳ ಬಂಗಲೆ ಟ್ರಕ್ ಗ್ಯಾರೇಜ್, ಗುಜರಿ, ಪಂಕ್ಚರ್ ಶಾಪ್, ದಿಕ್ಕಿಲ್ಲದವರಿಗೆ ಗುಡಾರವಾಗಿ ನಂತರ ಸಂಪೂರ್ಣವಾಗಿ ಹೆದ್ದಾರಿಗೆ ನಿರ್ನಾಮವಾಯಿತು.
ಭಾಗ : ಏಳು
ವಿ ಎಂ ಮಂಜುನಾಥ್
ನಾನು ನನ್ನ ಬಾಲ್ಯದಲ್ಲಿ ಬಹು ಹತ್ತಿರದಿಂದ ಕಂಡ ಇಲ್ಲಿನ ಕೆಲವು ಕಾಮಧುರಂಧರೆಯರನ್ನು ನನ್ನ ನೆನಪಿನಾಳದಿಂದ ಮತ್ತೊಮ್ಮೆ ನಿಮ್ಮೆದುರಿಗೆ ಬೆತ್ತಲಾಗಿಸುವುದು [...]
ಮಹಮ್ಮದ್ ಮ್ಯಾಜಿಕ್
ಹಿಡಿಯಲ್ಲಿ ಅಗಾಧ ವಿಷಯ ಹಿಡಿದು ಕೊಡುವ ಮೊನಚು ನೋಟದ ಪಿ ಮಹಮ್ಮದ್ ಇನ್ನು ಮುಂದೆ ಅವಧಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಜಾವಾಣಿಯ ವ್ಯಂಗ್ಯಚಿತ್ರಕಾರರಾದ ಮಹಮ್ಮದ್ ಟಿ ಪಿ ಕೈಲಾಸಂ ಬಣ್ಣಿಸಿದಂತೆ
‘ಕಿರು ಆಳದ ನಗೆ ನೀರಿನ ಮೇಲೆ
ತಿರುಗುತ ಬಹುವೇಳೆ
ಕಣ್ಣೀರಿನ ಕಡಲಿನ ಪಾಲು
ಹಾಸ್ಯದ ಹರಿಗೋಲು’
ಹಿಡಿಯಬಲ್ಲವರು. ಮಹಮ್ಮದ್ ರೇಖೆಗಳು ಕಚಗುಳಿ ಇಡುತ್ತಲೆ ವಿಷಾದದ ಆಳಕ್ಕೆ ತಳ್ಳುತ್ತದೆ.
ಮಹಮ್ಮದ್ ರ ವ್ಯಂಗ್ಯಬಾಣಗಳು ಸಮಾಜವನ್ನು ಒಂದಿಷ್ಟಾದರೂ ಆರೋಗ್ಯಕರವಾಗಿಸಲಿ ಎನ್ನುವುದು ಎಲ್ಲರ ಆಶಯ. ಅದಕ್ಕೇ ಇರಬೇಕು ಮಾಧ್ಯಮ ಅಕಾದೆಮಿಯೂ ಸಹಾ ಪ್ರಶಸ್ತಿ ನೀಡಿ ಉತ್ಸಾಹ ಹೆಚ್ಚಿಸಿದೆ. ಮಹಮ್ಮದ್ ಮ್ಯಾಜಿಕ್ ಇನ್ನು [...]
ನೇರಳೆ ಮರ ಎಂಬ ರೂಪಕ
ಚಿತ್ರ: ಎಂ ಎಸ್ ಮೂರ್ತಿ
ಒಂದು ಸುಂದರ ಪುಸ್ತಕ ಕನ್ನಡ ಲೋಕಕ್ಕೆ ಸಂದಿದೆ. ಕಥೆಗಾರ ಕೇಶವ ಮಳಗಿ ಈ ಪುಸ್ತಕವನ್ನು ಕೊಟ್ಟಿದ್ದಾರೆ. ಕಥೆಗಾರ ಕಂಡ ರೂಪಕ ಲೋಕದ ಕಥನ ಮಳಗಿ ಅವರ ಕೈಚಳಕದಲ್ಲಿ ‘ನೇರಳೆ ಮರ’ ವಾಗಿದೆ. ಇಡೀ ಪುಸ್ತಕ ನೇರಳೆ ಬಣ್ಣದಲ್ಲಿದೆ ಎಂಬುದು ಇದರ ಹೆಚ್ಚುಗಾರಿಕೆ. ಬಹುಶಃ ಕನ್ನಡದಲ್ಲಿ ಈ ರೀತಿಯ ಪ್ರಯತ್ನ ಇದೆ ಮೊದಲಿರಬೇಕು. ಮಳಗಿ ಅವರ ಅಚ್ಚುಕಟ್ಟುತನ ಈ ಪುಸ್ತಕ ರೂಪಿಸುವುದರಲ್ಲಿಯೂ ಎದ್ದು ಕಾಣುತ್ತದೆ.
ಕಥನ ಪ್ರಕಾಶನದ ಪ್ರಕಾರ- ಎಂಬತ್ತರ ದಶಕದಲ್ಲಿ ಬರೆಯಲಾರಂಬಿಸಿದ ಲೇಖಕರಲ್ಲಿ [...]







